ಶಿಕ್ಷಣವನ್ನೇ ವ್ಯಾಪಾರಿಕರಣಗೊಳ್ಳಿಸುತ್ತಿರುವ ಖಾಸಗಿ ಶಾಲೆ

0
133

ಎಫ್.ಎಸ್.ಸಿದ್ದನಗೌಡರ
ಕನ್ನಡಮ್ಮ ಸುದ್ದಿ
ಬೈಲಹೊಂಗಲ:14 ದೇಶದ ಭಾವಿ ಭವಿಷತ್ಯಿನ ಪ್ರಜೆಗಳು ಉತ್ತಮ ಶಿಕ್ಷಣದೊಂದಿಗೆ ದೇಶದ ಪ್ರಗತಿಗೆ ಪೂರಕವಾಗಲಿ, ಅನಕ್ಷರತೆ, ದಾರಿದ್ರ್ಯ ಹೊಗಲಾಡಿಸಿ ರಾಮರಾಜ್ಯ ನಿರ್ಮಾಣವಾಗಲೆಂದು ಸವಿಂಧಾನದಲ್ಲಿ 14ವರ್ಷದ ಒಳಗಿನ ಮಕ್ಕಳಿಗೆ ಉಚಿತ ಶಿಕ್ಷಣ ಕಡ್ಡಾಯಗೊಳಿಸಲಾಗಿದೆ. ಉಚಿತ ಶಿಕ್ಷಣಕ್ಕಾಗಿ ದೇಶದಲ್ಲಿ ಸರ್ಕಾರ ಸಾವಿರಾರು ಕೋಟಿ ಖರ್ಚು ಮಾಡುತ್ತಿರುವಾಗ ಇಲ್ಲೊಂದು ಖಾಸಗಿ ಆಂಗ್ಲ ಮಾಧ್ಯಮ ಶಾಲೆ ಕಲಿಕಾ ಸಾಮಾಗ್ರಿಗಳನ್ನು ಮಾರುವದೊಂದಿಗೆ ಶಿಕ್ಷಣವನ್ನು ವ್ಯಾಪಾರಿಕರಣಗೊಳಿಸುತ್ತಿದೆ.
ಖಾಸಗಿ ಶಿಕ್ಷಣ ಸಂಸ್ಥೆಗಳು ಪೋಷಕರಿಗೆ ಆರ್ಥಿಕ ಹೊರೆ ಉಂಟು ಮಾಡಬಾರದೆಂಬ ಸದುದ್ದೇಶದಿಂದ ಸರ್ಕಾರ ಅನೇಕ ನಿಯಮಗಳನ್ನು ಜಾರಿಗೆ ತಂದು ಪಾಲಕರ ಮೇಲಿನ ಹೊರೆ ಕಡಿಮೆ ಮಾಡುವಾಗ ಕೆಲ ಒಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ಸುತ್ತೋಲೆಗಳನ್ನೆ ಗಾಳಿಗೆ ತೂರಿ ತಮ್ಮ ಮನಬಂದತೆ ಕಾರ್ಯನಿರ್ವಹಿಸುತ್ತಿವೆ. ಅಂತಹ ಸಂಸ್ಥೆಗಳ ಸಾಲಿಗೆ ಹೊಸುರ ರಸ್ತೆಯಲ್ಲಿರುವ ಬೈಲಹೊಂಗಲ ಪಟ್ಟಣದ ಪ್ರತಿಷ್ಟಿತ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯ ಸಿಬ್ಬಂದಿ ವರ್ತಿಸುತ್ತಿರುವದು ಪ್ರಜ್ಞಾವಂತ ಸಮಾಜಕ್ಕೆ ಸವಾಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಛೇರಿ ನೃಪತುಂಗ ರಸ್ತೆ ಬೆಂಗಳೂರ, ಇವರ ಕಾರ್ಯಾಲಯದಿಂದ ದಿ.2.5.2017ರಂದು ಹೊರಡಿಸಿದ ಆದೇಶ ಸಂಖ್ಯೆ:ಸಿ.7(8)ಆರ್.