ಸಂಕೇಶ್ವರ ಪೋಲಿಸರ ದಾಳಿ : ಅಕ್ರಮ ಗಾಂಜಾ ಹೊಂದಿದ್ದ ಓರ್ವನ ಬಂಧನ

0
458

ಸಂಕೇಶ್ವರ ಪೋಲಿಸರ ದಾಳಿ : ಅಕ್ರಮ ಗಾಂಜಾ ಹೊಂದಿದ್ದ ಓರ್ವನ ಬಂಧನ

ಕನ್ನಡಮ್ಮ ಸುದ್ದಿ : ಸಂಕೇಶ್ವರ : ಅಕ್ರಮವಾಗಿ ಗಾಂಜಾ ಹೊಂದಿದ್ದ ವ್ಯಕ್ತಿಯ ಮನೆ ಮೇಲೆ ಪೋಲಿಸರು ದಾಳಿ ಮಾಡಿ ಸುಮಾರು 250 ,ಗ್ರಾಂ ಮಾದಕ ವಸ್ತು ಒಣ ಗಾಂಜಾ ಇಟ್ಟು ಕೊಂಡಿದ್ದ ವ್ಯಕ್ತಿಯ ಬಂಧಿಸಿರುವ ಘಟನೆ ಇಂದು ನಡೆದಿದೆ.

ದಾಳಿ ವೇಳೆ 250 ಗ್ರಾಂ ಒಣ ಗಾಂಜಾ ಪತ್ತೆಯಾಗಿದ್ದು ,
ಬಂಧಿತ ಆರೋಪಿ ಸಂಕೇಶ್ವರ ಪಟ್ಟಣದ ಜನತಾ ಪ್ಲಾಟ್ ನಿವಾಸಿ ಲಗಮಣ್ಣ ಮನವಡ್ಡರರನ ಪೋಲಿಸರು ಬಂಧಿಸಿದ್ದಾರೆ .
ಖಚಿತ ಮಾಹಿತಿ ಮೇರೆಗೆ ಪಿಎಸ್ ಐ ಗಣಪತಿ ಕೋಂಗನೊಳಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ .
ಈ ಕುರಿತು ಸಂಕೇಶ್ವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

ಕಾರ್ಯಚರಣಾ ವೇಳೆ ಸಿಬ್ಬಂದಿಗಳಾದ ರಮೇಶ ರಾಜಾಪೂರೆ , ಬಿ.ಕೆ ನಾಗನೂರಿ ,ಬಸವರಾಜ ಕಪರಟ್ಟಿ,ಸಿ.ಡಿ ಪಾಟೀಲ ಇದ್ದರು , ಸಂಕೇಶ್ವರ ಪೋಲಿಸರ ಕಾರ್ಯಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ  .

loading...