ಶಾಸಕ ಸಿ.ಟಿ.ರವಿ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ

0
15

ಬೆಂಗಳೂರು, ಜೂ.8: ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಮನೆ ಮೇಲೆ ಶುಕ್ರವಾರ ಬೆಳಿಗ್ಗೆ ಆದಾಂುು ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಐಟಿ ಹೆಚ್ಚುವರಿ ಕಮಿಷನರ್ ಪಳನಿವೇಲ್ ರಾಜು ನೇತೃತ್ವದಲ್ಲಿ ಸಿ.ಟಿ.ರವಿ ಮತ್ತು ಅವರ ಆಪ್ತರ ಮನೆಂುು ಮೇಲೆ ಏಕಕಾಲಕ್ಕೆ ದಿಢೀರ್ ದಾಳಿ ನಡೆದಿದೆ. ಶಾಸಕ ರವಿ ಅವರ ಮೇಲೆ ಹಾಗೂ ಚಿಕ್ಕಮಗಳೂರಿನಲ್ಲಿರುವ ಅವರ ಪಾರಂ ಹೌಸ್ ಮೇಲೂ ಐಟಿ ದಾಳಿ ನಡೆದಿದ್ದು, ಐಟಿ ಅಧಿಕಾರಿಗಳು ದಾಖಲೆಗಳನ್ನು ವಶಪಡಿಸಿಕೊಂಡು ಪರೀಶೀಲನೆ ನಡೆಸುತ್ತಿದ್ದಾರೆ. ಇದರ ಜತೆಗೆ ಸಿ.ಟಿ.ರವಿ ಆಪ್ತರಾದ ಕನಕರಾಜು, ಕೇಶವಮೂರ್ತಿ ಮನೆ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದೀಗ ಅಧಿಕಾರಿಗಳು ದಾಖಲೆ ಪರೀಶೀಲಿಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here