ಶ್ರೀಲಂಕಾದಲ್ಲಿ ಸರಣಿ ಬಾಂಬ್‍ ಸ್ಫೋಟ: ಮೃತರ ಸಂಖ್ಯೆ 310ಕ್ಕೆ ಏರಿಕೆ

0
1

ಕೊಲಂಬೋ:- ಶ್ರೀಲಂಕಾದಲ್ಲಿ ಭಾನುವಾರ ನಡೆದ ಸರಣಿ ಬಾಂಬ್‍ ಸ್ಫೋಟಗಳಲ್ಲಿ ಮೃತರ ಸಂಖ್ಯೆ 310ಕ್ಕೆ ಏರಿದ್ದು, ಐನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಕೊಲಂಬೋದ ಕೊಚ್‍ಚಿಕಡೆಯಲ್ಲಿ ಸೋಮವಾರ ಸಂಜೆ ಮತ್ತೊಂದು ಸಣ್ಣ ಸ್ಫೋಟ ಸಂಭವಿಸಿದೆ. ಅಜ್ಞಾತ ವಾಹನವೊಂದರಲ್ಲಿ ಪತ್ತೆಯಾದ ಸ್ಫೋಟಕವನ್ನು ಬಾಂಬ್‍ ನಿಷ್ಕ್ರಿಯ ದಳ ನಿಷ್ಕ್ರಿಯಗೊಳಿಸುತ್ತಿದ್ದ ವೇಳೆ ಈ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ.

ದೇಶಾದ್ಯಂತ ಇದುವರೆಗೆ 26 ಶಂಕಿತರನ್ನು ಬಂಧಿಸಲಾಗಿದ್ದು, ಮತ್ತಷ್ಟು ಶಂಕಿತರನ್ನು ವಶಕ್ಕೆ ತೆಗೆದುಕೊಳ್ಳಲು ಶೋಧ ಕಾರ್ಯಾಚರಣೆಗಳು ಮುಂದುವರೆದಿವೆ ಎಂದು ಪೊಲೀಸ್‍ ವಕ್ತಾರ ರುವಾನ್‍ ಗುಣಶೇಖರ ತಿಳಿಸಿದ್ದಾರೆ.
ದೇಶಾದ್ಯಂತ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರದಂತೆ ಜನರಿಗೆ ಕರೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡು ಬಂದರೆ ಕೂಡಲೇ ಪೊಲೀಸರಿಗೆ ತಿಳಿಸುವಂತೆ ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಭಯೋತ್ಪಾದಕ ದಾಳಿಯ ಸಾಧ್ಯತೆಗಳ ಬಗ್ಗೆ ಮೊದಲೇ ಮಾಹಿತಿ ದೊರೆತಿತ್ತು. ಆದರೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ ಶ್ರೀಲಂಕಾ ಸಂಪುಟ ವಕ್ತಾರ ರಜಿತಾ ಸೆನಾರತ್ನೆ ಸೋಮವಾರ ಹೇಳಿದ್ದಾರೆ.

loading...