ಶಿವಾಜಿ ಮಹಾರಾಜರ ಆದರ್ಶ ನಮಗೆ ದಾರೀದೀಪ: ನಾಗರಾಳ

0
75

ಘಟಪ್ರಭಾ : ಛತ್ರಪತಿ ಶಿವಾಜಿ ಮಹಾರಾಜರ ಜನನ, ಬಾಲ್ಯ, ತಾಯಿ ಜಿಜಾ ಮಾತೆ ನೀಡಿದ ಮಾರ್ಗದರ್ಶನದ ಆದರ್ಶ ತತ್ವಗಳೇ ಇಂದು ನಮ್ಮೆಲ್ಲರಿಗೆ ದಾರೀದೀಪವಾಗಿದ್ದು ಅವರ ಹೋರಾಟ  ಅವಿಸ್ಮರಣಿಯವಾಗಿದೆ ಸಮಾಜದಲ್ಲಿ ಮಹಿಳೆಯರು ಮಕ್ಕಳ ಶಿಕ್ಷಣ ಮತ್ತು ಸಂಸ್ಕಾರಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಶಿವಸಾಗರ ಶುಗರ್ಸ್ ಕೇನ ಮ್ಯಾನೇಜರ ಎನ್.ಎಸ್. ನಾಗರಾಳ ಅವರು ಕರೆ ನೀಡಿದರು.

ಅವರು ಸಮೀಪದ ಶಿಂದಿಕುರಬೇಟ ಗ್ರಾಮದ ದೇಸಾಯರ ವಾಡೆಯ ಆವರಣದಲ್ಲಿ ಹಿಂದು ಧರ್ಮೊದ್ದಾರಕ ರಾಷ್ಟ್ತ್ರ ಪುರುಷ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 385ನೇ ಜಯಂತಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕರ್ನಾಟಕ ಸರ್ಕಾರದಿಂದ ಶಿವಾಜಿ ಜಯಂತಿಯನ್ನು ಸರಕಾರಿ ಕಾರ್ಯಕ್ರಮವನ್ನಾಗಿ ಆಯೋಜಿಸಿದಕ್ಕೆ ಸಮಾರಂಭದ ಪರವಾಗಿ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡರಿಗೆ ಹಾಗೂ ಕನ್ನಢ ಮತ್ತು ಸಂಸ್ಕ್ಕತಿ ಇಲಾಖೆ ಸಚಿವರಾದ ಗೋಂವಿದ ಕಾರಜೋಳರವರಿಗೆ ಅಭಿನಂದನೆ ಸಲ್ಲಿಸಿದರು.

ಗ್ರಾಮದ ದೇಸಾಯರ ವಾಡೆಯ ಆವರಣದಲ್ಲಿ ವಿಶೇಷವಾಗಿ ರಚಿಸಲಾದ ಮಂಟಪದಲ್ಲಿ ಶ್ರೀ ಅಂಭಾಭವಾನಿ ಪೂಜೆಯನ್ನು ಮಾರುತಿ ಜಾಧವ ದಂಪತಿಗಳು ನೆರವೇರಿಸಿದರು. ನಂತರ ಬಾಲ ಶಿವಾಜಿಯ ತೊಟ್ಟಿಲೋತ್ಸವ ಗ್ರಾಮದ ಸುಮಂಗಲೆಯರಿಂದ ಜರುಗಿತು. ಜಯಂತಿಯ ಅಂಗವಾಗಿ ಪ್ರತಿಭಾವಂತ ವಿದ್ಯಾರ್ಥಿಗಳ ಸತ್ಕಾರ, ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ  ವಿತರಣಾ ಸಮಾರಂಭದ ಶ್ರೀ ಪೂಜ್ಯ ದಾದಾಸಾಹೇಬ ಮಹಾರಾಜರು ಅವರ ಸಾನಿಧ್ಯದಲ್ಲಿ ಅಧ್ಯಕ್ಷತೆಯನ್ನು ನಿಂಗಪ್ಪಾ ಬಂಬಲಾಡಿ ಗ್ರಾಮ ಪಂಚಾಯತ ಅದ್ಯಕ್ಷರು ವಹಿಸಿದ್ದರು. ಪ್ರೌ. ಸುರೇಶ ಮುರಮಕರ ಶಿವಾಜಿ ಮಹಾರಾಜರ ಜೀವನ ಆದರ್ಶದ ಬಗ್ಗೆ ಉಪನ್ಯಾಸ ನೀಡಿದರು. ಮುಖ್ಯ ಅತೀಥಿಗಳಾಗಿ ಗೋಕಾಕದ ಮರಾಠಾ ಸಮಾಜದ ಹಿರಿಯರಾದ ಸಾಗರ ಗುಡ್ಡದಮನಿ, ಪ್ರಕಾಶ ಮೂರಾರಿ, ಶಿವಾಜಿ ಕಲ್ಲೌಳಿ, ಅಮೃತ ಕಾಳ್ಯಾಗೋಳ ಶಿದ್ರಾಮ ಕಳಸನ್ನವರ, ಮಲ್ಲಿಕಾರ್ಜುನ ಕಾರಗಿ, ಪಕ್ಕಿರಪ್ಪಾ ಭೋವಿ, ಜೋತೆಪ್ಪಾ ಬಂತಿ, ಕಮಲಾಬಾಯಿ ಕೊಂಡಾಯಿ ಸೇರಿದಂತೆ ಉಪಸ್ಥಿತರಿದ್ದರು.

ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರದೊಂದಿಗೆ ನಡೆದ ವಿವಿಧ ಜಾನಪದ ಕಲಾ ತಂಡಗಳ ಭವ್ಯ ಮೆರವಣಿಗೆಗೆ ಅಡಿವೆಪ್ಪಾ ಕಾಳ್ಯಾಗೋಳ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ಸದಾನಂದ ಗಾಯಕವಾಡ, ಪುರಂದರ ಕೋಳಿ, ನಾರಾಯಣ ಜಗದಾಳ, ಬಾಬು ಶಿಂಧೆ, ಅಡಿವೆಪ್ಪಾ ಚೌವ್ಹಾಣ, ರಾಮು ಸುರ್ಯವಂಶಿ, ಕಲ್ಲಪ್ಪಾ ಸೂರ್ಯವಂಶಿ, ಭೀಮಶಿ ಮುಡಸಿಕರ, ಅಪ್ಪಾಸಾಬ ಕೊಂಡಾಯಿ, ಹನಮಂತ ಮಾನೆ ಕ್ಷತ್ರೀಯ ಮರಾಠಾ ಸಮಾಜದ ಬಾಂಧವರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

 

loading...

LEAVE A REPLY

Please enter your comment!
Please enter your name here