ಸಂತ್ರಸ್ತರಿಗೆ ನೆರವು ನೀಡಿದ ಸ್ಕೋಡವೆಸ್ ಸಂಸ್ಥೆಯ ಸಿಬ್ಬಂದಿ

0
18

ಕನ್ನಡಮ್ಮ ಸುದ್ದಿ-ಶಿರಸಿ: ಭೂಕುಸಿತ ಹಾಗೂ ನೆರೆಹಾವಳಿಗೆ ತುತ್ತಾದ ಕೊಡಗಿನ ಮಡಿಕೇರಿ ಕುಶಾಲನಗರ, ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಸಂತ್ರಸ್ತರ ನೆರವಿಗಾಗಿ ಶಿರಸಿಯ ಸ್ಕೋಡವೆಸ್ ಸಂಸ್ಥೆಯ ಸಿಬ್ಬಂದಿ ತೆರಳಿದ್ದು ಮಳೆಯನ್ನು ಲೆಕ್ಕಿಸದೇ ಕಳೆದ 2 ದಿನಗಳಿಂದ ಸಂತ್ರಸ್ತರ ಸೇವೆಯಲ್ಲಿ ತೊಡಗಿದ್ದಾರೆ.
ಮಳೆ, ವಿಪರೀತ ಮಂಜಿನ ನಡುವೆಯೂ ಸ್ಕೋಡವೇಸ್ ತಂಡ ವೈದ್ಯಕೀಯ ಶಿಬಿರಗಳನ್ನು ನಡೆಸುತ್ತಿದೆ. ಸ್ಥಳೀಯವಾಗಿ ಕೂರ್ಗ, ಮೋಟಾರ ಸ್ಪೋಟ್ರ್ಸ ಎಡೆವೆಂಚರ್ಸ್ ಕ್ಲಬ್ ಟೀಮ್-53 ತಂಡವು ಸ್ಕೋಡವೆಸ್ ಸಂಸ್ಥೆಯ ಸಿಬ್ಬಂದಿಗಳಿಗೆ ಸಹಕಾರ ನೀಡುತ್ತಿದ್ದು ಕಡಿದಾದ ಪ್ರದೇಶ, ದಟ್ಟ ಕಾಡುಗಳಿಂದ ಆವೃತ್ತವಾದ ನೆರೆ ಪೀಡಿತ ನದಿ ಪಾತ್ರದಲ್ಲಿರುವ ಕುಗ್ರಾಮಗಳಲ್ಲಿ ಸ್ಕೋಡವೆಸ್ ತಂಡ ಸೇವೆ ಸಲ್ಲಿಸುತ್ತಿದೆ. ಸಂಸ್ಥೆಯ ಕಾರ್ಯದರ್ಶಿ ವೆಂಕಟೇಶ ನಾಯ್ಕ ಅವರ ಮುಂದಾಳತ್ವದಲ್ಲಿ 15 ಜನ ಸಿಬ್ಬಂದಿ 2 ವೈದ್ಯಕೀಯ ತಂಡ ಕಾರ್ಯ ನಿರ್ವಹಿಸುತ್ತಿದೆ. ಈ ತಂಡವು ಭೇಟಿ ನೀಡುವ ಗ್ರಾಮಗಳಲ್ಲಿ ಶಿರಸಿ ನಾಗರಿಕರು ನೀಡಿದ ವಸ್ತುಗಳನ್ನು ಮನೆಮನೆಗೆ ತೆರಳಿ ವಿತರಿಸುವ ಕಾರ್ಯ ನಡೆಯುತ್ತಿದ್ದು, ನೆರೆ ಪ್ರದೇಶದಲ್ಲಿ ಸಾಧ್ಯವಿರುವ ಜಾಗಗಳಲ್ಲೇ ವೈದ್ಯಕೀಯ ತಂಡವು ಸಂತ್ರಸ್ತರಿಗೆ ಆರೋಗ್ಯ ಸೌಲಭ್ಯ ನೀಡುತ್ತಿದೆ. ಸ್ಥಳೀಯ ಸಂಘ ಸಂಸ್ಥೆಗಳು ಭೇಟಿ ನೀಡಿದ ಅಧಿಕಾರಿಗಳೂ, ಜನಪ್ರತಿನಿಧಿಗಳು ಸ್ಕೋಡವೆಸ್ ಸಂಸ್ಥೆಯ ಸೇವೆಯನ್ನು ಅಭಿನಂದಿಸಿದ್ದಾರೆ ಎಂದು ಸಂತ್ರಸ್ತರ ನೆರವು ಕಾರ್ಯ ತಂಡದೊಂದಿಗೆ ಇರುವ ವೆಂಕಟೇಶ ನಾಯ್ಕ ತಿಳಿಸಿದ್ದಾರೆ.

loading...