ಶೀರೂರು ಶ್ರೀ ನಿಗೂಢ ಸಾವಿಗೆ ಕೊನೆಗೂ ತೆರೆ

0
19

ಬೆಂಗಳೂರು:ಉಡುಪಿಯ ಶೀರೂರು ಶ್ರೀ ನಿಗೂಢ ಸಾವಿಗೆ ಕೊನೆಗೂ ತೆರೆಳೆಯಲಾಗಿದೆ.ಶ್ರೀಗಳದ್ದು ಸಹಜ ಸಾವು ಎನ್ನುವುದಾಗಿ ವೈದ್ಯರ ವರದಿಯಲ್ಲಿ ತಿಳಿದು ಬಂದಿದೆ.
ಈ ಬಗ್ಗೆ ಅಂತಿಮ ವರದಿಯನ್ನು ಕೆಎಂಸಿ ತಜ್ಞ ವೈದ್ಯರ ತಂಡ ಪೊಲೀಸರಿಗೆ ನೀಡಿದೆ.ಲಿವರ್ ವೈಫಲ್ಯ, ಅನ್ನನಾಳದಲ್ಲಾದ ರಕ್ತಸ್ರಾವದಿಂದಾಗಿ ಸಾವಿಗೀಡಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಇದಕ್ಕೂ ಮೊದಲು ಅಂದರೆ ಆ.21 ರಂದು ಎಫ್‍ಎಸ್‍ಎಲ್ ವರದಿ ದೊರಕಿತ್ತು. ಆದರೆ,ಕೂಲಂಕುಷ ತನಿಖೆಗಾಗಿ ಮತ್ತೆ ಕೆಎಂಸಿ ವೈದ್ಯರಿಗೆ ಪೊಲೀಸ್ ಇಲಾಖೆ ನೀಡಿತ್ತು.
ಮಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯ ತಯಾರಿಸಿದ್ದ ವರದಿಯಲ್ಲೂ ಸಹಜ ಸಾವು ಎನ್ನುವುದಾಗಿ ಉಲ್ಲೇಖಿಸಲಾಗಿತ್ತು. ಇದೀಗ, ಅದನ್ನೇ ಪುನರುಚ್ಚರಿಸಿದ ಕೆಎಂಸಿ ತಜ್ಞ ವೈದ್ಯರ ತಂಡ ಕೊನೆಗೂ ಸಹಜ ಸಾವು ಎಂದು ವರದಿ ನೀಡಿದೆ.
ಇನ್ನು ಸ್ವಾಮೀಜಿ ಮಣಿಪಾಲದ ಕೆಎಂಸಿಯಲ್ಲಿ ಸಾವಿಗೀಡಾದ ಬಳಿಕ ಅಲ್ಲಿನ ವೈದ್ಯರು ಮಾಹಿತಿ ನೀಡಿ, ಸ್ವಾಮೀಜಿ ದೇಹದಲ್ಲಿ ವಿಷಕಾರಿ ಅಂಶ ಪತ್ತೆಯಾಗಿದೆ ಎಂದು ಶಂಕೆ ವ್ಯಕ್ತಪಡಿಸಿದ್ದರು.ಈ ಹಿನ್ನೆಲೆ ಈ ಬಗ್ಗೆ ಹಲವಾರು ತನಿಖೆ ಮಾಡಿದರಾದರೂ ಯಾವುದೇ ವಿಷದ ಅಂಶ ಕಂಡು ಬಂದಿಲ್ಲ.
ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಸಾವಿನ ಬಗ್ಗೆ ಹಲವರು ಕೊಲೆ ಎಂದು ಶಂಕೆ ವ್ಯಕ್ತಪಡಿಸಿದ್ದರು.ಅಷ್ಟ ಮಠದ ಪರಂ ಪರೆಗೆ ವ್ಯತಿರಿಕ್ತವಾಗಿ ನಡೆದುಕೊಂಡಿದ್ದ ಶೀರೂರು ಶ್ರೀಅಂತಿಮ ವರದಿ ಬಗ್ಗೆಯೂ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತವಾಗಿತ್ತು.

loading...