ಶೌಚಾಲಯ ನಿರ್ಮಿಸಿಕೊಳ್ಳದಿದ್ದರೆ ಪಡಿತರ ಆಹಾರ ದಾನ್ಯ ಕಡಿತ:ಶಿವಾನಗೋಳ

0
29

 

ಕನ್ನಡಮ್ಮ ಸುದ್ದಿ-ಕೋಹಳ್ಳಿ : ಗ್ರಾಮಸ್ಥರು ಕಡ್ಡಾಯವಾಗಿ ಶೌಚಾಲಯ ಕಟ್ಟಿಕೊಳ್ಳದಿದ್ದರೆ ಅಂತಹ ಕಾರ್ಡದಾರರಿಗೆ ಮುಂದಿನ ತಿಂಗಳ ಪಡಿತರ ಆಹಾರ ದಾನ್ಯವನ್ನು ಕಡಿತಗೊಳಿಸಲಾಗುವುದು ಎಂದು ಸ್ಥಳಿಯ ಗ್ರಾಪಂ ಅಭಿವೃದ್ದಿ ಅಧಿಕಾರಿ ಕೆ ಆರ್‌ ಶಿವಾನಗೋಳ ಹೇಳಿದರು.
ಶನಿವಾರ ಗ್ರಾಮದ ಪ್ರತಿಯೊಂದು ಓಣಿ-ಓಣಿಗಳಲ್ಲಿ ಪಾದಯಾತ್ರೆ ಮೂಲಕ ಹಮ್ಮಿಕೊಂಡ “ಶೌಚಾಲಯ ಕುರಿತು ಗ್ರಾಮಸ್ಥರಿಗೆ ಜಾಗೃತಿ”ಮೂಡಿಸಿ ಮಾತನಾಡಿದರು. ಪ್ರತಿಯೊಂದು ಮನೆಯವರು ಶೌಚಕ್ಕಾಗಿ ಯಾರು ಬಯಲು ವಿಸರ್ಜನೆಗೆ ಹೋಗಬಾರದು. ಪ್ರತಿಯೊಬ್ಬರು ಕಡ್ಡಾಯವಾಗಿ ಶೌಚಾಲಯವನ್ನು ಕಟ್ಟಿಕೊಳ್ಳಬೇಕು. ಶೌಚಾಲಯ ಕಟ್ಟಿಕೊಳ್ಳಲು ಇದೇ ಜುಲೈ ತಿಂಗಳವರೆಗೆ ಮಾತ್ರವಿದೆ. ಶೌಚಲಯಕ್ಕಾಗಿ ಸರಕಾರ ನೀಡುತ್ತಿರುವ ಸಹಾಯಧನ ಸ್ಥಗಿತಗೊಳ್ಳಲಿದೆ. ಇದರಿಂದ ಶೌಚಾಲಯವಿಲ್ಲದ ಫಲಾನುಭವಿಗಳು ಕಡ್ಡಾಯವಾಗಿ ಗ್ರಾಮ ಪಂಚಾಯತಿಗೆ ದಾಖಲಾತಿಯನ್ನು ನೀಡಬೇಕು. ಹಳ್ಳಿಯ ಪ್ರತಿಯೊಂದು ಮನೆಯಲ್ಲಿ ಈಗ ಸಾಮಾನ್ಯವಾಗಿ ಟಿವಿ, ಮೋಬೈಲ್‌ ಸೇರಿದಂತೆ ದಿನನಿತ್ಯ ಚಟುವಟಿಕೆಗೆ ಬೇಕಾದ ವಸ್ತುಗಳು ಇರುತ್ತವೆ, ಆದರೆ ಗ್ರಾಮದ ತಮ್ಮ ಮನೆಯಲ್ಲಿ ಶೌಚಾಲಯ ಇಲ್ಲದಿರುವುದು ವಿಷ್ಯಾಧನೀಯವಾಗಿದೆ, ಇದರ ಬಗ್ಗೆ ಹಲವಾರು ಬಾರಿ ಜಾಗೃತಿ ಮೂಡಿಸಿದರೂ ಶೌಚಗೃಹ ನಿರ್ಮಿಸಿಕೊಳ್ಳಲು ಮುಂದಾಗಿಲ್ಲ. ಗ್ರಾಮದ ಪ್ರಮುಖರು ಮೊದಲು ಅವರು