ಶ್ರೀರಾಮ ಸೇನೆಯಿಂದ ಸ್ನೇಹಿತರ ದಿನಾಚರಣೆ ವಿರೋಧಿಸಿ ರ್ಯಾಲಿ

0
34

ಖಾನಾಪುರ 5: ಶ್ರೀರಾಮ ಸೇನೆ ತಾಲೂಕು ಘಟಕ ಅಗಸ್ಟ್ ತಿಂಗಳಿನಲ್ಲಿ ಸ್ನೇಹಿತರ ದಿನ ಆಚರಣೆಯನ್ನು ವಿರೋಧಿಸಿ ಸೋಮವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ಹಮ್ಮಿಕೊಂಡಿತ್ತು. ಸ್ನೇಹಿತರ ದಿನದ ನೆಪದಲ್ಲಿ ಪಾಶ್ಚಿಮಾತ್ಯರ ಅನುಕರಣೆ ಈ ದೇಶದಲ್ಲಿ ನಡೆಯುವುದನ್ನು ಶ್ರೀರಾಮ ಸೇನೆ ವಿರೋಧಿಸುತ್ತದೆ ಎಂದು ತಾಲೂಕು ಘಟಕದ ಅಧ್ಯಕ್ಷ ಪಂಡಿತ ಓಗಲೆ ಹೇಳಿದರು.

ಪಟ್ಟಣದ ಹಳೆ ತಹಶೀಲ್ದಾರ ಕಚೇರಿಯಿಂದ ಪ್ರಾರಂಭವಾದ ರ್ಯಾಲಿ ವಿಠೋಬಾದೇವ ಗಲ್ಲಿ, ದೇಸಾಯಿ ಗಲ್ಲಿ, ಚುರಮುರಕರ ಗಲ್ಲಿ, ಸ್ಟೇಷನ್ ರಸ್ತೆ, ಮಹಾಲಕ್ಷ್ಮೀ ದೇವಸ್ಥಾನ ವೃತ್ತ, ತರಕಾರಿ ಮಾರುಕಟ್ಟೆ, ನಿಂಗಾಪೂರ ಗಲ್ಲಿ, ಕೆಂಚಾಪೂರ ಗಲ್ಲಿ, ಸಮಾದೇವಿ ಗಲ್ಲಿ ಮೂಲಕ ಸಂಚರಿಸಿ ಹಳೆಯ ಬಸ್ ನಿಲ್ದಾಣದ ಬಳಿಯಿರುವ ಛತ್ರಪತಿ ಶಿವಾಜಿ ವೃತ್ತದಲ್ಲಿ ಕೊನೆಗೊಂಡಿತು. ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಜಳಗಾ, ನಂದಗಡ, ಭುರಣಕಿ, ಬೀಡಿ, ಖೈರವಾಡ, ಹಟ್ಟಿ, ಲೋಂಡಾ, ಗುಂಜಿ, ಬರಗಾಂವ, ನಿಡಗಲ್, ದೇವಲತ್ತಿ, ಅಸೋಗಾ ಇತ್ಯಾದಿ ಗ್ರಾಮಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here