ಸಮಗ್ರ ಮಾಹಿತಿ ಒಳಗೊಂಡ ಬಸವ ದಿನದರ್ಶಿಕೆ: ನೀಲಕಂಠ

0
24

ಬೆಟಗೇರಿ: ಕನ್ನಡನಾಡಿನ ಎಲ್ಲ ಸಹಕಾರಿ ಸಂಘ-ಸಂಸ್ಥೆಗಳು ಪ್ರತಿ ವರ್ಷ ಪ್ರಕಟಿಸುವ ದಿನದರ್ಶಿಕಗಳಿಗಿಂತ ಶ್ರೀ ಬಸವ ದಿನದರ್ಶಿಕೆ ಅತ್ಯಂತ ವಿಭಿನ್ನ, ಆಕರ್ಷಕವಾಗಿದೆ ಎಂದು ಸುಣಧೋಳಿಯ ಅಭಿನವ ಶಿವಾನಂದ ಮಹಾಸ್ವಾಮಿಜಿ ಹೇಳಿದರು.

ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ನಡೆದ 19 ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ ಕಾರ್ಯಕ್ರಮದಲ್ಲಿ ಸ್ಥಳೀಯ ಶ್ರೀ ಬಸವೇಶ್ವರ ವಿವಿಧ ಉದ್ಧೇಶಗಳ ಸಹಕಾರಿ ಸಂಘ ಈ ವರ್ಷ ಪ್ರಕಟಿಸಿದ 2017ರ ಶ್ರೀ ಬಸವ ದಿನದರ್ಶಿಕೆ ಉದ್ಘಾಟನೆ ನೇರವೇರಿಸಿ ಮಾತನಾಡಿ, ಈ ವರ್ಣ ರಂಜಿತ ಶ್ರೀ ಬಸವ ದಿನದರ್ಶಿಕೆಯಲ್ಲಿ ಪ್ರತಿ ದಿನದ ಮಹೂರ್ತ, ನಕ್ಷತ್ರ, ರಜಾದಿನ ಸೇರಿದಂತೆ, ಸಮಗ್ರ ಮಾಹಿತಿ ಒಳಗೊಂಡ ಅತ್ಯುತ್ತಮ ದಿನದರ್ಶಿಕೆಯಾಗಿದೆ ಎಂದರು.

ಮಮದಾಪೂರದ ಮೌನ ಮಲ್ಲಿಕಾರ್ಜುನಮಹಾಸ್ವಾಮಿಜಿ ಈ ಕಾರ್ಯಕ್ರಮದ ದಿವ್ಯ ಸಾನಿದ್ಯ, ಶ್ರೀ ಬಸವೇಶ್ವರ ವಿವಿಧ ಉದ್ಧೇಶಗಳ ಸಹಕಾರಿ ಸಂಘ ಅಧ್ಯಕ್ಷ ಬಸವರಾಜ ಮಾಳೇದ ಅಧ್ಯಕ್ಷತೆ ವಹಿಸಿದ್ದರು. ಇಲ್ಲಿಯ ತಾಪಂ ಮಾಜಿ ಸದಸ್ಯ ಬಸವಂತ ಕೋಣಿ, ಹಾಲಿ ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ ಮುಖ್ಯಅತಿಥಿಗಳಾಗಿ ಆಗಮಿಸಿದ್ದರು.

ಕಲ್ಲಪ್ಪ ಹುಬ್ಬಳ್ಳಿ, ಶಿವನಪ್ಪ ಕಂಬಿ, ಮಲ್ಲಿಕಾರ್ಜುನ ನೀಲನ್ನವರ, ಶಿವು ಮೆಳಣ್ಣವರ, ಅಶೋಕ ದೇಯಣ್ಣವರ, ಅಪ್ಪಯ್ಯಪ್ಪ ಸಿದ್ನಾಳ, ವೀರಭದ್ರ ದಂಡಿನ, ಈಶ್ವರ ಬಡಿಗೇರ, ಬಸವರಾಜ ಕುರಬೇಟ, ಈಶ್ವರ ಬಳಿಗಾರ, ಸುಭಾಸ ಕರೆನ್ನವರ, ಬಸವರಾಜ ಕೋಣಿ, ವಿನಾಯಕ, ಶ್ರೀಕಾಂತ, ಬಸವರಾಜ ಗುರುಸ್ವಾಮಿಗಳು ಹಾಗೂ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು, ಸ್ಥಳೀಯ ಸ್ಥಳೀಯ ಶ್ರೀ ಬಸವೇಶ್ವರ ವಿವಿಧ ಉದ್ಧೇಶಗಳ ಸಹಕಾರಿ ಸಂಘದ ಆಡಳಿತ ಮಂಡಳಿ ಸದಸ್ಯರು ಹಾಗೂ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಗೂಳಪ್ಪ ಪಣದಿ ಸ್ವಾಗತಿಸಿದರು, ಈರಣ್ಣ ಸಿದ್ನಾಳ ಕಾರ್ಯಕ್ರಮ ನಿರೂಪಿಸಿದರು, ಬಸವರಾಜ ದಂಡಿನ ಕೊನೆಗೆ ವಂದಿಸಿದರು.

loading...

LEAVE A REPLY

Please enter your comment!
Please enter your name here