ಸದ್ಯದಲ್ಲೇ ಶಿಕ್ಷಕರ ನೇಮಕಾತಿಗೆ ಸರ್ಕಾಕ್ಕೆ ಒತ್ತಾಯ : ಸಿದ್ಧರಾಮಯ್ಯ ಭರವಸೆ

0
18

ಕನ್ನಡಮ್ಮ ಸುದ್ದಿ ಬೆಳಗಾವಿ: ರಾಜ್ಯದ ಎಲ್ಲಾ ಕಡೆಗೂ ಶಿಕ್ಷಕರ ಕೊರತೆ ಇರುವ ಕಾರಣ ಶಿಕ್ಷಕರ ವರ್ಗಾವಣೆ ಅಗತ್ಯವಿದೆ ಅದನ್ನೇ ನೇಪ ಇಂಟುಕೊಂಡು ಶಾಲಾ-ಕಾಲೇಜುಗಳು ಮುಚ್ಚುವ ಮಾತೆ ಇಲ್ಲ. ಅತೀ ಶೀಘ್ರ ದಲೇ ಶಿಕ್ಷಕರ ನೇಮಕಕ್ಕೆ ಈಗಾಗಲೇ ಸರಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್. ಜಿ ಸಿದ್ಧರಾಮಯ್ಯ ಭರವಸೆ ನೀಡಿದರು.

ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು,
ಗಡಿನಾಡಿನಲ್ಲಿ ಭಾಷೆಗಳ ಹೊಂದಾಣಿಕೆ ಇಲ್ಲ, ಆದ್ದರಿಂದ ಮಹಾನ್ ವ್ಯಕ್ತಿಯಗಳ ಮೂರ್ತಿಗಳನ್ನು ಪ್ರತಿಷ್ಠಾನ ಮಾಡಲು ಆಗುತ್ತಿಲ್ಲ.ಈ‌ ವಿಷಯವಾಗಿ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಲಾಗುವುದು ಎಂದರು.

ಇನ್ನೂ ಕೇಂದ್ರ ಸರ್ಕಾರದ ಆದೇಶ ಬಂದರು ಬೆಳಗಾವಿ ನಾಮಫಲಕದಲ್ಲಿ ಬೆಳಗಾಂವ ಅಂತ ಹಾಕಲಾಗುತ್ತಿದೆ ಆದಷ್ಟೂ ಬೇಗ ಸರಿಪಡಿಸಲು ಮುಂದಾಗಬೇಕು. ಸುಮಾರು, ಶೇಕಡಾ 70 ರಷ್ಟು ಬೆಳಗಾಂವ ಅಂತ ಕರೆದು ಮತ್ತೆ ಭಾಷೆಗೆ ಕಿಚ್ಚು ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸರಜೂ ಕಾಟ್ಕರ್ ಆರೋಪಿಸಿದರು.

loading...