ಸತೀಶ ಜಾರಕಿಹೊಳಿ ಅವರಿಗೆ ಸತ್ಕಾರ

0
47

ಗೋಕಾಕ 22: ಪ್ರಸ್ತುತ ಸಾಲಿನ ಮುಂಗಡಪತ್ರದಲ್ಲಿ ಅಲೆಮಾರಿ, ಅರೆಅಲೆಮಾರಿ ಜನಾಂಗದ ಅಭಿವೃದ್ಧಿಗೆ 100ಕೋಟಿ ರೂ. ಮೀಸಲಿಟ್ಟಿದ್ದನ್ನು ಸ್ವಾಗತಿಸಿರುವ ಬೆಳಗಾವಿ ಜಿಲ್ಲಾ ಅಲೆಮಾರಿ ಅರೆ ಅಲೆಮಾರಿ ಹಾಗೂ ಬುಡಕಟ್ಟು ಸಂಘವು ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಸತ್ಕರಿಸಿತು.
ಅಧ್ಯಕ್ಷ ಅಮೃತ ದಪ್ಪಿನವರ ನೇತೃತ್ವದಲ್ಲಿ ಅಲೆಮಾರಿ, ಅರೆಅಲೆಮಾರಿ ಜನಾಂಗದವರು ಸಚಿವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರಲ್ಲದೆ ಮುಖ್ಯಮಂತ್ರಿ ಸಿದ್ರಾಮಯ್ಯ ಅವರನ್ನು ಅಭಿನಂದಿಸಿದ್ದಾರೆ.
ಈ ಸಂದರ್ಭದಲ್ಲಿ ಶ್ರೀಮತಿ ಕಲ್ಪನಾ ಜೋಶಿ, ರಾಜಶೇಖರ ವಾಕುಡೆ, ಸದಾಶಿವ ಗೋಪಸಾನಿ, ಅಣ್ಣಪ್ಪ ಹೆಳವರ, ಸಿದ್ದಪ್ಪ ಜನ್ನನವರ, ದುಂಡಪ್ಪ ಖಿಲಾರಿ, ಉದ್ದಪ್ಪ ಹೆಳವರ, ಬಂದು ಕಿಳ್ಳಿಕ್ಯಾತರ, ಲಕ್ಕಪ್ಪ ಹೆಳವರ, ಪ್ರಶಾಂತ ದಳವಾಯಿ, ಯಲ್ಲಪ್ಪ ವಿಭೂತಿ, ರುದ್ರಪ್ಪ ದೊಡಮನಿ, ರಾಜು ಬೈಲಪತ್ತಾರ, ಹುಸೇನಪ್ಪ ವಿಭೂತಿ, ನಾಸೀರ ಕಮನಾ ಸೇರಿದಂತೆ ಅನೇಕರು ಇದ್ದರು.

loading...

LEAVE A REPLY

Please enter your comment!
Please enter your name here