ಶಾಸಕ ರಮೇಶ ಮತಯಾಚನೆ

0
34

ಸಿಂದಗಿ: ಕಳೆದ ಹತ್ತು ವರ್ಷದ ಅವಧಿಯಲ್ಲಿ ಸರಕಾರದ ಅನೇಕ ಜನಪರ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ಮುಟ್ಟಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ಅವರು ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮನೆ ಮನೆ ಪಾದಯಾತ್ರೆ ಕೈಗೊಂಡು ಮತಯಾಚಿಸಿ ಮಾತನಾಡುತ್ತಿದ್ದರು. ಈ ಭಾಗದ ಅಭಿವೃದ್ದಿಗಾಗಿ ಸಿಂದಗಿ ಕೊಕಟನೂರ ರಸ್ತೆ, ಕುಡಿಯುವ ನೀರು, ಸಮುದಾಯ ಭವನ, ಸಿಸಿ ರಸ್ತೆ ಸೇರಿದಂತೆ ಅನೇಕ ಜನಪರ ಕೆಲಸಗಳನ್ನು ಮಾಡಿದ್ದೇನೆ ಮತದಾರರು ಮತ್ತೊಮ್ಮೆ ಬಿಜೆಪಿಯ ಕಮಲದ ಗುರುತಿಗೆ ಮತ ಹಾಕುವ ಮೂಲಕ ನನ್ನನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಲಕಯ್ಯ ಹಿರೇಮಠ, ಶಿವಯ್ಯ ಹಿರೇಮಠ, ಶಂಕ್ರಯ್ಯ ಹಿರೇಮಠ, ಅರವಿಂದ ಬಿರಾದಾರ, ನಾತು ಅರಳಗುಂಡಗಿ, ಸಂತೋಷ ಜೋಗೂರ, ವಿಶ್ವನಾಥ ಕೋಣಸಿರಸಗಿ, ಶ್ರೀಶೈಲ ಚನ್ನೂರ, ಅನೀಲ ಜೋಗೂರ, ದೇವಪ್ಪಗೌಡ ಪಾಟೀಲ, ಬಾಪುಗೌಡ ಪಾಟೀಲ, ಗಂಗಾಧರ ಶಿವಸಿಂಪಿಗೇರ, ನರಸಪ್ಪ ಮೋರಟಗಿ, ಶಾಂತಪ್ಪ ಧುಳಖೇಡ, ಸಿದ್ದಪ್ಪ ನಂದಗೇರಿ, ಎಂ.ಡಿ.ಪಾಟೀಲ ಇದ್ದರು.

loading...