ಟಿ.ಇ\ಪ್ರ.ಪ್ರ\2017-2018. ರ ಪ್ರಕಾರ ಖಾಸಗಿ ಶಾಲೆಗಳಲ್ಲಿ ಸಾಮಾನ್ಯವಾಗಿ ದಾಖಲಾದ ಮಕ್ಕಳು ಮತ್ತು 12(1)(ಸಿ)ಆರ್.ಟಿ.ಇ ಅಡಿ ಪ್ರವೇಶ ಪಡೆದ ಮಕ್ಕಳ ಪಾಲಕರು ಕಲಿಕಾ ಸಾಮಾಗ್ರಿ, ಪುಸ್ತಕ, ನೋಟ್ ಪುಸ್ತಕ, ಸಮವಸ್ತ್ರಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಲು ಸ್ವತಂತ್ರರಾಗಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳು ಯಾವುದೆ ನಿಶ್ಚಿತ ಅಂಗಡಿಂiÀಲ್ಲಿ ಖರೀದಿಸುವಂತೆ ಒತ್ತಡ ಹಾಕುವಂತಿಲ್ಲ, ಶಾಲಾ ಆವರಣದಲ್ಲಿ ಮಾರಾಟ ಮಾಡದಂತೆ ನಿರ್ಭಂದ ವಿಧಿಸಿ ಆದೇಶ ಮಾಡಿದೆ. ಆದರೆ ಇಲ್ಲಿಯ ಆಂಗ್ಲ ಮಾಧ್ಯಮ ಶಾಲೆಯೊಂದು ಪಠ್ಯ ಪುಸ್ತಕ, ನೋಟ್ ಪುಸ್ತಕ, ಲೇಖನಿ ಸಾಮಗ್ರಿಗಳು ಹಾಗೂ ಸಮವಸ್ತ್ರ, ಸಾಕ್ಸ್, ಬೆಲ್ಟು ಇನ್ನಿತರ ಎಲ್ಲ ಸ್ಟೇಶನರಿ ವಸ್ತುಗಳನ್ನು ಮಾರಾಟ ಮಾಡಲು ಒಬ್ಬ ಶಿಕ್ಷಕ ಸಂಪೂರ್ಣ ಜವಾಬ್ದಾರಿಯನ್ನೆ ಹೊತ್ತುಕೊಂಡಿದ್ದಾನೆ. ಅವನಿಗೆ ಶಾಲೆಯ ಮೂರನಾಲ್ಕು ಸಿಫಾಯಿಗಳು ಸಹಾಯಕರಾಗಿ ಕಾರ್ಯನಿರ್ವಹಿಸುತ್ತಾರೆ. ಅವನು ಹೇಳಿದಷ್ಟು ಬೆಲೆಗೆ ಕಲಿಕಾ ಸಾಮಗ್ರಿಗಳನ್ನು ಪಾಲಕರು, ವಿದ್ಯಾರ್ಥಿಗಳು ಸಾಲುಗಟ್ಟಿ ನಿಂತು ಖರೀದಿಸಬೇಕು. ಆತ ಶಿಕ್ಷಕನೂ ವ್ಯಾಪಾರಸ್ಥನೋ ಎಂಬುದು ಪಾಲಕರಿಗೆ ತಿಳಿಯದು. ಅವನು ಶಿಕ್ಷಕನಾಗಿ ತನ್ನ ಜವಾಬ್ದಾರಿ ನಿಭಾಯಿದುವದು ಯಾವಾಗ, ಇಂತಹ ಶಿಕ್ಷಕರಲ್ಲಿ ಕಲಿಯುವ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಹೇಗೆ ಸಾಧ್ಯಾ.


