ವೃದ್ಧಾಶ್ರಮಕ್ಕೆ ಸಚಿವ ಜಾರಕಿಹೊಳಿ ಭೇಟಿ

0
68

ಬೆಳಗಾವಿ 17: ನಗರದ ದೇವರಾಜ ಅರಸ ಬಡಾವಣೆಯಲ್ಲಿರುವ ನಾಗನೂರು ಶ್ರೀ.ಶಿವಬಸವೇಶ್ವರ ಟ್ರಸ್ಟಿನ ಶ್ರೀಮತಿ ಚಿನಮ್ಮ. ಬಸವಂತಯ್ಯಾ. ಹಿರೇಮಠ ವೃದ್ಧಾಶ್ರಮಕ್ಕೆ ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ.ಜಾರಕಿಹೊಳಿ ಭೇಟಿ ನೀಡಿದರು. ವೃದ್ಧರು ವಾಸಿಸುವ ಕೊಠಡಿ, ಭೋಜನಾಲಯ ಗ್ರಂಥಾಲಯ, ಇತರ ಸೇವಾ ಸೌಲಭ್ಯಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.
ವೃದ್ಧಾಶ್ರಮದ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ. ಬಿ.ಆರ್.ಅಂಬೇಡ್ಕರವರ 125 ನೇ ಜಯಂತಿ ಅಂಗವಾಗಿ ನಗರ ಸೇವಕಿ ಸರಳಾ. ಹೆರೇಕರ ವೃದ್ಧಾಶ್ರಮಕ್ಕೆ ಕೊಡಮಾಡಿದ ಸ್ಟೂಲ್‍ಗಳನ್ನು ವಿತರಣೆ ಮಾಡಿ ಮಾತನಾಡಿ, ಸಮಾಜದಲ್ಲಿ ತೊಂದರೆಗೊಳಗಾದ ಹಿರಿಯ ನಾಗರಿಕರನ್ನು ಅತ್ಯಂತ ಪ್ರೀತಿ ವಿಶ್ವಾಸದಿಂದ ಆರೈಕೆ ಮಾಡುವ ಅಗತ್ಯತೆ ಇದೆ. ಬುದ್ಧ, ಬಸವ , ಅಂಬೇಡ್ಕರವರ ಜೀವನದಿಂದ ನಾವು ಸಾಕಷ್ಟು ಕಲಿಯಬೇಕು ಅವರ ತತ್ವಗಳು ಇಂದಿಗೂ ಪ್ರಸ್ತುತವಾಗಿದ್ದು, ದೇಶಕ್ಕೆ ಅಗತ್ಯವಾಗಿವೆ. ಶಾಂತಿ ಸಹಬಾಳ್ವೆಯಿಂದ ಪ್ರಗತಿ ಸಾಧ್ಯ ವೃದ್ಧಾಶ್ರಮದ ಅಭಿವೃದ್ಧಿಗೆ ಇನ್ನೂ ಸಹಾಯ ಮಾಡಲು ಸಿದ್ಧವೆಂದರು.
ನಗರ ಸೇವಕಿ ಸರಳಾ. ಹೆರೇಕರ, ನಿವೃತ್ತ ಪ್ರಾಚಾರ್ಯ ಜಿ.ಕೆ.ಖಡಬಡಿ, ಅಖಿಲಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕಾ ಪರಿಷತ್ ಅಧ್ಯಕ್ಷ ಬಸವರಾಜಸಸಾಲಟ್ಟಿ . ನಿವೃತ್ತ ಅಭಿಯಂತರಾದ ಹುನ್ನುಂಗಾರ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ವಿಕಾಸ.ಕಲಘಟಗಿ, ಮೋಹನ.ಗೂಂಡ್ಲೂರ, ಮುಲ್ಲಾ, ಎಸ್.ಎಸ್.ಪಟ್ಟಣ, ರಣಗಟ್ಟಿಮಠ, ದೇವರಾಜ ಅರಸ ಬಡಾವಣೆ ನಾಗರಿಕರು ಉಪಸ್ಥಿತರಿದ್ದರು. ವೃದ್ಧಾಶ್ರಮದ ಸಂಯೋಜಕ ಎಂ.ಎಸ್.ಚೌಗಲಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಪನ್ಯಾಸಕ ಕಿರಣ ಚೌಗಲಾ ಕಾರ್ಯಕ್ರಮ ನಿರೂಪಿಸಿದರು.

loading...

LEAVE A REPLY

Please enter your comment!
Please enter your name here