ಸಮಾಜದಲ್ಲಿ ನಿಸ್ವಾರ್ಥ ಸೇವೆ ಬೆಳೆಯಬೇಕು: ಗಣೇಶ ನಾಯಕ

0
14

ಗುಳೇದಗುಡ್ಡ: ಧಾರ್ಮಿಕ ಆಚರಣೆಯೊಂದಿಗೆ ನಮ್ಮ ಜೀವನ ಪದ್ಧತಿಗಳು ಉನ್ನತಗೊಳ್ಳಬೇಕು. ಪ್ರತಿಯೊಬ್ಬರಲ್ಲಿ ಆಧ್ಯಾತ್ಮಿÃಕತೆ, ನಿಸ್ವಾರ್ಥ ಸೇವೆ ಬೆಳೆಯಬೇಕು. ಅದು ಧರ್ಮಸ್ಥಳ ಯೋಜನೆ ಉದ್ದೆÃಶವಾಗಿದೆ.
ಜೀವನದಲ್ಲಿ ಆಧುನಿಕತೆ ಇರಲಿ. ಆದರೆ ಜೀವನದೊಂದಿಗೆ ಆಚರಣೆಗಳ್ಳುವ ಭಾರತೀಯ ಸಂಪ್ರದಾಯ, ಸಂಸ್ಕೃತಿಗಳಲ್ಲಿ ಆಧುನಿಕತೆ ಬೆರಸಬಾರದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಾದಾಮಿ ತಾಲೂಕು ಯೋಜನಾಧಿಕಾರಿ ಗಣೇಶ ನಾಯಕ ಹೇಳಿದರು.

ಅವರು ಸ್ಥಳೀಯ ಮರಡಿಮಠದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸದ ಅಡಿಯಲ್ಲಿ ಮಹಿಳೆಯರಿಗೆ ಉಡಿ ತುಂಬುವ ಹಾಗೂ ಮಹಿಳಾ ವಿಚಾರ ಗೋಷ್ಠಿಯಲ್ಲಿ ಮಾತನಾಡಿ, ಜಾತಿ, ಧರ್ಮ ಬಿಟ್ಟು ಪ್ರತಿಯೊಬ್ಬರು ಸಾಮರಸ್ಯದಿಂದ ಬದುಕಬೇಕು. ಅಂದಾಗ ಜೀವನ ಸಾರ್ಥಕವಾಗುತ್ತದೆ ಎಂದರು.
ಅಶೋಕ ನಾಯನೇಗಲಿ, ಜಯಶ್ರಿÃ ಆಲೂರ ಮಾತನಾಡಿದರು. ಶ್ರಿÃಅಭಿನವ ಕಾಡಸಿದ್ದೆÃಶ್ವರ ಶ್ರಿÃಗಳು ಸಾನಿಧ್ಯ ವಹಿಸಿದ್ದರು. ಗುಳೇದಗುಡ್ಡ ವಲಯ ಮೇಲ್ವಿಚಾರಕ ನಾಗರಾಜ ಜಾಡರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜ್ಞಾನ ವಿಕಾಸ ಸಮಿತಿ ಸಮನ್ವಯಾಧಿಕಾರಿ ಗೌರಮ್ಮ ಪೂಜಾರ, ಸಂಗಪ್ಪ ಜವಳಿ, ಜಯಶ್ರಿÃ ಆಲೂರ, ಸಂಗಮೇಶ ರ‍್ಯಾಖಾ, ಲಕ್ಷö್ಮಣ ದಡಗಿ, ಯೋಜನೆಯ ತಾಲೂಕು ಕೃಷಿ ಅಧಿಕಾರಿ ಗಂಗಾಧರ, ಸೇವಾ ಪ್ರತಿನಿಧಿಗಳಾದ ಸುಮಿತ್ರಾ ತಾಂಡೂರ, ಸುನಿತಾ ಮರಡಿಮಠ, ಶಿವಲೀಲಾ ಬಾಗಲಕೋಟ, ಬಸಮ್ಮ ಹಟ್ಟಿ, ಲಕ್ಷಿö್ಮÃ ಮುಚಖಂಡಿ, ಕಿರಣ ಬಸುಪಟ್ಟದ, ಮಂಜುಳಾ ಬೋರಣ್ಣವರ, ಮಂಜುಳಾ ಚಿತ್ತರಗಿ, ವಾಸಂತಿ, ಮಲ್ಲಮ್ಮ ಪೂಜಾರ, ನಿರ್ಮಲಾ ಹಿರೇಮಠ ಮತ್ತಿತರರು ಇದ್ದರು.

loading...