ಸರಳ ವ್ಯಕ್ತಿತ್ವದ ಆದರ್ಶ ನಾಯಕ ವಾಜಪೇಯಿ: ಪ್ರದೀಪ

0
18

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ: ಮಾಜಿ ಪ್ರಧಾನಿ ವಾಜಪೇಯಿ ಅವರು ಸರಳ ವ್ಯಕ್ತಿತ್ವದ ಆದರ್ಶ ನಾಯಕ ಎಂದು ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಹೇಳಿದರು.
ಬಿಜೆಪಿ ಮಹಾನಗರ ಘಟಕ ಶುಕ್ರವಾರ ಏರ್ಪಡಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕೀಯ ಜೀವನದಲ್ಲಿ ಅತಿ ಎತ್ತರಕ್ಕೆ ಬೆಳೆದರೂ ಸಾಮಾನ್ಯ ವ್ಯಕ್ತಿಯಂತೆ ಜೀವನ ನಡೆಸಿದರು. ಲಕ್ಷಾಂತರ ಕಾರ್ಯಕರ್ತರು ದೇಶದ ಬಗ್ಗೆ ಕನಸು ಕಾಣಲು ಅವರು ಸ್ಫೂರ್ತಿಯಾಗಿದ್ದರು. ಪಕ್ಷ ಇಂದು ಈ ಮಟ್ಟಕ್ಕೆ ಬೆಳೆಯಲು ಅವರೇ ಕಾರಣ. ದೇಶದ ಪ್ರಗತಿಗೂ ಅಪಾರ ಕೊಡುಗೆ ನೀಡಿದರು.ರಸ್ತೆಗಳು ಅಭಿವೃದ್ಧಿ ಹೊಂದಿದ್ದು ಅವರ ಅವಧಿಯಲ್ಲಿಯೇ ಎಂದು ಹೇಳಿದರು. 1994ರಲ್ಲಿ ಅವರು ಹುಬ್ಬಳ್ಳಿಗೆ ಬಂದಿದ್ದಾಗ ನಾವು ನಾಲ್ಕೈದು ಮಂದಿ ಅವರನ್ನು ಭೇಟಿಯಾಗಿದ್ದೆವು. ಇಲ್ಲಿಂದ ಅವರು ಗೋವಾ ಹೋಗಿ ಅಲ್ಲಿಂದ ದೆಹಲಿಗೆ ತೆರಳುವವರಿದ್ದರು. ಅವರು ಹೊರಟ ನಂತರ ಅವರ ವಾಹನವನ್ನು ಗೋವಾ ವರೆಗೂ ಹಿಂಬಾಲಿಸಿದೆವು. ಇದು ಗಮನಕ್ಕೆ ಬಂದ ನಂತರ ವಾಹನ ನಿಲ್ಲಿಸಿದ ಅವರು ‘ಹಿಂದೆ ಏಕೆ ಬರುತ್ತಿದ್ದೀರ’ ಎಂದರು.
ನಿಮ್ಮನ್ನು ಬೀಳ್ಕೊಡಲು ಎಂದೆವು. ಗೋವಾ ತಲುಪಿದ ನಂತರ ಎಲ್ಲರಿಗೂ ಊಟ ಮಾಡಿಸಿ ಕಳುಹಿಸಿದರು. ಅಂತಹ ಸಹೃದಯಿ ಅವರಾಗಿದ್ದರು ಎಂದು ನೆನಪು ಮಾಡಿಕೊಂಡರು.ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ. ನಾಗರಾಜ ಮಾತನಾಡಿ, ನಮ್ಮಂತಹ ಲಕ್ಷಾಂತರ ಕಾರ್ಯಕರ್ತರಿಗ ವಾಜಪೇಯಿ ಆದರ್ಶವಾಗಿದ್ದಾರೆ. ಸರ್ವ ಧರ್ಮ, ಜಾತಿ, ಪಕ್ಷಗಳ ಮೇಲೆ ಪ್ರಭಾವ ಬೀರಿದ ನಾಯಕರಾಗಿದ್ದರು. 27 ಲಕ್ಷಗಳ ಮೈತ್ರಿ ಸರ್ಕಾರವನ್ನು ಯಶಸ್ವಿಯಾಗಿ ನಡೆಸಿದರು. ಒಳಗೊಳ್ಳುವಿಕೆಯ ರಾಜಕಾರಣ ಮಾಡಿದರು. ತಾತ್ವಿಕ ವಿರೋಧಗಳಿದ್ದರೂ ವೈಯಕ್ತಿಕ ಸಂಬಂಧಗಳನ್ನು ಉಳಿಸಿಕೊಂಡಿದ್ದರು ಎಂದರು. ