ಸಂಪನ್ನಗೊಂಡ ರಾಗಶ್ರಿà ರಾಷ್ಟಿçÃಯ ಸಂಗೀತೋತ್ಸವ

0
4

ಕನ್ನಡಮ್ಮ ಸುದ್ದಿ-ಹೊನ್ನಾವರ: ಇಲ್ಲಿನ ಹಡಿನಬಾಳದ ರಾಗಶ್ರಿà ಸಂಗೀತ ಮತ್ತು ಸಾಂಸ್ಕೃತಿಕ ಸಂಸ್ಥೆ, ಹಡಿನಬಾಳ ಇದರ ೧೬ ನೇ ವರ್ಷದ ವಾರ್ಷಿಕೋತ್ಸವ, ಸಂಸ್ಮರಣೆ, ಸನ್ಮಾನ, ಪುರಸ್ಕಾರ ಹಾಗೂ ರಾಗಶ್ರಿà ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ರಾಗಶ್ರಿà ರಾಷ್ಟಿçÃಯ ಸಂಗೀತೋತ್ಸವ ಕಾರ್ಯಕ್ರಮವು ಶ್ರಿà ವಿಷ್ಣುಮೂರ್ತಿ ದೇವಾಲಯದ ಆವಾರ ಹಡಿನಬಾಳದಲ್ಲಿ ನಡೆಯಿತು.
ರಾಷ್ಟçಪ್ರಶಸ್ತಿ ಪುರಸ್ಕೃತ ವೇ|| ಮೂ|| ಶಿವರಾಮ ಭಟ್ಟ ಅಲೇಖ ಜ್ಯೊÃತಿ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕಲಾ ಸಂಘಟನೆ ಕಲಾವಿದನನ್ನು ಬೆಳೆಸುತ್ತದೆ. ಅಂತಹ ಎಷ್ಟೊà ಹಿರಿ-ಕಿರಿಯ ಕಲಾವಿದರಿಗೆ ರಾಗಶ್ರಿà ವೇದಿಕೆ ಕಲ್ಪಿಸಿದೆ. ಹದಿನಾರು ವರ್ಷಗಳಿಂದ ರಾಗಶ್ರಿà ಗ್ರಾಮೀಣ ಭಾಗದಲ್ಲಿದ್ದು, ಅಂತರಾಷ್ಟಿçÃಯ ಕಲಾವಿದರನ್ನು ಕರೆಸಿ ಸಂಗೀತದ ಕಂಪನ್ನು ಬೀರಿರುವುದು ನಿಜಕ್ಕೂ ಶ್ಲಾಘನೀಯ ಎಂದರು. ಕೇಂದ್ರ ಸಂಗೀತ ನಾಟಕ ಅಕಾಡೆಮಿ ದೆಹಲಿ ಇದರ ಸದಸ್ಯರಾದ ಖ್ಯಾತ ಯಕ್ಷಗಾನ ಕಲಾವಿದ ಶಿವಾನಂದ ಹೆಗಡೆ ಕೆರೆಮ£ ಮಾತನಾಡಿÉ ಕಲೆ ಉಳಿಸುವುದು, ಕಲಾವಿದನ ಜವಾಬ್ದಾರಿ, ಕಲೆ ಅರಳಿ ಬೆಳೆಯಲು ಸಂಘಟಕರು ಅವಶ್ಯ ಒಂದಿಷ್ಟು ವರ್ಷ ಮಾಡಿದ ಸಂಘಟಕರ ಸಂಘಟನೆಯ ಜವಾಬ್ದಾರಿಯನ್ನು ಪ್ರಜ್ಞಾವಂತ ಸಮಾಜವೇ ಮುಂದುವರಿಸಿಕೊಂಡು ಹೋದಾಗ ಮಾತ್ರ ಕಲೆ ಸಮಾಜದಲ್ಲಿ ಬದುಕಿ ವಿಜೃಂಭಿಸಲು ಸಾಧ್ಯ ಎಂದು ರಾಗಶ್ರಿà ಸಮಾಜಮುಖಿ ಸಾಂಸ್ಕೃತಿಕ ಕಾರ್ಯವನ್ನು ರಾಗಶ್ರಿÃಯ ಶಿಸ್ತ ಬದ್ಧ ಕಾರ್ಯಕ್ರಮವನ್ನು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಪದ್ಮಶ್ರಿà ಪಂ| ವೆಂಕಟೇಶ ಕುಮಾರ ಧಾರವಾಡ ಇವರಿಗೆ ದಿ. ಪಂ| ಜಿ. ಆರ್. ಭಟ್ಟ, ಬಾಳೆಗದ್ದೆ ಹೆಸರಿನಲ್ಲಿ ನೀಡುವ ರಾಗಶ್ರಿà ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವಿÃಕರಿಸಿದ ಅವರು ಮಾತನಾಡಿ ಈ ಪ್ರಶಸ್ತಿ ನನಗೆ ದೇವರ ಸನ್ನಿದಿಯಲ್ಲಿ ನೀಡಿದ್ದು ಸಂತಸ ತಂದಿದೆ ಸಂಘಟನೆ ಕಷ್ಟವಾದರು ಗ್ರಾಮೀಣ ಭಾಗದಲ್ಲಿ ಈ ರೀತಿ ಕಾರ್ಯಕ್ರಮದ ಆಯೋಜನೆ ಸಂಗೀತ ಸರಸ್ವತಿಯ ಸೇವೆ ಎಂದು ಬಣ್ಣಿಸಿದರು. ಅದೇ ರೀತಿಯಾಗಿ ಖ್ಯಾತ ಭಜನಾ ಕಲಾವಿದರಾದ ವಸಂತ ಭಟ್ಟ ಗುಂಡಿಬೈಲ್ ಇವರನ್ನು ಅವರ ಜೀವಮಾನದ ಕಲಾ ಸೇವೆಗಾಗಿ ಸನ್ಮಾನಿಸಲಾಯಿತು. ಅದೇ ರೀತಿ ಮೂರು ದಿನಗಳ ಸಂಗೀತ ಕಾರ್ಯಾಗಾರವನ್ನು ನಡೆಸಿಕೊಟ್ಟ ಪಂ| ಅಜೇಯ ಚಕ್ರವರ್ತಿ ಶಿಷ್ಯರಾದ ವಿದ್ವಾನ ಗುರುದತ್ತ ಎ.ಕೆ. ಅವರಿಗೆ ರಾಗಶ್ರಿà ಯುವ ಪುರಸ್ಕಾರ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ಇದರ ಸದಸ್ಯರಾದ ಡಾ. ಅಶೋಕ ಹುಗ್ಗಣ್ಣವರ ಅಂತರಾಷ್ಟಿçÃಯ ಸಂಗೀತ ಕಲಾವಿದರು ಎಸ್.ಡಿ.ಎಂ. ಕಾಲೇಜ್ ಹೊನ್ನಾವರ. ಹಾಗೂ ಕಲಾಶ್ರಿà ಪುರಸ್ಕೃತ ಪ್ರೊÃ. ಎಸ್. ಶಂಭು ಭಟ್ಟ ಕಡತೋಕಾ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಪ್ರಶಸ್ತಿ ಪ್ರದಾನ ಮಾಡಿದರು.

