ಶಾಸಕ ಬಿ.ಸಿ.ಪಾಟೀಲರಿಗೆ ಸನ್ಮಾನ

0
12

ಹಿರೇಕೆರೂರ: ತಾಲೂಕು ಭೋವಿ (ವಡ್ಡರ) ಸಮಾಜದಿಂದ ಶಾಸಕ ಬಿ.ಸಿ.ಪಾಟೀಲರಿಗೆ ಇತ್ತೀಚಿಗೆ ಪಟ್ಟಣದಲ್ಲಿ ಸನ್ಮಾನಿಸಲಾಯಿತು.
ಸಮಾಜದ ಕಾರ್ಯದರ್ಶಿ ದುರ್ಗಪ್ಪ ನೀರಲಗಿ ಮಾತನಾಡಿ, ತಾಲೂಕಿನಲ್ಲಿರುವ ಜೀವನ ನಡೆಸುತ್ತಿರುವ ಭೋವಿ ಸಮಾಜದವರು ಅತಿ ಹಿಂದುಳಿದಿದ್ದು, ಅವರಿಗೆ ಸರ್ಕಾರದಿಂದ ಹೆಚ್ಚಿನ ಸೌಲಭ್ಯ ದೊರಕಿಸಲು ಶಾಸಕರು ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು.
ಸನ್ಮಾನ ಸ್ವಿಕರಿಸಿ ಮಾತನಾಡಿದ ಶಾಸಕ ಬಿ.ಸಿ.ಪಾಟೀಲ ನನ್ನ ಅವಧಿಯಲ್ಲಿ ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯವನ್ನು ಪ್ರಾಮಾಣಿಕವಾಗಿ ಕಡುಬಡವರಿಗೆ, ಅರ್ಹ ಫಲಾನುಭವಿಗಳಿಗೆ ತಲುಪಿಸಲು ಹೆಚ್ಚಿನ ನಿಗಾವಹಿಸಲಾಗುವುದು ಎಂದರು.
ಸಮಾಜದ ಮುಖಂಡ ಹನುಮಂತಪ್ಪ ಪೂಜಾರ ಅಧ್ಯಕ್ಷತೆ ವಹಿಸಿದ್ದರು.
ಎಪಿಎಂಸಿ ಉಪಾಧ್ಯಕ್ಷ ಭೂತಲಿಂಗಪ್ಪ ಅಬಲೂರ, ಮುಖಂಡರಾದ ಕುಬೇರಪ್ಪ ಬಸಾಪುರ, ಕೆಂಚಪ್ಪ ಬತ್ತಿಕೊಪ್ಪ, ಹನುಮಂತಪ್ಪ ನಿಡನೇಗಿಲು, ಭರಮಪ್ಪ ಗೊಡಚಿಕೊಂಡ, ಪರಶುರಾಮ್‌ ಶಿತಿಕೊಂಡ, ವಿನಾಯಕ ಯತ್ತಿನಹಳ್ಳಿ, ಪ್ರವೀಣ ಯತ್ತಿನಹಳ್ಳಿ ಹಾಗೂ ಮತ್ತಿತರರು ಇದ್ದರು.

loading...