ಶಾಂತಿಯುತವಾಗಿ ನಡೆದ ಪ್ರತಿಭಟನೆ

0
12

ಶಾಂತಿಯುತವಾಗಿ ನಡೆದ ಪ್ರತಿಭಟನೆ

ಕನ್ನಡಮ್ಮ ಸುದ್ದಿ-ಸವದತ್ತಿ : ಕಾಂಗ್ರೆಸ್ ಸರಕಾರವು ಬಂದ್ ಕರೆ ನೀಡಿದ ಹಿನ್ನಲೆಯಲ್ಲಿ ಬಂದ್ ಕರೆಗೆ ಮಿಶ್ರ ಪ್ರತಿಕ್ರಿಯೆ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಪ್ರತಿಕ್ರಿಯೆಸಿದ್ದು, ಪಟ್ಟಣದಲ್ಲಿ ಅಂಗಡಿ ಮುಗ್ಗಟ್ಟುಗಳು ಎಂದಿನಂತೆ ತಮ್ಮ ವ್ಯಾಪಾರಗಳನ್ನು ನಡೆಸಿದ್ದವು. ಪ್ರತಿಭಟನೆ ವೇಳೆಯಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಸರಕಾರಿ ಇಲಾಖೆಗಳೂ ಸಹ ಎಂದಿನಂತೆ ಕಾರ್ಯನಿರ್ವಹಿಸಿದವು. ಶಾಲಾ ಕಾಲೇಜುಗಳ ಮಾತ್ರ ಬಂದ್ ವಾಗಿದ್ದವು. ಪ್ರತಿಭಟನೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ. ಪ್ರತಿಭಟನೆ ಶಾಂತಿಯುತವಾಗಿ ನಡೆಯಿತು.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ೧೦ ಸೋಮವಾರ ರಂದು ಪಟ್ಟಣದ ಎ.ಪಿ.ಎಮ್.ಸಿ. ಕ್ರಾಸ್ ಹತ್ತಿರ ಪ್ರತಿಭಟನೆ ನೆಡೆಸಿ ರಸ್ತೆ ಸಂಚಾರ ಸ್ಥಗಿತಗೊಳಿಸಿದ್ದರು. ಈ ಪ್ರತಿಭಟನೆಯಲ್ಲಿ ಅಟೋ ಚಾಲಕರು ಮತ್ತು ಮಾಲೀಕರು, ಜೈ ಕರ್ನಾಟಕ ಸಂಘಟನೆಯವರು ಪಾಲ್ಗೊಂಡಿದ್ದರು. ಪ್ರತಿಭಟನೆ ವೇಳೆಯಲ್ಲಿ ಮಾತನಾಡಿದ ಕಾಂಗ್ರೆÃಸ್ ಪಕ್ಷದ ಮುಖಂಡ ವಿಶ್ವಾಸ ವೈದ್ಯ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ವಹಿಸಿಕೊಂಡು ಬಡ ಜನರಿಗೆ ಯಾವುದೇ ಸೌಲಭ್ಯಗಳು ಸಿಗದಂತೆ ಮಾಡಿದ್ದಾರೆ. ಇಂಧನ ಬೆಲೆ ಏರಿಕೆಯಿಂದ ಬಡಜನರಿಗೆ ತೊಂದರೆಯಾಗಿದೆ ಎಂದರು.
ಅದೇ ರೀತಿಯಾಗಿ ಇನ್ನೊÃರ್ವ ಕಾಂಗ್ರೆÃಸ್ ಪಕ್ಷದ ಮುಖಂಡರಾದ ಆನಂದ ಚೋಪ್ರಾರವರು ಮಾತನಾಡಿ ಕೇಂದ್ರ ಸರಕಾರವು ಬಡವರಿಗೆ ಅನ್ಯಾಯ ಮಾಡುತ್ತಿದೆ. ಪೆಟ್ರೊÃಲ್ ಡೀಜೆಲ್ ಮತ್ತು ಸಿಲಿಂಡರ ಬೆಲೆ ಏರಿಕೆಯಿಂದ ಜಡಜನರಿಗೆ ಬಹಳಷ್ಟು ತೊಂದರೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ಗದ್ದುಗೆ ಏರಿ ಮನಬಂದಂತೆ ಅಧಿಕಾರ ನಿರ್ವಹಿಸುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ನಾವು ಉಗ್ರವಾಗಿ ಪ್ರತಿಭಟಿಸುತ್ತೆÃವೆ. ಮತ್ತು ಸವದತ್ತಿ ತಾಲೂಕಿನಲ್ಲಿ ರೈತರು ಬೆಳೆದಿರುವ ಕಡಲೆ ಮತ್ತಿತರ ಬೆಳೆಗಳನ್ನು ಶಾಸಕರು ಮುಂದಾಳತ್ವ ವಹಿಸಿ ಸರಕಾರದಿಂದ ಖರೀದಿಸುವಂತೆ ಮಾಡಬೇಕು ಎಂದರು.
ಪಂಚನಗೌಡ ದ್ಯಾಮನಗೌಡ್ರ ಮಾತನಾಡಿ ರಾಜ್ಯದ ರೈತರು ತಮ್ಮ ಪ್ರಾಣವನ್ನೆÃ ಕಳೆದುಕೊಳ್ಳುತ್ತಿದ್ದಾರೆ ಇದರ ಬಗ್ಗೆ ಕೇಂದ್ರ ಸರಕಾರ ಕಾಳಜಿ ವಹಿಸುತ್ತಿಲ್ಲ. ರಾಜ್ಯ ಸರಕಾರ ರೈತರ ಬಗ್ಗೆ ಕಾಳಜಿ ವಹಿಸಿಲ್ಲ ಅನೇಕ ಯೋಜನೆಗಳನ್ನು ಜಾರಿಗೆ ಮಾಡಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಆರ್.ವ್ಹಿ. ಪಾಟೀಲ, ಕೆ.ಕೆ. ಪುಣೇದ, ಎಸ್.ಆರ್. ಪಾಟೀಲ, ರವೀಂದ್ರ ಯಲಿಗಾರ, ಆರ್.ಬಿ. ಶಂಕರಗೌಡ್ರ, ಮಹಾಬಳೇಶ್ವರ ಪುರದಗುಡಿ, ಸದಾಶಿವ ಎಸ್. ಕೌಜಲಗಿ, ಉಮೇಶ ಬಾಳಿ, ಜಿ.ಪಂ ಸದಸ್ಯ ಪಕೀರಪ್ಪ ಹದ್ದನ್ನವರ, ಮಹಾದೇವ ಕಿಚಡಿ, ಡಿ.ಡಿ. ಟೋಪೋಜಿ, ಅಮೀರಗೋರಿನಾಯ್ಕ, ಬಾಪು ಚೂರಿಖಾನ, ಉಮೇಶ ಗೌಡರ, ಬಸವರಾಜ ಗುರನ್ನವರ, ಸುರೇಶ ಪೂಜಾರ ಸೇರಿದಂತೆ ಮತ್ತಿತರ ಕಾಂಗ್ರೆÃಸ್ ಪಕ್ಷದ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನೆಯ ಮೆರವಣಿಗೆಯಲ್ಲಿ ಕಾಂಗ್ರೆÃಸ್ ಪಕ್ಷದ ಮುಖಂಡರು ಚಕ್ಕಡಿಯ ಮೇಲೆ ನಿಂತು ಘೋಷನೆ ಕೂಗುತ್ತ ಪ್ರತಿಭಟನೆಯನ್ನು ಪ್ರಾರಂಭಿಸಿದರು. ಎ.ಪಿ.ಎಮ್.ಸಿ. ಕ್ರಾಸದಿಂದ ಪ್ರಾರಂಭವಾಗಿ ಕಡಕೋಳ ಬ್ಯಾಂಕ ಸರ್ಕಲ್ ಆನಿ ಅಗಸಿ, ಗಾಂಧಿಚೌಕ, ಎಸ್.ಎಲ್.ಎ.ಒ. ಕ್ರಾಸ್ ಮುಖಾಂತರ ತಹಶೀಲ್ದಾರ ಕಾರ್ಯಾಲಯಕ್ಕೆ ತೆರಳಿ ತಹಶೀಲ್ದಾರ ಗಿರೀಶ ಸ್ವಾದಿಯವರಿಗೆ ಮನವಿ ಸಲ್ಲಿಸಲಾಯಿತು. ನಂತರ ಪ್ರತಿಭಟನೆಯು ಸಮಾಪ್ತಿಗೊಂಡಿತು.

loading...