ಸರಕಾರಕ್ಕೆ ಸಲಹೆ ನೀಡಿದ ಸಿದ್ದು

0
1

ಮೈಸೂರು

ಪಿಯುಸಿವರೆಗೂ ಆನ್‌ಲೈನ್ ಶಿಕ್ಷಣ ರದ್ದಾಗಬೇಕು ಎಂದು ಮಾಜಿ ಸಿಎಂ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸರಕಾರಕ್ಕೆ ಸಲಹೆ ನೀಡಿದ್ದಾರೆ.

ಶುಕ್ರವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ನಾನು ಮೊದಲಿನಿಂದಲೂ ಆನ್‌ಲೈನ್ ಶಿಕ್ಷಣ ಪದ್ದತಿಗೆ ವಿರೋಧ ಮಾಡುತ್ತಿದ್ದೇನೆ. ಸರಕಾರ ೫ನೇ ತರಗತಿಯವರೆಗೆ ಆನ್‌ಲೈನ್ ಶಿಕ್ಷಣ ರದ್ದು ಮಾಡಿದೆ. ಇದು ಸರಿಯಾದ ಕ್ರಮ. ಆದರೆ, ಪಿಯುಸಿವರೆಗೂ ಆನ್‌ಲೈನ್ ಶಿಕ್ಷಣ ರದ್ದಾಗಬೇಕು ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದರು.

ಮಕ್ಕಳಿಗೆ ನೆರವಾಗಿ ತರಗತಿಯಲ್ಲಿಯೇ ಭೋದನೆ ಮಾಡಬೇಕು. ಆ ಕಾರಣಕ್ಕಾಗಿ ಅಕ್ಟೋಬರ್‌ವರಗೆ ಶಾಲೆ ತೆರೆಯಬಾರದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದರು. ಖಾಸಗಿ ಶಾಲೆಗಳ ಶುಲ್ಕ ಕಡಿಮೆ ಮಾಡುವ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರವನ್ನು ಸರಕಾರ ತೀರ್ಮಾನ ಮಾಡಬೇಕೆಂದು ಹೇಳಿದರು.

loading...