ಶಿಬಿರಗಳು ಮಕ್ಕಳ ಪ್ರತಿಭೆಗಳನ್ನು ಹೊರ ಹಾಕವ ಸೂಕ್ತವೇದಿಕೆ: ಪ್ರಕಾಶ

0
47

ಕನ್ನಡಮ್ಮ ಸುದ್ದಿ-ಜೋಯಿಡಾ: ಶಿಬಿರಗಳು ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರ ಹಾಕಲು ಒಂದು ಸೂಕ್ತವೇದಿಕೆಯಾಗಿದೆ ಎಂದು ತಾಲೂಕಾ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ ಹಾಲಮ್ಮನವರ ಹೇಳಿದರು.
ಜಿಲ್ಲಾ ಪಂಚಾಯತ ಉತ್ತರ ಕನ್ನಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲಭವನ ಸೊಸೈಟಿ, ಶಿಶು ಅಭಿವೃದ್ಧಿ ಯೋಜನೆ ಜೋಯಿಡಾ, ಸಹ್ಯಾದ್ರಿ ಸಾಂಸ್ಕøತಿಕ ಹಾಗೂ ಕ್ರೀಡಾ ಸಂಘ (ರಿ) ಜೋಯಿಡಾ ಇವರ ಸಹಯೋಗದಲ್ಲಿ ನಡೆದ ಬೇಸಿಗೆ ಶಿಬಿರವನ್ನು ಉದ್ದೇಶಿಸಿ ಮಾತನಾಡಿ ಸರ್ಕಾರ ಮಕ್ಕಳಲ್ಲಿನ ಪ್ರತಿಭೆಯನ್ನು ಪ್ರೋತ್ಸಾಹಿಸಲು ವಿವಿಧ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದ್ದು. ಮಕ್ಕಳು ಇದರ ಸದುಪಯೋಗ, ಪಡೆದುಕೊಳ್ಳಬೇಕೆಂದು ಹೇಳಿದರು.

ಶಿಶು ಅಭವೃದ್ಧಿ ಯೋೀಜನಾಧಿಕಾರಿಗಳಾದ ಶೈಲಾ ಖುರಾನಿಯವರು ಇಂದಿನ ಆಧುನಿಕ ಯುಗದಲ್ಲಿ ಮಕ್ಕಳು ಮೊಬೈಲ್, ಮತ್ತು ಕಂಪ್ಯೂಟರ ಗೇಮಗಳ ದಾಸರಾಗಿದ್ದು, ಮನೆಯಿಂದ ಹೊರ ಹೋಗುವುದು ಕಡಿಮೆಯಗುತ್ತಿದೆ. ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತರಾದ ಎಸ್.ಬಿ ಶಿಂದೆ, ದ್ವಿ.ದ ಸಹಾಯಕರಾದ ಶ್ರೀಮತಿ ಕಲ್ಪನಾ, ಸಹ್ಯಾದ್ರಿ ಸಾಂಸ್ಕøತಿಕ ಹಾಗೂ ಕ್ರೀಡಾ ಸಂಘ (ರಿ) ಜೋಯಿಡಾ ಅಧ್ಯಕ್ಷೆ ವೀಣಾ ಫಟೆ, ಶಿಬಿರದ ಮೇಲ್ವಿಚಾರಕಿ ಅಕ್ಷತಾ ನಾಯ್ಕ ಉಪಸ್ಥಿತರಿದ್ದರು.

loading...