ಶೀಘ್ರದಲ್ಲೇ ಬೆಳಗಾವಿ ಜಿಪಂನಲ್ಲಿ ಬಿಜೆಪಿ ಮಯ ಮಾಡಲಾಗುವುದು: ರಮೇಶ ಭವಿಷ್ಯ

0
74

ಬೆಳಗಾವಿ

ಅತೀ ಶೀಘ್ರದಲ್ಲೇ ಬೆಳಗಾವಿ ಜಿಪಂನಲ್ಲಿ ಬಿಜೆಪಿ ಬಾವುಟ ಹಾರಿಸಲಾಗುವುದು ಎಂದು ನೂತನ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ‌ ಹೇಳಿದರು.

ಮಂಗಳವಾರ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಗೋಕಾಕನಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಆರೋಪ‌ ಮಾಡಿರುವ ಸತೀಶ ಜಾರಕಿಹೊಳಿ‌ ಅವರ ಮಾತಿನಲ್ಲಿ ಸತ್ಯವಿಲ್ಲ. ಮುಂಬರುವ ದಿನದಲ್ಲಿ ಶೀಘ್ರದಲ್ಲೇ ಬೆಳಗಾವಿ ಜಿಪಂ ಮೇಲೆ ಬಿಜೆಪಿ ಬಾವುಟ ಹಾರಿಸಲಾಗುವುದು ಎಂದರು.

 

ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಿರುವುದರಲ್ಲಿ ಏನೂ ವಿಶೇಷ ಇಲ್ಲ. ಕಳೆದ‌13 ತಿಂಗಳಿನಿಂದ ಎಲ್ಲ ಶಾಸಕರು ಕೂಡಿ ಇದ್ದವರು. ದಿನಾ ಊಟಾ ಮಾಡಿ ಕಳೆದ ಒಂದು ತಿಂಗಳಿನಿಂದ ನಾವು ಒಂದೇ ಕಡೆ ಊಟ ಮಾಡಿದ್ದೇವು ಅದರಲ್ಲಿ ವಿಶೇಷತೆ ಏನೂ ಇಲ್ಲ. ನಾವು 17 ಶಾಸಕರು ಸೇರಿ ಊಟ ಮಾಡಲು ಬೆಂಗಳೂರಿನಲ್ಲಿ ಸೇರುತ್ತಿದ್ದೇವೆ ಎಂದರು.

ನಮ್ಮ ಬಗ್ಗೆ ನಮ್ಮಗಿಂತ ಹೆಚ್ಚು ಸಿಎಂ ಯಡಿಯೂರಪ್ಪ ಹೆಚ್ಚು ವಿಚಾರ ಮಾಡುತ್ತಿದ್ದಾರೆ. ಅವರೇ ಪದೇ ಪದೇ ಮಾಧ್ಯಮದಲ್ಲಿ ಹೇಳಿಕೆ ನೀಡುತ್ತಿದ್ದಾರೆ. ನಮ್ಮ ಬಗ್ಗೆ ಯಾವುದೇ ಆತಂಕ ನಮ್ಮಲ್ಲಿ ಇಲ್ಲ ಎಂದರು.

ಸಚಿವ ಸಂಪುಟ ವಿಸ್ತರಣೆ ಹೈಕಮಾಂಡ ಹಾಗೂ‌ ಸಿಎಂ ಯಡಿಯೂರಪ್ಪ ಅವರ ತೀರ್ಮಾನಕ್ಕೆ ಬಿಟ್ಟದು. ನಮಗೆ ಸಚಿವರಾಗಿ ಮಾಡುತ್ತಾರೋ ಇಲ್ಲವೋ ಎಂಬುದು ಗೋತ್ತಿಲ್ಲ ಅದು ಹೈಕಮಾಂಡ್ ನಿರ್ಣಯ ಮುಂದೆ ವಿಚಾರ ಮಾಡೋಣ ಎಂದರು.

ಜಲಸಂಪನ್ಮೂಲ ಖಾತೆ ಸಮರ್ಥವಾಗಿ ನಿಭಾಯಿಸುತ್ತೇನೆ. ಜಲಸಂಪನ್ಮೂಲ್ ಖಾತೆ ಸಿಕ್ಕರೆ ನನ್ನ ನಸೀಬು. ನೀರಾವರಿ ಪಕ್ಷಾತೀತ. ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದಲಿತ, ಹಿಂದುಳಿದ ಹಾಗೂ ಮುಸ್ಲಿಂ ಮತದಾರರನ್ನು ಬಿಜೆಪಿಗೆ ಸೆಳೆಯಲು ಯತ್ನವನ್ನು ಗೋಕಾನಲ್ಲಿ ನನ್ನ‌ ವಿರೋದ್ದ ಎತ್ತಿ ಕಟ್ಟಿದ್ದರು. ಗೋಕಾಕನಲ್ಲಿ ಮೂರು ಸಮುದಾಯದವರಿಗೆ ಮನವೊಲಿಸಿ ಗೋಕಾಕನಲ್ಲಿ ಬಿಜೆಪಿ ಬೆಂಬಲಿಸುವಂತೆ ವಿನಂತಿಸಲಾಗುವುದು ಎಂದರು.
ಸತೀಶ, ಲಖನ್ ಗೋಕಾಕ್ ನಗರಸಭೆ ಭ್ರಷ್ಟಾಚಾರ ಆರೋಪಕ್ಕೆ ತನಿಖೆಗೆ ಮೊದಲ ಸಭೆಯಲ್ಲಿ ನಿರ್ಣಯ.
ಶೀಘ್ರವಾಗಿ ಬೆಳಗಾವಿ ಜಿಪಂ ಬಿಜೆಪಿ ತೆಕ್ಕೆಗೆ ಸೇರಲಿದೆ ಎಂದು ಭವಿಷ್ಯ ನುಡಿದರು.
ಎಂ.ಟಿ.ಬಿ ಹಾಗೂ ವಿಶ್ವನಾಥ ಅವರು ತ್ಯಾಗ ಮಾಡಿದ್ದಾರೆ. ಅವರು ಸೋತ ಕಾರಣ ಅವರನ್ನು ಕೈ ಬಿಡಲು ಸಾಧ್ಯವಿಲ್ಲ. ಹೈಕಮಾಂಡ್ ಗೆ ಮನವರಿಕೆ ಮಾಡಿ‌ ಅವರನ್ನು ಸೂಕ್ತ ಸ್ಥಾನ ನೀಡುವಂತೆ ವಿನಂತಿಸಲಾಗುವುದು ಎಂದರು.

loading...