ಇದಕ್ಕೂ ಪೂರ್ವದಲ್ಲಿ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ಸಂಗೀತ ಪ್ರಸ್ತುತಪಡಿಸಿದರು. ನಂತರ ವಿದ್ವಾನ ಗುರುದತ್ತ ಏ.ಕೆ. ಕಲ್ಕತ್ತಾ ಅವರು ಶುದ್ಧ ಸಾರಂಗನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು. ನಂತರ ನಡೆದ ರಾಷ್ಟಿçÃಯ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಪದ್ಮಶ್ರಿà ಪಂ|| ಎಂ. ವೆಂಕಟೇಶ ಕುಮಾರ ಅವರು ರಾಗ ಶುದ್ಧ ಕಲ್ಯಾಣ, ಬಿಹಾಗ, ಬಸಂತ ಬಹಾರ, ರಾಗವನ್ನು ತಮ್ಮ ಸಿರಿಕಂಠದ ಮೂಲಕ ಪಾಂಡಿತ್ಯ ಪೂರ್ಣವಾಗಿ ಮಂಡಿಸಿದರು. ಅಷ್ಟೆà ಅಲ್ಲದೇ ತೊರೆದು ಜೀವಿಸಬಹುದೆ, ಅಕ್ಕ ಕೇಳವ್ವ, ಪ್ರಣತಿಯಿದೆ…, ಒಂದು ಬಾರಿ ಸ್ಮರಣೆ ಸಾಲದೆ, ದಾಸರ ಪದಗಳು ನೆರೆದ ಅಪಾರ ಸಂಗೀತ ಶೋತೃಗಳನ್ನು ಮಂತ್ರ ಮುಗ್ದಗೊಳಿಸಿತು. ಇವರಿಗೆ ಅಷ್ಟೆà ಉತ್ತಮವಾಗಿ ಡಾ|| ರವೀಂದ್ರ ಕಾಟೋ, ಬೆಂಗಳೂರು, ಸಂವಾದಿನಿ ಸಾಥ್ ನೀಡಿದರೆ ಪ್ರೊÃ. ಗೋಪಾಲಕೃಷ್ಣ ಹೆಗಡೆ ಕಲ್ಭಾಗ ಅಷ್ಟೆà ಉತ್ತಮವಾಗಿ ತಬಲಾ ಸಾಥ್ ನೀಡಿ ಕಾರ್ಯಕ್ರಮ ಕಳೆಗಟ್ಟುವಂತೆ ಮಾಡಿದರು. ರಾಘವೇಂದ್ರ ಹೆಗಡೆ ಹಾಗೂ ಉಷಾಭಟ್ಟ ಕುಮಟಾ ತಾನಪುರ ಸಾಥನಲ್ಲಿ ಸಹಕರಿಸಿದರು.
ರಾಗಶ್ರಿÃ ಅಧ್ಯಕ್ಷ ವಿದ್ವಾನ ಶಿವಾನಂದ ಭಟ್ಟ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನು ಆಡಿದರೆ ವಿದ್ವಾನ ಎಸ್.ಜಿ. ಹೆಗಡೆ ಕಪ್ಪೆಕೇರಿ ಧನ್ಯವಾದ ಸಮರ್ಪಿಸಿದರು. ರಾಗಶ್ರಿÃಯ ಸೀತಾರಾಮ ಹೆಗಡೆ, ಪ್ರಾಚಾರ್ಯ ಎಸ್.ಜಿ. ಭಟ್ಟ, ಎಸ್.ವಿ. ಹೆಗಡೆ, ಹರಿಶ್ಚಂದ್ರ ನಾಯ್ಕ, ವಿದ್ವಾನ ರಾಮ ಭಟ್ಟ ಕಲಾವಿದರನ್ನು ಗೌರವಿಸಿದರು. ನೆರೆದ ಅಪಾರ ಶೋತುÈಗಳು ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

loading...