ಸುಮಾರು 14ರಿಂದ 15ನೂರು ವಿದ್ಯಾರ್ಥಿಗಳು ಕಲಿಯುತ್ತಿರುವ ಇಂತಹ ಶಾಲೆಗಳ ಆಡಳಿತ ಮಂಡಳಿ ಶಾಸಕರು, ಮಾಜಿ ವಿಧಾನ ಪರಿಷತ್ತ ಸದಸ್ಯರಂತಹ ಅನೇಕ ಗಣ್ಯರ ಕೈಯಲ್ಲಿ ಆಡಳಿತವಿರುವದರಿಂದ ಪಾಲಕರು ಯಾವುದೆ ವಿಚಾರದ ಗೋಜಿಗೆ ಹೊಗುತ್ತಿಲ್ಲ. ಇಲ್ಲಿ ಅನೇಕ ಸರ್ಕಾರಿ ಅಧಿಕಾರಿಗಳ ಮಕ್ಕಳು, ನ್ಯಾಯವಾದಿಗಳ, ರೈತರ, ಶಿಕ್ಷಕರ, ಮಕ್ಕಳು ಕಲಿಯುತ್ತಿದ್ದರು ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದಲೂ ತಮಗೆಲ್ಲಿ ಈ ಉಸಾಬರಿ ಎಂದು ಗೊಣಗುತ್ತಾ ಹೇಳಿದಷ್ಟು ದುಡ್ಡು ಕೊಟ್ಟು ಸಾಮಗ್ರಿಗಳನ್ನು ಮಕ್ಕಳಿಗೆ ಕೊಡಿಸುವ ಪರಸ್ಥಿತಿಗೆ ಪಾಲಕರು ಬಂದಿರುವದು ವಿಪರ್ಯಾಸ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಕೆಲ ವ್ಯಕ್ತಿಗಳು ಶಿಕ್ಷಣ ಸಂಸ್ಥೆಯಲ್ಲಿ ದುಡಿದು ಅಲ್ಲಿಯ ಸಂಬಳದೊಂದಿಗೆ ಗಿಂಬಳವನ್ನು ಭರ್ಜರಿಯಾಗಿ ಪಡೆಯುತ್ತಿರುವದು ಬರಗಾಲದಿಂದ ತತ್ತರಿಸಿದ ರೈತಪಾಲಕರ ಹಣವನ್ನು ದೊಚುತಿದ್ದಾರೆ. ಇನ್ನು ಪುಸ್ತಕ ವ್ಯಾಪರಸ್ಥರು, ಸ್ಟೇಸನರಿ ಸಾಮಾಗ್ರಿಗಳ ವ್ಯಾಪಾರಸ್ಥರು ಇಷ್ಟೊಂದು ಸಂಖ್ಯೆಯಲ್ಲಿ ವ್ಯಾಪಾರಗೊಳ್ಳುವದರಿಂದ ಸಾಕಷ್ಟು ರಿಯಾಯತಿ ನೀಡುತ್ತಾರೆ. ಆದರೆ ಯಾವುದೆ ಮುಲಾಜವಿಲ್ಲದೆ ಅನಧಿಕೃತವಾಗಿ ಪುಸ್ತಕಗಳ ಮೇಲೆ ಅಂಟಿಸಿದ ಬೆಲೆಯನ್ನೆ ಪಾಲಕರಿಂದ ವಸೂಲು ಮಾಡುತ್ತಾರೆ. ಈ ವಿಷಯ ಆಡಳಿತ ನಡೆಸುವ ಮಂಡಳಿಗೆ ಗೊತ್ತಿಲ್ಲವೆಯೆ? ಅಥವಾ ಇದು ಗೊತ್ತಿದ್ದು ಸುಮ್ಮನ್ನಿದ್ದಾರೆಯೇ? ಈ ಬಗ್ಗೆ ಸಂಸ್ಥೆಯ ಆಡಳಿತ ಮಂಡಳಿ ತನಿಖೆ ಮಾಡಿ ಪಟ್ಟಣದ ಸುತ್ತಲಿನ ರೈತರ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುತ್ತಾ ಬಂದಿರುವ ಈ ಸಂಸ್ಥೆಯ ಗೌರವ ಉಳಿಸಿ ಇಂತಹ ಕೃತ್ಯಗಳಲ್ಲಿ ತೊಡಗಿರುವ ವ್ಯಕ್ತಿಗಳ ವಿರುದ್ದ ಕ್ರಮ ಕೈಗೊಳ್ಳುವರೆ? ಎಂಬ ಪ್ರಶ್ನೆ ಪ್ರಜ್ಞಾವಂತ ಪಾಲಕರನ್ನು ಕಾಡುತ್ತಿದೆ. ಈ ನಿಯಮವನ್ನು ಉಲ್ಲಂಘಿಸಿದ ಶಾಲೆಗಳ ಮಾನ್ಯತೆ ರದ್ದುಗೊಳಿಸುವ, ದಂಡ ವಿಧಿಸುವ ಅಧಿಕಾರ ಹೊಂದಿದ ಶಿಕ್ಷಣ ಇಲಾಖೆ ಇನ್ನಾದರು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವದೆ? ಎಂದು ಸಾರ್ವಜನಿಕರು ನಿರಿಕ್ಷೆಯಲ್ಲಿದ್ದಾರೆ.

loading...