ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದ ಗಡಿ ನಾಡು ಹಿತ ರಕ್ಷಣಾ ವೇದಿಕೆ ಕಾರ್ಯಕರ್ತರು


ಚನ್ನಮ್ಮ ಕಿತ್ತೂರು ಃ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪಾಂಡುರಂಗ ನಾಯ್ಕ ಚನ್ನಮ್ಮ ಕಿತ್ತೂರಿನ ಬಸ್ ನಿಲ್ದಾಣಕ್ಕೆ ಬೇಟಿ ನೀಡಿದ ಸಮಯದಲ್ಲಿ ಗಡಿ ನಾಡು ಹೀತ ರಕ್ಷಣಾ ವೇಧಿಕೆ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಕಿತ್ತೂರು ಬಸ್ ನಿಲ್ದಾಣದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಲು ತಾವುಗಳು ಆದೇಶಿಸಿರುವದು ಸಾರ್ವಜನಿಕರ ಆರೋಗ್ಯ ದೃಷ್ಠಿಯಿಂದ ಒಳ್ಳೇಯ ಕಾರ್ಯವಾಗಿರುವದು ಆದರೆ ಶುದ್ದ ಕುಡಿಯುವ ನೀರಿನ ಘಟಕವನ್ನು ಬಸ್ ನಿಲ್ದಾಣದ ಒಳಗಡೆ ಸ್ಥಾಪಿಸಲು ಅನುಮತಿಸಿರುವದು ಬೇಸರದ ಸಂಗತಿಯಾಗಿದೆ.  ಪ್ರಯಾಣಿಕರು ಕುಳಿತುಕೊಳ್ಳುವ ಆಸನಗಳನ್ನು ತೆರೆವುಗೊಳಿಸಿ ಘಟಕವನ್ನು ಬಸ್ ನಿಲ್ದಾಣದ ಒಳಗಡೆ ನಿರ್ಮಾಣ ಮಾಡುವದರಿಂದ ಪ್ರಯಾಣಿಕರಿಗೆ ಅನಾನುಕೂಲವಾಗಿಲಿದೆ ಅಲ್ಲದೆ ಇಲ್ಲಿ ದಿನ ನಿತ್ಯ ಸಾವಿರಾರು ಶಾಲಾ ಕಾಲೇಜು ವಿಧ್ಯಾರ್ಥಿಗಳು ವಿಧ್ಯಾಬ್ಯಾಸಕ್ಕೆ ಆಗಮಿಸುವದಿರಿಂದ ಸದ್ಯ ಇರುವ ಆಸನಗಳ ಕೊರತೆಯಾಗುತ್ತದೆ. ಅಲ್ಲದೆ  ಕಿತ್ತೂರು ತಾಲೂಕು ಕೇಂದ್ರವಾಗಿರುವದರಿಂದ ಸುತ್ತಮುತ್ತಲಿನ ನೂರಾರು ಗ್ರಾಮಗಳ ಜನರು ಇಲ್ಲಿಗೆ ಆಗಮಿಸುವದರಿಂದ ಬಸ್ ನಿಲ್ದಾಣದಲ್ಲಿ ಕುಳಿತುಕೊಳ್ಳಲು ತೊಂದರೆಯಾಗಬಾರದು ಆದ ಕಾರಣ ಬಸ್ ನಿಲ್ದಾಣ ಒಳಗಡೆ ಘಟಕ ಸ್ಥಾಪಿಸದೆ ಬಸ್ ನಿಲ್ದಾಣ ಬದಿಗೆ (ಹೊರಗಡೆ ) ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು. ನಿಲ್ದಾಣದಲ್ಲಿ ಶೌಚಾಲಯ ಸಂಪೂರ್ಣ ಹಾಳಾಗಿದ್ದು ಇದನ್ನು ಹೊಸ ಶೌಚಾಲಯ ನಿರ್ಮಾಣ ಮಾಡಬೇಕು. ರಾತ್ರಿ 9 ಗಂಟೆಯಾಯಿತ್ತೆಂದರೆ ಬಸ್‍ಗಳು ನಿಲ್ದಾಣದ ಒಳಗಡೆ ಬರುವದಿಲ್ಲ. ಕುಡುಕರ ಹಾವಳಿ ಹೆಚ್ಚಾಗಿದೆ ಆದ ಕಾರಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗಡಿ ನಾಡು ಹೀತ ರಕ್ಷಣಾ ವೇಧಿಕೆ ಅಧ್ಯಕ್ಷರಾದ ಕಲ್ಲಪ್ಪ ಅಗಸಿಮನಿ, ಬಸವರಾಜ ಬಂಗಿ, ಮಲ್ಲಯ್ಯ ಹಿರೇಮಠ, ಭೀಮಪ್ಪ ಗೋೀಕಡೆಕರ, ಎಂ.ಎಂ.ರಾಜಿಬಾಯಿ, ಬಾಬು ಮೂಲಿಮನಿ ಸೇರಿದಂತೆ  ಕಾರ್ಯಕರ್ತರು ಮನವಿ ಪತ್ರ ಸಲ್ಲಿಸಿದರು

loading...