ಶಾಸ್ತçಸಾಹಿತ್ಯ, ದಾಸ ಸಾಹಿತ್ಯ ಎರಡೂ ಒಂದೇ: ವಿಶ್ವೆÃಶತೀರ್ಥರು

0
3

ಶಾಸ್ತçಸಾಹಿತ್ಯ, ದಾಸ ಸಾಹಿತ್ಯ ಎರಡೂ ಒಂದೇ: ವಿಶ್ವೆÃಶತೀರ್ಥರು
ಕನ್ನಡಮ್ಮ ಸುದ್ದಿ-ಬೆಳಗಾವಿ: ಸರ‍್ಯನ ಕಿರಣ ಹಾಗೂ ಚಂದ್ರನ ಕಿರಣ ಎರಡೂ ಒಂದೇ ಎಂದು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಅದರಂತೆ ಶಾಸ್ತçಸಾಹಿತ್ಯ ಹಾಗೂ ದಾಸಸಾಹಿತ್ಯ ಎರಡೂ ಒಂದೇ. ಸರ‍್ಯನ ಬಿಸಿಲು ನೇರವಾಗಿ ಬಿದ್ದಾಗ ಅದನ್ನು ತಡೆಯಲಾಗದು. ಅದೇ ಚಂದ್ರನ ಮುಖಾಂತರ ಬಂದಾಗ ಶಾಂತಿ, ಸೌಮ್ಯ, ಅಹ್ಲಾಧಕರವೆನಿಸುತ್ತದೆ. ಅದರಂತೆ ಶಾಸ್ತçಸಾಹಿತ್ಯ ಕಠಿಣ. ದಾಸಸಾಹಿತ್ಯ ಬೆಳದಿಂಗಳಂತೆ ಸಾಮಾನ್ಯ ಮನುಷ್ಯನಿಗೂ ಅಹ್ಲಾದಕರ ಆನಂದವನ್ನು ನೀಡುತ್ತದೆ ಎಂದು ನಾಡಿನ ಹಿರಿಯ ಸನ್ಯಾಸಿಗಳಾದ ಪೇಜಾವರ ಮಠಧೀಶರಾದ ವಿಶ್ವೆÃಶತೀರ್ಥ ಶ್ರಿÃಪಾದಂಗಳವರು ಇಂದಿಲ್ಲಿ ಹೇಳಿದರು.
ಭಾಗ್ಯನಗರದ ರಾಮನಾಥ ಮಂಗಲ ಕರ‍್ಯಾಲಯದಲ್ಲಿ ಮೂರು ದಿನಗಳಿಂದ ಅತ್ಯಂತ ಅದ್ಧೂರಿಂದ ನಡೆಯುತ್ತಿರುವ ಹರಿದಾಸ ಹಬ್ಬದ ಎರಡನೇ ದಿನದ ಕರ‍್ಯಕ್ರಮದಲ್ಲಿ ಶ್ರಿÃಪಾದಂಗವರಿಂದ ಅಮೃತೋಪದೇಶ ನೀಡುತ್ತ ಅವರು ಮೇಲಿನಂತೆ ಹೇಳಿದರು.
ಮುಂದೆ ಮಾತನಾಡುತ್ತ ಅವರು ಹನುಮಂತದೇವರು ಸಂಜೀವಿನಿ ಗುಡ್ಡವನ್ನು ತರುವಾಗ ಎಡಗೈಯಲ್ಲಿ ತಂದ ಇದು ಶಕ್ತಿ. ಅದರಂತೆ ಅದರಂತೆ ರಾಮದೇವರ ಪೂಜೆಗಾಗಿ ಹೂವುಗಳನ್ನು ಎರಡೂ ಕೈಗಳಿಂದ ತಂದ ಇದು ಭಕ್ತಿ. ಹನುಮಂತನಲ್ಲಿರುವ ಶಕ್ತಿ ಮತ್ತು ಭಕ್ತಿಗಳನ್ನು ಇಂದಿನ ಯುವಪೀಳಿಗೆ ಬೆಳೆಸಿಕೊಂಡಲ್ಲಿ ನಮ್ಮ ಮಧ್ವ ಸಂಪ್ರಾದಯವನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗಲು ಸಾಧ್ಯವೆಂದು ಹೇಳಿದರು.

ಶ್ರಿÃ ಗುರು ಗೋವಿಂದ ವಿಠಲ ಭಜನಾ ಮಂಡಳ, ಲಕ್ಷಿö್ಮÃ ಸೋಬಾನ ಭಜನಾ ಮಂಡಳ, ಹರಿಪ್ರಿಯಾ ಭಜನಾ ಮಂಡಳಿ ಹಾಗೂ ಜೈಹರಿ ವಿಠ್ಠಲ ಭಜನಾ ಮಂಡಳಿಗಳಿಂದ ಭಜನೆ ಭಜನಾ ಮಂಡಳಿಗಳಿಂದ ಭಜನೆ, ಮಕ್ಕಳಿಂದ ಸಾಂಸ್ಕೃತಿಕ ಕರ‍್ಯಕ್ರಮಗಳು ಜರುಗಿದವು ಅಲ್ಲದೇ ಕೊನೆಯಲ್ಲಿ ಖ್ಯಾತ ಗಾಯಕರಾದ ಡಾ. ಪ್ರಸನ್ನ ಗುಡಿ ಇವರಿಂದ ದಾಶವಾಣಿ ಕರ‍್ಯಕ್ರಮ ಜರುಗಿತು.
ಡಾ. ರಾಯಚೂರು ಶೇಷಗಿರಿದಾಸ ಸ್ವಾಗತಿಸಿದರು. ಮುರಳಿಧರ ಕುಲಕರ್ಣಿ ನಿರೂಪಿಸಿದರು. ಹರಿದಾಸ ಸೇವಾ ಸಮಿತಿಯ ಕೇಶವ ಮಾಹುಲಿ, ಜಯತೀರ್ಥ ಸವದತ್ತಿ, ಭೀಮಸೇನ ಮಿರ್ಜಿ, ಸಂಜೀವ ಮೊರಪ್ಪನವರ, ಪ್ರಭಾಕರ ಸರಳಾಯಿ, ಶ್ರಿÃಧರ ಹಲಗತ್ತಿ, ನಂದಕುಮಾರ ಕರಗುಪ್ಪಿಕರ, ಅಶೋಕ ದೇಸಾಯಿ ಮುಂತಾದವರು ಕರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು.

loading...