ಶಾಸಕ ಮಂಕಾಳ ವೈದ್ಯರಿಗೆ ಬೆಂಬಲ ಘೋಷಣೆ

0
61

ಕನ್ನಡಮ್ಮ ಸುದ್ದಿ-ಭಟ್ಕಳ : ಈ ಬಾರಿ ಭಟ್ಕಳ ವಿಧಾನ ಸಭಾ ಚುಣಾವಣೆ ವೇಳೆ ಭಟ್ಕಳ ಮುಸ್ಲಿಂ ಸಂಸ್ಥೆ ಮಜ್ಲಿಸೆ ಇಸ್ಲಾಂ ಓ ತಂಝೀಮ ಹಾಲಿ ಶಾಸಕ ಮಂಕಾಳ ವೈದ್ಯರಿಗೆ ಬೆಂಬಲ ನೀಡುವುದಿಲ್ಲ ಎಂಬ ಸಾರ್ವಜನಿಕ ಉಹಾಪೋಹಗಳಿಗೆ ತಂಝೀಂ ನಿನ್ನೆ ನಡೆದ ಸಭೆಯಲ್ಲಿ ತಮ್ಮ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆ ಎಂದು ಘೋಷಿಸುವುದರ ಮೂಲಕ ಎಲ್ಲಾ ಉಹಾಪೋಹಗಳಿಗೆ ತೆರೆ ಎಳೆಯಿತು.
ಕಳೆದ ವಿಧಾನ ಸಭಾ ಚುಣಾವಣೆಯಲ್ಲಿ ತಂಝೀಂ ತಮ್ಮ ಸಮುದಾಯವರಾದ ಇನಾಯಿತುಲ್ಲಾ ಶಾಬಂದ್ರಿಯನ್ನು ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಸಿ ಅದೃಷ್ಠ ಪರೀಕ್ಷೆ ಮಾಡಿ ಸೋತಿತ್ತು. ಇನ್ನೋಂದು ಕಡೆಯಲ್ಲಿ ಕಾಂಗ್ರೆಸ್‍ನಿಂದ ತಂಝೀಂ ಅಧ್ಯಕ್ಷ ಮುಜಾಮಿಲ್‍ರವರಿಗೆ ಟಿಕೇಟ್ ನೀಡಬೇಕು. ಒಂದೊಮ್ಮೆ ಟಿಕೇಟ್ ನೀಡದೇ ಇದಲ್ಲಿ ಬೇರೆ ಪಕ್ಷವನ್ನು ಬೆಂಬಲಿಸಿ ಕಾಂಗ್ರೆಸನ್ನು ಸೋಲಿಸುತ್ತೇವೆ ಎಂಬ ಸಂದೇಶವನ್ನು ಕೂಡ ಕಾಂಗ್ರೆಸ್ ಪಕ್ಷಕ್ಕೆ ರವಾನೆ ಮಾಡಿತ್ತು.
ತಂಝೀಂ ಸಭೆಯಲ್ಲಿ ನಡೆದ ಕೋಲಾಹಲ ಕಣದಿಂದ ಹಿಂದಕ್ಕೆ ಸರಿದ ಇನಾಯಿತುಲ್ಲಾ : ನಿನ್ನೆ ಬೆಳಿಗ್ಗೆ ನಡೆದ ತಂಝಿಂ ಸಭೆಯಲ್ಲಿ ಇನಾಯಿತುಲ್ಲಾ ಶಾಬಂದ್ರಿಯವರು ತಮಗೆ ಈ ಸಾರಿ ಬೆಂಬಲ ನೀಡಿದರೆ ಗೆಲವು ಖಚಿತ ಎಂದು ಸಭೆಗೆ ತಿಳಿಸಿದರಾದರೂ ತಂಝೀಂ ಕಾರ್ಯಕಾರಣಿ ಸಮಿತಿ ಇವರ ಮಾತಿಗೆ ವಿರೊಧ ವ್ಯಕ್ತಪಡಿಸಿ ಈ ಬಾರಿ ಜೆಡಿಎಸ್‍ಗೆ ತಂಝೀಂ ಬೆಂಬಲಿಸಿದರೆ ಬಿಜೆಪಿ ಗೆಲುವು ಖಚಿತ ಎಂದು ಕೆಲವರು ವಾದಿಸಿದರು. ನಮಗೆ ವ್ಯಕ್ತಿ ಮುಖ್ಯವಲ್ಲ ಪಕ್ಷ ಮುಖ್ಯ ಶಾಸಕ ಮಂಕಾಳ ವೈದ್ಯ ತಂಝೀಂ ವಿರೋಧ ಕಟ್ಟಿಕೊಂಡಿರಬಹುದು ಆದರೆ ಅಭೀವೃದ್ದಿಯಲ್ಲಿ ಭಟ್ಕಳ ಕ್ಷೇತ್ರದಲ್ಲಿ ಉತ್ತಮ ಹೆಸರು ಮಾಡಿದ್ದಾರೆ. ಇದಾದ ನಂತರ ಸಂಜೆ ಐದು ಗಂಟೆಗೆ ಶಾಸಕ ಮಂಕಾಳ ವೈದ್ಯರನ್ನು ಕರೆಯಿಸಿ ಸಭೆ ನಡೆಸಿದ ತಂಝೀ ತಮ್ಮ ನಡೆಯನ್ನು ಅವರಿಗೆ ತಿಳಿಸಿ ಹಿಂದೆ ಆದದೆಲ್ಲಾ ಮರೆತು ಮುಂದೆ ತಂಝೀಂ ಸಂಸ್ಥೆ ನಿಷ್ಠರಾಗಿ ಇರುವಂತೆ ತಿಳಿಸಿದರೆನ್ನಲಾಗುತ್ತಿದೆ. ತಂಝೀಂ ಸಭೆ ನಡೆಸಿ ಹೋರ ಬಂದ ಶಾಸಕ ಮಂಕಾಳ ವೈದ್ಯರನ್ನು ನೂರಾರು ಮುಸ್ಲಿಂ ಯುವಕರು ಮುತ್ತಿಗೆ ಹಾಕಿ ಅಭಿನಂದಿಸುತ್ತಾ ತಮ್ಮ ಸಂಪೂರ್ಣ ಬೆಂಬಲ ತಮಗೆ ಎಂದು ತಿಳಿಸಿದರು.

loading...