ವ್ಯಕ್ತಿತ್ವ ನಿರ್ಮಾಣಕ್ಕೆ ಸಂಘ ಸಂಸ್ಥೆಗಳು ಅವಶ್ಯ : ಶಿವಾನಂದ

0
61

ಕನ್ನಡಮ್ಮ ಸುದ್ದಿ- ಲೋಕಾಪೂರ
ವ್ಯಕ್ತಿಯ ವ್ಯಕ್ತಿತ್ವದ ನಿರ್ಮಾಣಕ್ಕಾಗಿ ಸಂಘ ಸಂಸ್ಥೆಗಳು ಪೂರಕ ವಾತಾವರಣ ಕಲ್ಪಿಸುತ್ತವೆ. ಮನುಷ್ಯ ಸಂಘ ಜೀವಿ ಸಂಘ ಎರಡುಂಟು ಒಂದು ಹಿಡಿ ಇನ್ನೊಂದು ಬಿಡಿ ಸಜ್ಜನರ ಸಂಘ ಹೆಜ್ಜೇನು ದುರ್ಜನರ ಸಂಘ ದುರ್ಗತಿ ಎಂದು ಬಿ.ಡಿ.ಸಿ.ಸಿ.ಬ್ಯಾಂಕ ಉಪಾಧ್ಯಕ್ಷರಾದ ಶಿವಾನಂದ ಉದಪುಡಿ ಹೇಳಿದರು.
ಸ್ಥಳೀಯ ದೇಸಾಯಿವಾಡೆ ಹತ್ತಿರ ಸಾಂಸ್ಕøತಿಕ ಭವನದಲ್ಲಿ ನಡೆದ ಮಹಾತ್ಮಾಗಾಂಧಿ ಜಯಂತಿ ಅಂಗವಾಗಿ ಅನಸಾರ ವಿವಿದ್ದೋದ್ದೇಶಗಳ ಹಾಗೂ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ಉದ್ಘಾಟನೆ ಮಾಡಿ ಮಾತನಾಡಿ ಸಂಸ್ಥೆಗಳು ಆರ್ಥಿಕವಾಗಿ ಸಬಲೀಕರಣಗೊಳ್ಳಬೇಕಾದರೆ ಎಲ್ಲರ ಸಹಾಯ ಸಹಕಾರಿ ಅವಶ್ಯ ಎಂದು ಹೇಳಿದರು. ಅತಿಥಿಗಳಾಗಿ ಆಗಮಿಸಿದ ತಾ.ಪಂ.ಸದಸ್ಯರಾದ ರಫೀಕ ಭೈರಕದಾರ ಮಾತನಾಡಿ ಸಂಸ್ಥೆಯ ಹೆಸರೆ ಹೇಳುವಂತೆ ಬಡವರಿಗೆ ಸಹಾಯ ಮಾಡುವುದು ಕುರಾನ್‍ನಲ್ಲಿ ಇದರ ಅರ್ಥ ಅನಸಾರ ಎಂದು ಸಂಸ್ಥೆಯ ಹೆಸರನ್ನು ಬಿಡಿಬಿಡಿಯಾಗಿ ವಿವರಣಿ ಮಾಡಿ ಹೇಳಿದರು. ಕಾಶಿನಾಥ ಹುಡೇದ ಮಾತನಾಡಿ, ಸಂಘ ಸಂಸ್ಥೆಗಳು ಸಾರ್ವಜನಿಕರಿಗೆ ಬಡಜನರ, ನಿರ್ಗತಿಕರ, ಕುಟೀರಗಳನ್ನು ನಡೆಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಬೇಕು ಹಾಗೂ ಎಲ್ಲ ಪಕ್ಷ ಭೇದ ತೊರೆದು ಇಂಥಹ ಸಂಸ್ಥೆಗಳಿಗೆ ಹಣಕಾಸಿನ ಸಹಾಯವನ್ನು ಎಲ್ಲರೂ ಸಹಕಾರ ನೀಡಿದರೆ ಮಾತ್ರ ಸಂಘ ಸಂಸ್ಥೆಗಳು ಉಳಿಯಲು ಸಾಧ್ಯ ಎಂದು ಹೇಳಿದರು. ಇದೇ ವೇಳೆ ಅನೇಕ ರಂಗಗಳ ಕಲಾವಿದರೂ, ಶಿಕ್ಷಣ ಪ್ರೇಮಿಗಳಿಗೆ, ಪತ್ರಕರ್ತರಿಗೆ ಸನ್ಮಾನಿಸಿದರು.
ದಿವ್ಯ ಸಾನಿಧ್ಯವನ್ನು ಬ್ರಹ್ಮಾನಂದ ಸ್ವಾಮಿಗಳು ವಹಿಸಿದರು. ಅಧ್ಯಕ್ಷತೆಯನ್ನು ಯಮನಪ್ಪ ಹೊರಟ್ಟಿ, ಲೋಕಣ್ಣ ಕತ್ತಿ, ಕಲ್ಲಪ್ಪ ಅರಮನಿ, ಸುಭಾಸ ಗಸ್ತಿ, ಸಂಗಮೇಶ ನಿಲಗುಂದ, ಅಲ್ಲಾಸಾಬ ಯಾದವಾಡ, ಜಾಕೀರ ಅತ್ತಾರ, ಮಾರುತಿ ರಂಗಣ್ಣವರ, ರವಿ ರೊಡ್ಡಪ್ಪನ್ನವರ, ವಿ.ಎನ್.ಮರಿಕಟ್ಟಿ ಹಾಜರಿದ್ದರು.
ಇದೇ ವೇಳೆ ಹಾಸ್ಯ ಜಾನಪದ ಸಂಗೀತ ಕಾರ್ಯಕ್ರಮ ಎಂ.ಡಿ.ಆನಂದ ಸಪ್ತಸ್ವರ ಜಾನಪದ ಕಲಾ ತಂಡ ಇವರಿಂದ ಜಾನಪದ ಗೀತೆ ಮತ್ತು ಚಲನಚಿತ್ರಗೀತೆಗಳ ಹಾಡಿನ ಜನರನ್ನು ರಂಜಿಸಿದರು. ಸಂಘದ ಅಧ್ಯಕ್ಷರಾದ ಸಲೀಮ ಕೊಪ್ಪದ, ಉಪಾದ್ಯಕ್ಷ ಕೃಷ್ಣಾ ಭಜಂತ್ರಿ, ಬಂದೇನವಾಜ ರಾಮದುರ್ಗ, ಹಸನಡೋಂಗ್ರಿ ಮಹಾಲಿಂಗಪೂರ, ಮೈಹಿಬೂಬ ನಧಾಪ, ಹುಸೇನಬಿ ಇ ಕೊಪ್ಪದ ಇಮಾಂಬು ಎ ಮಹಾಲಿಂಗಪೂರ ಹಾಜರಿದ್ದರು. ಕೆ.ಪಿ.ಯಾದವಾಡ ಸ್ವಾಗತಸಿದರು, ವ್ಹಿ.ಜಿ.ಭಜಂತ್ರಿ ವಂದಿಸಿದರು.

loading...

LEAVE A REPLY

Please enter your comment!
Please enter your name here