ಸಮಸ್ಯೆಗಳ ಸರಮಾಲೆಯಾಗಿರುವ ಸಾರ್ವಜನಿಕ ಸರಕಾರಿ ಆಸ್ಪತ್ರೆ

0
57

 

ಶೇಖರ ಕಲ್ಲೂರ

ಚನ್ನಮ್ಮ ಕಿತ್ತೂರು 07 ಃ ಸುಸಜ್ಜಿತ ಕಟ್ಟಡ, ಸಂಪರ್ಕ ವ್ಯವಸ್ಥೆಯಂತಹ ಸೌಲಭ್ಯ ಹೊಂದಿದ್ದರೂ ಕಿತ್ತೂರಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಿಬ್ಬಂಧಿ ಹಾಗೂ ಇಚ್ಚಾಶಕ್ತಿ ಎಂಬ ಅನಾರೋಗ್ಯ ಕಾಡುತ್ತಿದೆ.

ಆಸ್ಪತ್ರೆಗೆ ಪ್ರತಿದಿನ ನೂರಾರು ರೋಗಿಗಳು ಬಂದು ಹೋಗುತ್ತಿದ್ದರೂ ತಜ್ಞ ವೈದ್ಯರು, ಎಮ್.ಡಿ. ಪದವಿಧರ ವೈದ್ಯಾಧಿಕಾರಿಗಳ ಹುದ್ದೆಗೆ ಮಂಜುರಾತಿ ಇದ್ದರೂ ಕೂಡ ಯಾವೊಬ್ಬ ತಜ್ಞ ವೈದ್ಯರು ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ಮುಂದೆ ಬರುತ್ತಿಲ್ಲ. ಹಗಲು ಮತ್ತು ರಾತ್ರಿ ವೇಳೆ ಇಬ್ಬರು ವೈದ್ಯರ ಅವಶ್ಯಕತೆ ಇದ್ದರೂ ಸರಕಾರ ಗಣನೆಗೆ ತೆಗೆದುಕೊಂಡಿಲ್ಲ. ವೈದ್ಯರಿಲ್ಲದ ಕಾರಣ ಬಡ ರೋಗಿಗಳು ಪರದಾಡುವ ಪರಿಸ್ಥಿತಿ ಉದ್ಭವವಾಗಿದೆ.
ಔಷದಿ ಕೊರತೆ, ಹೃದಯ ಸಂಬಂದಿ ಕಾಯಿಲೆಗಳಿಗೆ ಸಂಬಂದ ಪಟ್ಟ ಔಷದಿ, ಇಂಜೆಕ್ಷನ್ ಮತ್ತು ಮಾತ್ರೆಗಳು ಇಲ್ಲ. ಟ್ರಿಫ್ ಸೆಟ್‍ಗಳು ಇಲ್ಲದಿರುವದು ಔಷದಿ ತಜ್ಞರಿಂದ ಮಾಹಿತಿ ತಿಳಿದು ಬಂತು ಹೆಸರು ಹೇಳಲು ಇಚ್ಚಿಸದ ರೋಗಿಯೊಬ್ಬರು ಹೆಚ್ಚಾಗಿ ಇಲ್ಲಿ ಔಷದಿಗಳನ್ನು ಹೊರಗಡೆ ಬರೆದುಕೊಡುತ್ತಾರೆ ಎಂದು ತಿಳಿಸಿದರು.

ಭದ್ರತೆ ಕೊರತೆ
ವೈದ್ಯ ಮಾತನಾಡಿ ರೋಗಿಗಳ ಸಂಬಂಧಿಕರಿಂದ ಪದೇ ಪದೇ ಹಲ್ಲೆಗಳು ನಡೆಯುತ್ತವೆ ಹೀಗಾಗಿ ಇಲ್ಲಿ ಕಾರ್ಯನಿರ್ವಹಿಸಲು ಯಾವುದೆ ವೈದ್ಯರು ಮುಂದೆ ಬರುತ್ತಿಲ್ಲ ಅವುಗಳನ್ನು ಸಹಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದೇವೆ.

