ಶಾಂತಿ ನೆಮ್ಮದಿ ಸಮಾಜಕ್ಕೆ ಕೀರಿಟ: ಗಡಾದಿ

0
30

ಅರಟಾಳ 29: ಸಮಾಜದಲ್ಲಿ ಕೇವಲ ಪೊಲೀಸ್ ಇಲಾಖೆಯಿಂದ ಶಾಂತಿ ನೆಮ್ಮದಿ ಕೊಡಲು ಸಾಧ್ಯವಿಲ್ಲಾ. ಸಮಾಜವೇ ಪೊಲೀಸ್ ಇಲಾಖೆಯಾದರೆ ಶಾಂತಿ ನೆಮ್ಮದಿ ಎನ್ನುವುದು ಸಮಾಜಕ್ಕೆ ಕೀರಿಟವಿದಂತೆ. ಅದನ್ನು ಸಮಾಜದ ಪ್ರತಿಯೊಬ್ಬ ವ್ಯಕ್ತಿ ಪಾಲಿಸುವುದರಿಂದ ಕೋಮು ಸೌಹಾರ್ದತೆ ಸಾದ್ಯೆವೆಂದು ಜಿಲ್ಲಾ ಹೆಚ್ಚುವರಿ ಪೋಲಿಸ ವರಿಷ್ಠಾಧಿಕಾರಿ ರವೀಂದ್ರ ಗಡಾದಿ ಹೇಳಿದರು.
ಅವರು ಸಮೀಪದ ಬಾಡಗಿ ಗ್ರಾಮದಲ್ಲಿ ಸಾಮಾಜಿಕ ಪರಿವರ್ತನಾ ಸಾಧಕರ ಸವಿನೆನಪಿಗಾಗಿ ಕೋಮು ಸೌಹಾರ್ದತಾ ವೇದಿಕೆ ಹಾಗೂ ದಲಿದ ಸಂಘರ್ಷ ಸಮಿತಿ ಹಮ್ಮಿಕೊಂಡ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ ಸಮಾಜದಲ್ಲಿ ಇಂದು ಮೋಸದ ಪ್ರಭಾವ ಹೆಚ್ಚುತ್ತಿದು ಸಮಾಜದ ದಿಕ್ಕು ತಪ್ಪಿಸುತ್ತಿವೆ. ಸುಳ್ಳು ಮೋಸದ ಕರೆಗಳು, ಹಣವಂಚನೆ ಮಾಡುತ್ತಿದು ಸಮಾಜದಲ್ಲಿಂದು ನೌಕರಿ ಕೊಡಿಸುವುದಾಗಿ ವಂಚಿಸುವರ ಸಂಖ್ಯೆ ಹೆಚ್ಚುತ್ತಿದು ಇದರಿಂದ ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕು. ಎಲ್ಲಿಯವರೆಗೆ ಮೋಸ ಹೋಗುವವರು ಇರುತ್ತಾರೋ ಅಲ್ಲಿಯವರೆಗು ಮೋಸ ಮಾಡುವವರು ಇರುತ್ತಾರೆ. ಸದ್ಯೆ ಜಾಗೃತಿ ಸಮಾಜದ ಅವಶ್ಯ ಕತೆಯಿದೆ. ಒಂದು ಕುಟುಂಬದ ಎಳ್ಗೆಯಾಗಬೇಕಾದರೆ ಸ್ತ್ರೀ ಜವಾಬ್ದಾರಿ ಬಹಳಷ್ಟಿದೆ. ಪರಿವರ್ತನೆ ಮಾಡುವ ಕೆಲಸ ಮಹಿಳೆಯಿಂದ ಸಾಧ್ಯ. ಮೋಟರ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೇಟ ಧರಿಸಬೇಕು ಇದರಿಂದ ಪ್ರಾಣ ರಕ್ಷಣೆ ಸಾಧ್ಯವೆಂದು ಹೇಳಿದರು.
ಪ್ರಾಸ್ತಾವಿಕವಾಗಿ ಬೆಳಗಾವಿ ಜಿಲ್ಲಾ ಡಿಎಸ್‍ಎಸ್ ಸಂಚಾಲಕ ಸಂಜು ತಳವಲಕರ ಮಾತನಾಡಿ ಶಿಕ್ಷಣ, ಸಮಾನತೆ, ಸಹಕಾರ ಪ್ರತಿಯೊಬ್ಬರಲ್ಲಿ ಇರಬೇಕು. ಅಂದು ಸ್ತ್ರೀಗೆ ಸಂಪೂರ್ಣ ಪ್ರಾಶಸ್ಥ ಕೊಟ್ಟ ಧೀರ ಮಹಿಳೆ ಸಾವಿತ್ರಿಬಾಯಿ ಪುಲೆ. ಬುದ್ದ, ಬಸವ, ದಾಸರು, ಅಂಬೇಡ್ಕರ ಹಲವು ಸಮಾಜ ಸುಧಾರಕರು ಹಿಂದಿನ ಮೌಡ್ಯೆತೆ ತೊಲಗಿಸಿ ಶ್ರೇಷ್ಟ ಸಮಾಜ ಕಟ್ಟಲು ಪ್ರಯತ್ನಿಸಿದಾರೆ. ಇಂದು ಜಾತಿ ಮತ ಪಂತವೆನ್ನದೆ ಮನುಕುಲ ನಿರ್ಮಾಣವಾಗಬೇಕು ಅಂದಾಗ ಅಂದು ಕಂಡಿರುವ ಮಹಾನೀಯರ ಕನಸು ನನಸಾಗಿಸಲು ಸಾಧ್ಯವೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಹೆಚ್ಚುವರಿ ಪೋಲಿಸ ವರಿಷ್ಠಾಧಿಕಾರಿಗಳಾದ ರವೀಂದ್ರ ಗಡಾದಿ ಅವರಿಗೆ ಹಲವು ಸಂಘಟನೆಗಳು ಸತ್ಕರಿಸಿದರು. ಹಾಗೂ ಅಥಣಿ ತಾಲೂಕಿಗೆ ದ್ವಿತೀಯ ಪಿಯು ಪರಿಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತ್ತು.
ಕಾರ್ಯಕ್ರಮದಲ್ಲಿ ಅಥಣಿ ಪೋಲಿಸ ವಿಭಾಗಾಧಿಕಾರಿ ಸತೀಶ ಚಿಟಗೂಪ್ಪಿ, ಪೋಲಿಸ ವೃತ್ತ ನೀರಿಕ್ಷಕ ರಾಜಶೇಖರ ಬಡೇದೆಸಾರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಆರ್ ಎನ್ ಬಂಗಾರೆಪ್ಪನವರ, ಗ್ರಾಪಂ ಅದ್ಯಕ್ಷೆ ಶಾಲವ್ವ ಹುದ್ದಾರ, ಪಿಎಸ್‍ಐ ಎನ್ ಬಿ ಶಿವೂರ, ಮಾಜಿ ತಾಪಂ ಸದಸ್ಯ ಮಲ್ಲಪ್ಪ ಡಂಗಿ, ಕಾಸಪ್ಪ ಗಡಾದಿ, ಮನೋಹರ ಸಾಳುಂಕೆ, ಶಾಮಲಾ ಗಡದೆ, ಸಾಬು ತೇಲಿ, ಬಿ ಆರ್ ಡಂಗಿ, ರಾಮಚಂದ್ರ ಬಿಜ್ಜರಗಿ, ಗೋರಕನಾಥ ಮಮದಾಪೂರ, ಸಂಗಪ್ಪ ಬಿರಾದಾರ, ಮನೋಹರ ಜಂಬಗಿ, ಸಿದ್ದು ಜೋಗಾನಿ, ಸಿದ್ದು ಹಳ್ಳಿ, ರಾಮಪ್ಪ ಬಂಡಾರಿ, ಶಬ್ಬಿರ ಸಾಥಬಚ್ಚೆ, ಕೂಮಾರ ಬಣಸೋಡೆ, ಪ್ರಶಾಂತ ಕಾಂಬಳೆ, ಕುಮಾರ ಶಿಂಗೆ,ಶೆಟ್ಟೆಪ್ಪ ಕಾಂಬಳೆ, ಎಕನಾಥ ಕಾಂಬಳೆ, ರಾಜು ಕಾಂಬಳೆ, ಸದಾಶಿವ ಬಗಳಿ, ರಾಮಪ್ಪ ಹೂನ್ನುರ ಗ್ರಾಮಸ್ಥರು ಉಪಸ್ಥಿತರಿದರು.
ಬಿ ಕೆ ಮುಧೋಳ ಸ್ವಾಗತಿಸಿ. ಬೆಳಗಾವಿ ವಿಭಾಗಿಯ ಸಂಚಾಲಕ ಶಶಿ ಸಾಳವೆ ನಿರೂಪಿಸಿ ವಂದಿಸಿದರು.
ಪೋಟೋ ಶಿರ್ಷಿಕೆ ; ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ರವೀಂದ್ರ ಗಡಾದಿ ಮಾತನಾಡುತ್ತಿರುವುದು.

loading...

LEAVE A REPLY

Please enter your comment!
Please enter your name here