ಸರಕಾರದಿಂದ ಸೂರು ರಹಿತ ಎಲ್ಲರಿಗೂ ವಸತಿ ಸೌಲಭ್ಯ : ಶಾಸಕ ಹುಕ್ಕೇರಿ

0
143

ಕನ್ನಡಮ್ಮ ಸುದ್ದಿ

ಚಿಕ್ಕೋಡಿ 07: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಜನಪರ ಕಾರ್ಯಗಳನ್ನು ಕೈಕೊಂಡಿದ್ದು, ಚಿಕ್ಕೋಡಿ-ಸದಲಗಾ ವಿಧಾನಸಭಾ ಮತಕ್ಷೇತ್ರದ ಸೂರು ರಹಿತರಾಗಿರುವ ಎಲ್ಲರಿಗೂ ವಸತಿ ಸೌಲಭ್ಯ ಕಲ್ಪಿಸಿಕೊಡಲು ಸರಕಾರ ಸಮ್ಮತಿ ಸೂಚಿಸಿದೆ ಎಂದು ಕಂದಾಯ ಇಲಾಖೆ ಸಂಸದೀಯ ಕಾರ್ಯದಶರ್ಿ ಗಣೇಶ ಹುಕ್ಕೇರಿ ಹೇಳಿದರು.
ನಾಯಿಂಗ್ಲಜ ಗ್ರಾಮದಲ್ಲಿ ಶಾಸಕರ ಅನುದಾನದಡಿ 30 ಲಕ್ಷ ವೆಚ್ಚದಡಿ ಥಳದೇಶ್ವರ ದೇವಸ್ಥಾನದ ಸಮುದಾಯ ಭವನ ಕಾಮಗಾರಿಗೆ ಅಡಿಗಲ್ಲು ಸಮಾರಂಭ ನೆರವೇರಿಸಿ ಮಾತನಾಡುತ್ತ, ಸಂಸದ ಪ್ರಕಾಶ ಹುಕ್ಕೇರಿ ಅವರು ಮತಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಒದಗಿಸುವಂತೆ ಮುಖ್ಯಮಂತ್ರಿಗಳನ್ನು ಕೋರಿದ್ದು, ಅದರಂತೆ ಮುಖ್ಯಮಂತ್ರಿಗಳು ಸಹ ವಿವಿಧ ಇಲಾಖೆಯಿಂದ ದೊರೆಯುವ ಗರಿಷ್ಠ ಅನುದಾನವನ್ನು ಮತಕ್ಷೇತ್ರಕ್ಕೆ ನೀಡಲು ಸಹಮತ ವ್ಯಕ್ತಪಡಿಸಿದ್ದಾರೆಂದರು.
ಮುಂದುವರೆದ ಅವರು, ನಾಯಿಂಗ್ಲಜ ಕೆರೆಗೆ ನೀರು ತುಂಬಿಸುವ ಕಾಮಗಾರಿಗೆ ಈಗಾಗಲೇ ಚಾಲನೆ ದೊರೆತಿದ್ದು, ಪೈಪಲೈನ್ ಕಾಮಗಾರಿಗೆ ಯಾವುದೇ ರೈತರು ಅಡಚಣೆ ಮಾಡಬಾರದು. ಈ ಯೋಜನೆಯಿಂದ ಈ ನಾಯಿಂಗ್ಲಜ, ಮಮದಾಪೂರ ಸೇರಿದಂತೆ ಸುತ್ತಲಿನ ಗ್ರಾಮಗಳ ಅಂತರ್ಜಲಮಟ್ಟ ವೃದ್ಧಿಯಾಗಿ ಈ ಭಾಗದಲ್ಲಿ ಹಸಿರುಕ್ರಾಂತಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ವಿನೋದ ಕಾಗೆ, ಅಜೀತ ಯರೋಳ್ಳಿ, ಗ್ರಾಪಂ ಅಧ್ಯಕ್ಷ ಸಂತೋಷ ಘಸ್ತಿ, ವಿಠ್ಠಲ ಕವಲಾಪುರೆ, ರಮೇಶ ಭಗನ್ನವರ, ಬಿ.ಎಸ್. ಪಾಟೀಲ, ಶಿವಾನಂದ ವಡಗೋಲ, ಮಹಾದೇವ ಬುಬನಾಳೆ, ಭೂಪಾಲ ಕಾಂಬಳೆ, ಪರಶುರಾಮ ಕಾಂಬಳೆ, ಚಂದ್ರಕಾಂತ ನಾಯಿಕ, ಸುರೇಶ ಘಸ್ತಿ, ಶರದ ಶಿಂಧೆ ಉಪಸ್ಥಿತರಿದ್ದರು

loading...