ವ್ಯವಸ್ಥಿತ ಮತದಾನಕ್ಕೆ ಸಕಲ ಸಿದ್ಧತೆ

0
9

ಹಾನಗಲ್ಲ: ಶಾಂತಿಯುತ ಮತ್ತು ವ್ಯವಸ್ಥಿತ ಮತದಾನಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ, ಸೋಮವಾರ ಮಸ್ಟರಿಂಗ್ ಕಾರ್ಯ ನಡೆಯುತ್ತದೆ ಎಂದು ತಹಶೀಲ್ದಾರ್ ಗಂಗಪ್ಪ.ಎಂ ಹೇಳಿದರು.
ಮಂಗಳವಾರ ನಡೆಯುವ ಲೋಕಸಭೆ ಚುನಾವಣೆಯ ಮತದಾನದ ಸಿದ್ಧತೆಗಳ ಬಗ್ಗೆ ರವಿವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ತಾಲೂಕಿನಲ್ಲಿ ೨೩೯ ಮತಗಟ್ಟೆಗಳಿದ್ದು, ೧೦೫೫ ಮತಗಟ್ಟೆ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದರು.
ವಿಶೇಷ ತರಬೇತಿ ಮೂಲಕ ಮತಗಟ್ಟೆ ಅಧಿಕಾರಿಗಳಿಗೆ ವ್ಯವಸ್ಥಿತ ಮತದಾನಕ್ಕೆ ಸಜ್ಜುಗೊಳಿಸಲಾಗಿದೆ, ಇಲ್ಲಿನ ಎನ್‌ಸಿಜೆ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯದ ಬಳಿಕ ಸೋಮವಾರ ಮಧ್ಯಾಹ್ನ ಸಿಬ್ಬಂದಿ ತಮ್ಮ ಮತಗಟ್ಟೆಗೆ ಮತಯಂತ್ರಗಳ ಸಮೇತ ತೆರಳಲಿದ್ದಾರೆ. ಮತದಾನದ ಬಳಿಕ ಮತಯಂತ್ರಗಳನ್ನು ಕಾಲೇಜಿನಲ್ಲಿ ಸ್ಥಾಪಿತ ಸ್ಟಾçಂಗ್‌ರೂಮ್‌ನಲ್ಲಿ ಸಂಗ್ರಹಿಸಿ, ಹಾವೇರಿಗೆ ಸಾಗಿಸಲಾಗುತ್ತದೆ ಎಂದರು.
ವೃದ್ಧರು, ಅಶಕ್ತರು, ವಿಕಲಚೇತನರಿಗೆ ಮತದಾನಕ್ಕೆ ಸಹಾಯ ಮಾಡಲು ಸ್ಕೌಟ್ಸ್, ಗೈಡ್ಸ್, ಸೇವಾದಳದ ೪೭೮ ವಿದ್ಯಾರ್ಥಿಗಳನ್ನು ನೇಮಕ ಮಾಡಲಾಗಿದೆ, ಮತದಾನ ಬಹಿಷ್ಕಾರ ಎಂದಿದ್ದ ಹಲವು ಗ್ರಾಮಗಳಲ್ಲಿ ಬಹಿಷ್ಕಾರ ಹಿಂದಕ್ಕೆ ಪಡೆಯಲಾಗಿದೆ ಎಂದರು.
ಶಾಂತಿ ಕಾಪಾಡಲು ೧೪ ಸೆಕ್ಟರ್ ಪೊಲೀಸ್ ತಂಡ ರಚಿಸಲಾಗಿದೆ, ೪೫೫ ಪೊಲೀಸ್, ೮೦ ಸಿಆರ್‌ಪಿಎಫ್ ಭದ್ರತೆ ವ್ಯವಸ್ಥೆಗೆ ನೇಮಕವಾಗಿದೆ, ೧೦೪ ಜನರಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಮುಚ್ಚಳಿಕೆ ಪಡೆದು, ಶಾಂತಿ ಕದಡದಂತೆ ಆದೇಶಿಸಲಾಗಿದೆ ಎಂದು ಗಂಗಪ್ಪ.ಎಂ ವಿವರಿಸಿದರು.
ಸಹಾಯಕ ಚುನಾವಣಾಧಿಕಾರಿ ಮಂಜುನಾಥ.ಬಿ, ವೃದ್ಧರು, ವಿಕಲಚೇತನರನ್ನು ಮತಗಟ್ಟೆಗೆ ಕರೆ ತರಲು ಸ್ಥಳೀಯರ ಟ್ರೆöÊಸಿಕಲ್ ಬಳಸಿಕೊಳ್ಳಲಾಗುತ್ತಿದೆ ಎಂದರು.
ತಾಲೂಕು ಸ್ವಿÃಪ್ ಅಧಿಕಾರಿ ಚನ್ನಬಸಪ್ಪ ಹಾವಣಗಿ ಮಾತನಾಡಿ, ತಾಲೂಕಿನಲ್ಲಿ ಸ್ವಿÃಪ್ ಪರಿಣಾಮಕಾರಿಯಾಗಿ ಜಾರಿಗೊಂಡಿದೆ, ಮತದಾನ ಪ್ರಮಾಣ ಹೆಚ್ಚಳದ ಲಕ್ಷಣಗಳಿವೆ ಎಂದರು.
ಸಖಿ ಮತಗಟ್ಟೆ: ಪಟ್ಟಣದ ಮತಗಟ್ಟೆ ಸಂಖ್ಯೆ ೯೭ ಮತ್ತು ಕಲ್ಲಾಪೂರ ಗ್ರಾಮದ ಮತಗಟ್ಟೆ ೧೬೧ ಸಖಿ ಮತಗಟ್ಟೆಯಾಗಿ ರಚಿಸಲಾಗಿದೆ, ಅಕ್ಕಿಆಲೂರ ಮತಗಟ್ಟೆ ಸಂಖ್ಯೆ ೧೨೨ ಮಾದರಿ ಮತಗಟ್ಟೆಯಾಗಿ ಪರಿವರ್ತಿಸಲಾಗಿದೆ ಎಂದು ಮಂಜುನಾಥ.ಬಿ ಹೇಳಿದರು.
ಬಳಿಕ ಪಟ್ಟಣದ ಜನತಾ ಬಾಲಿಕೆಯರ ಪ್ರೌಢಶಾಲೆಯ ಕೊಠಡಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸಖಿ ಮತಗಟ್ಟೆಯ ಸಿದ್ಧತೆಗಳನ್ನು ಅಧಿಕಾರಿಗಳು ಪರಿಶೀಲಿಸಿದರು. ಪುರಸಭೆ ಮುಖ್ಯಾಧಿಕಾರಿ ಎಂ.ಆರ್.ಮಹಾಜನ್, ಎಂಜನಿಯರ್ ನಾಗರಾಜ ಮಿರ್ಜಿ, ಸಿದ್ಧನಗೌಡ್ರ ಇದ್ದರು.

loading...