ಶಾಲಾ ಸಂಸತ್ತು ರಚನೆ

0
179

ಖಾನಾಪುರ 23: ತಾಲೂಕಿನ

ಗಂದಿಗವಾಡ ಗ್ರಾಮದ ಜ್ಞಾನಜ್ಯೌತಿ

ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ

ಮಹಾವಿದ್ಯಾಲಯದ ಶೈಕ್ಷಣಿಕ

ಚಟುವಟಿಕೆಗಳ ಉದ್ಘಾಟನೆ ಹಾಗೂ

ನೂತನ ಶಾಲಾ ಸಂಸತ್ತು ಇತ್ತೀಚೆಗೆ ರಚನೆ

ಯಾಯಿತು. ಭಾಗ್ಯಜ್ಯೌತಿ ಅರ್ಬನ್

ಕ್ರೆಡಿಟ್ ಸೊಸೈಟಿಯ ಅಧ್ಯಕ್ಷರಾದ

ಅಶೋಕ ಮೂಲಿಮನಿ ಇವರು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅಶೋಕ

ಮೂಲಿಮನಿ, ಜ್ಞಾನಜ್ಯೌತಿ ಪಿ.ಯೂ. ಕಾಲೇಜ್ ಕಳೆದ

ವಂಷಂಜ ದ್ವಿತೀಯ ಪಿ.ಯೂ.ಸಿ. ಫಲಿತಾಂಶದಲ್ಲಿ ಇಡೀ

ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದು ಹೆಮ್ಮೆಯ ವಿಷಯ

ಎಂದರು. ವಿದ್ಯಾರ್ಥಿಗಳು ತಮ್ಮ ಕರ್ತವ್ಯ ಅರಿತು ಓದಿನಲ್ಲಿ

ತೊಡಗಿಕೊಂಡರೆ ತಮ್ಮ ತಮ್ಮ ಜೀವನವನ್ನು

ರೂಪಿಸಿಕೊಳ್ಳುವುದರ ಜೊತೆಗೆ ಎತ್ತರಕ್ಕೆ ಏರಬಲ್ಲರು

ಇದರೊಂದಿಗೆ ಸಂಸ್ಥೆಗೂ ಒಳ್ಳೆಯ ಹೆಸರು ತರಬಲ್ಲರು

ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಿ.ವಾಯ್.

ಗಡಕರಿ, ಬಿ.ಎಚ್.ಬಾಗವಾನ, ಎ.ಬಿ. ಖಾತಗಾರ,

ಕೆ.ಡಿ.ನಾವಲಗಿ, ಆರ್.ಆಯ್.ದೇಗಾಂವಿ, ಪಿ.ಬಿ.ಹಿತ್ತಲಕೇರಿ,

ಎನ್.ಎ.ಖಾತಗಾರ, ಎನ್.ಆಯ್.ಮೂಲಿಮನಿ, ಕಾಲೇಜ್ನ

ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ಕು.ರೇಣುಕಾ ಕುರುಬರ

ಸ್ವಾಗತಿಸಿದರು, ಕು.ಗಂಗಾಕ್ಷತಾ ಹಿರೇಮಠ ನಿರೂಪಿಸಿದರು.

ಕು.ಸವಿತಾ ನಂದೇಳಕರ ವಂದಿಸಿದರು,

loading...

LEAVE A REPLY

Please enter your comment!
Please enter your name here