ಸರಕು ಸೇವಾ ತೆರಿಗೆ ಗ್ರಂಥ ಲೋಕಾರ್ಪಣೆ

0
21

ಕನ್ನಡಮ್ಮ ಸುದ್ದಿ
ಹುಕ್ಕೇರಿ 01: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ಜರುಗಿತು. ಕಾಲೇಜಿನ ವಾಣಿಜ್ಯಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾದ ಪ್ರೊ. ವಿರುಪಾಕ್ಷಿ ಪಾಟೀಲ ಹಾಗೂ ನಿರ್ವಹಣಾಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಪ್ರೊ. ಮಲ್ಲಿಕಾರ್ಜುನ ದಲಾಲ ಜೊತೆಗೂಡಿ ಸರಕು ಮತ್ತು ಸೇವಾ ತೆರಿಗೆ ಪುಸ್ತಕವನ್ನು ರಚಿಸಿದ್ದಾರೆ. ಈ ಪುಸ್ತಕವು ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯ, ಬೆಳಗಾವಿಯ ಬಿ.ಕಾಂ 5ನೇ ಹಾಗೂ 6ನೇ ಸೆಮಿಸ್ಟರಿನ ವಿದ್ಯಾರ್ಥಿಗಳಿಗೆ ಉಪಯುಕ್ತ ಪಠ್ಯವಾಗಿದೆ. ಕಾಲೇಜಿನ ಪ್ರಾಚಾರ್ಯರಾದ ಡಾ. ಎಸ್. ಶ್ರೀನಿವಾಸರವರು ಪುಸ್ತಕವನ್ನು ವಿದ್ಯುಕ್ತವಾಗಿ ಬಿಡುಗಡೆಗೊಳಿಸಿದರು.
ಈ ಸಮಾರಂಭದಲ್ಲಿ ಗ್ರಂಥಪಾಲಕರಾದ ಪ್ರೊ. ರಾಜೇಶ ಕುಂಬಾರ, ಪ್ರೊ. ಡಿ. ಎಫ್. ತಳವಾರ, ಪ್ರೊ. ಯಲಗೌಡ ಢಂಗೆ, ಪ್ರೊ. ಬಸವರಾಜ ವಾಸನ, ಪ್ರೊ. ರೇಖಾ ನೀರಲಗಿ, ಪ್ರೊ. ಲಕ್ಷ್ಮಣ ಪತಾಯಿತ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬಿ.ಕಾಂ. ಅಂತಿಮ ವರ್ಗದ ವಿದ್ಯಾರ್ಥಿನಿಯರು ನಿರ್ವಹಿಸಿದರು.
..

loading...