ಸತೀಶ ಜಾರಕಿಹೊಳಿ ಮಾತಿಗೆ ವ್ಯಂಗ್ಯವಾಡಿದ ಶಾಸಕ ಅರವಿಂದ ಲಿಂಬಾವಳಿ

0
48

ಬೆಳಗಾವಿ: ಕಳೆದ ಎರಡು ದಿನಗಳ ಹಿಂದೆ ಸತೀಶ ಜಾರಕಿಹೊಳಿ ರಮೇಶ ಜಾರಕಿಹೊಳಿ ಬಿಜೆಪಿ‌ ಪರ‌ ಕೆಲಸ ಮಾಡುತ್ತಿದ್ದು, ಬಿಜೆಪಿ ಸೇರಿಲಿದ್ದಾರೆ ಎಂದು ಹೇಳಿದ ಮಾತಿಗೆ ಶಾಸಕ ಅರವಿಂದ ಲಿಂಬಾವಳಿ ವ್ಯಂಗ್ಯ ವಾಡಿದ್ದಾರೆ. ಸುದ್ದಿ ಗೋಷ್ಠಿ ಯಲ್ಲಿ ಮಾಧ್ಯಮದವರು ರಮೇಶ ಬಿಜೆಪಿ ಸೇರಲಿದ್ದಾರೆ ಎಂದು ಕೇಳಿದ ಪ್ರಶ್ನೇಗೆ ಪ್ರತಿಕ್ರಿಯಿಸಿ ಮಾತನಾಡಿ, ಬಳ್ಳಾರಿ , ರಾಯಚೂರು ಸೇರಿದಂತೆ ದಕ್ಷಿಣ ಕರ್ನಾಟಕ ದ ಕೆಲವು ಕಡೆ ಕಾಂಗ್ರೆಸ್ ಪಕ್ಷದ ಶಾಸಕರ ಬೆಂಬಲಿಗರು ಮೋದಿಯವರ ದೇಶ ಭಕ್ತಿಯನ್ನು ಮೆಚ್ಚಿ ಕೆಲಸ‌ ಮಾಡುತ್ತಿದ್ದಾರೆ.ಆದರೆ ರಮೇಶ ಜಾರಕಿಹೊಳಿ ಬಿಜೆಪಿ‌ ಸೇರ್ಪಡೆ ಪ್ರಕ್ರಿಯೆ ಮಾತ್ರ ನಡೆದಿಲ್ಲ. ಆದರೆ ರಮೇಶ ಜಾರಕಿಹೊಳಿ ಬಿಜೆಪಿ ಸೇರುತ್ತಾರೆ ಎಂದು ಸತೀಶ ಹೇಳಿಕೆ ನೋಡಿದರೆ , ರಮೇಶರನ್ನು ಬಿಜೆಪಿ‌ ಸೇರಿಸಲು ತುಂಬಾ ಆಸಕ್ತಿ‌ ಇದ್ದ ರೀತಿ ಕಾಣುತ್ತಿದೆ ಎಂದು ವ್ಯಂಗ್ಯ ರೀತಿಯಲ್ಲಿ ಮಾತನಾಡಿದ್ದಾರೆ.

loading...