ರೋಗಿಗಳನ್ನು ಬೆಡ್ ಮೇಲೆ ಹಾಕಲಾಗಿತ್ತು ಆದರೆ ಬೆಡ ಸಿಟ್ ಹಾಕಿರಲಿಲ್ಲ ಸ್ವಚ್ಚತೆ ತಕ್ಕ ಮಟ್ಟಿಗೆ ಇಲ್ಲ ವಿದ್ಯುತ್ ವ್ಯವಸ್ಥೆ ಇತ್ತು. ಕುಡಿಯಲು ನೀರಿನ ಲಭ್ಯತೆ ಇತ್ತು ಆದರೆ ಸ್ವಚ್ಚತೆ ಇರಲಿಲ್ಲ. ಮಹಿಳಾ ಶೌಚಾಲಯ ಬಾಗಿಲು ತೆರಿದಿದ್ದು, ಪುರುಷ ಶೌಚಾಲಯಕ್ಕೆ ಬೀಗ ಜಡಿಯಲಾಗಿದೆ. ಪ್ರಸೂತಿ ಕೊಠಡಿಗಳಲ್ಲಿ ಸ್ವಚ್ಚತೆ ಇಲ್ಲ ಅಲ್ಲದೆ ಸಲಕರಣೆಗಳನ್ನು ಬೇಕಾ ಬಿಟ್ಟಿಯಾಗಿ ಎಸೆಯಲಾಗಿದೆ ಸಿರಿಂಜ್ ಸಲಾಯನ್ ಬಾಟಲಿಗಳು ಸೇರಿದಂತೆ ತ್ಯಾಜ್ಯಗಳನ್ನು ಸರಿಯಾಗಿ ವಿಲೇವಾರಿ ಮಾಡುತ್ತಿಲ್ಲ ಇದು ಆಸ್ಪತ್ರೆಯ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

ಸಿಬ್ಬಂದಿ ಕೊರತೆ
3 ತಜ್ಞ ವೈದ್ಯಾಧಿಕಾರಿಗಳ ಹುದ್ದೆ, 1 ಸ್ತ್ರೀರೋಗ ತಜ್ಞರು, 1 ಹಿರಿಯ ಔಷಧ ತಜ್ಞರು, 3 ಕಿ.ಪು.ಆ ಸಹಾಯಕ 8 ಡಿ ದರ್ಜೆ ಹುದ್ದೆಗಳು ಖಾಲಿ ಇವೆ. ಅಂಬ್ಯಲೆನ್ಸ್‍ಗೆ ಚಾಲಕರ ಕೊರತೆ ಇದೆ.

ಸುಸ್ಥಿತಿಯಲ್ಲಿ ಇರದ ಅಂಬ್ಯಲೆನ್ಸ್
ತುರ್ತು ಪರಿಸ್ಥಿತಿಯಲ್ಲಿ ರೋಗಿಗಳಿಗೆ ಚಿಕಿತ್ಸೆಗೆ ಅನುಕೂಲವಾಗಲೆಂದು 15 ವರ್ಷಗಳ ಹಿಂದೆ ಅಂಬ್ಯಲೆನ್ಸ್ ನೀಡಿದ್ದಾರೆ ಆದರೆ ವಾಹನ ಸ್ಥಿತಿಯಂತು ಆದೋಗತಿಗೆ ಸಾಗಿದೆ ವಾಹನ ಸುಸ್ಥಿತಿಯಲ್ಲಿ ಇಲ್ಲ ಅಂಬ್ಯಲೆನ್ಸ್‍ನ್ನು ರೋಗಿಗಳೆ ತಳ್ಳಿ ಪ್ರಾರಂಭಿಸಬೇಕು.

ವೈದ್ಯಕೀಯ ಸಲಕರಣೆಗಳ ಕೊರತೆ
ಅನೇಕ ವರ್ಷಗಳಿಂದ ಚಿಕ್ಕ ಮಕ್ಕಳಿಗೆ ಉಪಯೋಗಿಸುವಂತಹ 100 ಎಮ್.ಎ. ಕ್ಷ-ಕಿರಣ ಯಂತ್ರ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಬಡ ರೋಗಿಗಳು ಅಪಾರ ಹಣ ಖರ್ಚು ಮಾಡಿ ಖಾಸಗಿಯಾಗಿ ಎಕ್ಸ್‍ರೇ ಮಾಡಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಕನಿಷ್ಠ 300 ಎಮ್.ಎ. ಕ್ಷ-ಕಿರಣ ಯಂತ್ರವಾದರೂ ಆಸ್ಪತ್ರೆಗೆ ಅವಶ್ಯಕತೆ ಇದೆ.
ಇನ್ನಾದರೂ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು ಹಿರಿಯ ಅಧಿಕಾರಿಗಳು ಇತ್ತ ಕಡೆಗೆ ಗಮನ ಹರಿಸಿ ಸಮಸ್ಯೆಗೆ ಸ್ಪಂಧಿಸುವರೆ? ಕಾದು ನೋಡಬೇಕಾಗಿದೆ.

loading...

LEAVE A REPLY

Please enter your comment!
Please enter your name here