ಸಂಗೊಳ್ಳಿ ರಾಯಣ್ಣ ಸೊಸೈಟಿಯ ಗ್ರಾಹಕರಿಗೆ ಸಂತಸದ ವಿಷಯ

0
83

ಬೆಳಗಾವಿ
ಗ್ರಾಹಕರಿಗೆ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬAಧಿಸಿದAತೆ ಸಂಗೊಳ್ಳಿ ರಾಯಣ್ಣ ಸೊಸೈಟಿಯ ಆನಂದ ಅಪ್ಪುಗೋಳ ಮತ್ತು ಪದಾಧಿಕಾರಿಗಳು ಸೇರಿದಂತೆ ಅಕ್ರಮವಾಗಿ ಹೆಸರಿನಲ್ಲಿರುವ ಸುಮಾರು 100ಕ್ಕೂ ಅಧಿಕ ಆಸ್ತಿಯನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದರಲ್ಲಿ ಎಲ್ಲ ಆಸ್ತಿಗಳು ಬೆಳಗಾವಿಯಲ್ಲಿ ಇದ್ದು, ಬೆಂಗಳೂರು ಹಾಗೂ ಧಾರವಾಡದಲ್ಲಿ ತಲಾ ಒಂದೊAದು ಆಸ್ತಿ ಇದೆ. ಸದ್ಯ 16 ಜನ ಮಾಲೀಕರ ವಿರುದ್ದ ನ್ಯಾಯಾಲಯದಿಂದ ನೊಟೀಸ್ ನೀಡಲಾಗಿದೆ.
100ಕ್ಕೂ ಅಧಿಕ ಆಸ್ತಿಗಳ ಮಾಲೀಕತ್ವ ಹೊಂದಿರುವವರು ನ್ಯಾಯಾಲಯದ ಮೂಲಕವೇ ತಡೆಯಾಜ್ಞೆ ತರುವ ಪ್ರಯತ್ನ ನಡೆಸಿದ್ದರು. ಅದಕ್ಕೆ ಅವಕಾಶ ಸಿಗದಂತೆ ಜಾರಿ ನಿರ್ದೇಶನಾಯ ಪ್ರಯತ್ನ ನಡೆಸಿತ್ತು. ಜಾರಿ ನಿರ್ದೇಶನಾಯಲದ ತಂಡಕ್ಕೆ ಸ್ಥಳೀಯ ಕಂದಾಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡವು 100ಕ್ಕೂ ಅಧಿಕ ಆಸ್ತಿಗಳಿಗೆ ಭೇಟಿ ನೀಡಿ ತನಿಖೆ ನಡೆಸುತ್ತಿದೆ. ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ರಾಯಣ್ಣ ಸೊಸೈಟಿಯಲ್ಲಿ ಠೇವಣಿ ಇಟ್ಟ ಗ್ರಾಹಕರಿಗೆ ಹಣ ಪೂರೈಸಲಾಗುವುದು ಎಂದು ಬೆಳಗಾವಿ ಎಸಿ ಅಶೋಕ ತೇಲಿ ಸ್ಪಷ್ಟಪಡಿಸಿದ್ದಾರೆ.
ಆನಂದ ಅಪ್ಪುಗೊಳ ಒಡೆತನದ ಸಂಗೊಳ್ಳಿ ರಾಯಣ್ಣ ಸೊಸೈಟಿಯಲ್ಲಿ ನೂರಾರು ಕೋಟಿ ರು. ಬಂಡವಾಳ ಹೂಡಿಕೆ ಮಾಡಿದ್ದ ಗ್ರಾಹಕರಿಗೆ ವಂಚನೆ ಮಾಡಿರುವ ಪ್ರಕರಣವನ್ನು ತೀವ್ರವಾಗಿ ತನಿಖೆ ನಡೆಸುತ್ತಿರುವ ಇಡಿ ತಂಡ ಬೆಳಗಾವಿಯಲ್ಲಿ ಠಿಕಾಣಿ ಹೂಡಿ ಸಮಗ್ರ ತನಿಖೆ ನಡೆಸುತ್ತಿದೆ. ಆದಷ್ಟು ಭೇಗ ಸೊಸೈಟಿಯ ನಿರ್ದೇಶಕರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಠೇವಣಿ ಇಟ್ಟ ಗ್ರಾಹಕರಿಗೆ ಹಣ ನೀಡಲು ಚಿಂತನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

loading...