ಶೌಚಾಲಯ ಕಟ್ಟಿಕೊಳ್ಳವುದಾಗಬೇಕು. ಗ್ರಾಮದಲ್ಲಿ ಪ್ರತಿಯೊಬ್ಬರು ಮನೆಗೊಂದು ಶೌಚಾಲಯ ನಿರ್ಮಿಸಿಕೊಂಡು ಬಯಲು ವಿಸರ್ಜನೆಗೆ ಕಡಿವಾಣ ಹಾಕಬೇಕು. ಗ್ರಾಮದ ಜನತೆಗೆ ಶೌಚಾಲಯವನ್ನು ಕಟ್ಟಿಕೊಳ್ಳಲು ಜಾಗದ ಕೊರತೆಯಿದ್ದರೆ ಗ್ರಾಮ ಪಂಚಾಯತಿಯಿಂದ ಸಾಮೂಹಿಕ ಶೌಚಾಲಯವನ್ನು ಕಟ್ಟಿಕೊಡುವ ಆಲೋಚನೆ ನಡೆದಿದೆ. ಗ್ರಾಮಸ್ಥರು ಜಾಗೃತರಾಗಿ ಶೌಚಾಲಯ ಮಹಿಳೆಯರಿಗೆ ಅತ್ಯವಶ್ಯವಿದೆ. ಮನೆಯಲ್ಲಿ ಶೌಚಾಲಯಿದ್ದರೆ ತಮ್ಮ ಆರೋಗ್ಯ ಮತ್ತು ಬದುಕು ಹಸನಾಗಬೇಕು. ಶುದ್ದವಾದ ಕುಡಿಯುವ ನೀರು ಜೀವನಾವಶ್ಯಕ ಮತ್ತು ಆರೋಗ್ಯಕ್ಕೆ ಹಿತಕರವಾಗಲಿದೆ. ಶೌಚಾಲಯವಿಲ್ಲದವರು ಕಡ್ಡಾಯವಾಗಿ ಒಂದು ವಾರದೊಳಗೆ ಶೌಚಾಲಯವನ್ನು ಕಟ್ಟಿಕೊಳ್ಳಬೇಕು. ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿ ಕಟ್ಟಿಸಿಕೊಂಡ ಫಲಾನುಭವಿಯನ್ನು ಗ್ರಾಮ ಪಂಚಾಯತಿ ವತಿಯಿಂದ ಗೌರವಿಸಿ ಅಭಿನಂದಿಸಲಾಗುವುದು ಎಂದು ಹೇಳಿದರು. ನಂತರ ಗ್ರಾಮದ ಗಲ್ಲಿ-ಗಲ್ಲಿಗಳಲ್ಲಿ ಸಂಚರಿಸಿದ ಗ್ರಾಪಂ ಅಭಿವೃದ್ದಿ ಅಧಿಕಾರಿ ಕೆ ಆರ್‌ ಶಿವಾನಗೋಳ ಇವರು ಗ್ರಾಪಂ ಸಿಬ್ಬಂದಿಯೊಂದಿಗೆ ಪ್ರತಿಯೊಂದು ಮನೆಗೆ ಭೇಟಿ ನೀಡಿ ಶೌಚಾಲಯವನ್ನು ಕಟ್ಟಿಕೊಳ್ಳುವಂತೆ ಗ್ರಾಮಸ್ಥರಿಗೆ ಜನಜಾಗೃತಿ ಮೂಡಿಸಿದರು. ಜಾಗೃತಿಯಲ್ಲಿ ಗ್ರಾಪಂ ಕಾರ್ಯದರ್ಶಿ ಈರಪ್ಪ ತಮದಡ್ಡಿ ಸಿದ್ದರಾಮೇಶ್ವರ ಮೋಟಗಿ, ಅಪ್ಪಾಸಾಬ ಬಾಡಗಿ, ಹಣಮಂತ ಸತ್ತಿ, ಕಾಶಿನಾಥ ಬೇವಿನಗಿಡದ ಸೇರಿದಂತೆ ಅನೇಕ ಪಾಲ್ಗೊಂಡಿದ್ದರು.

loading...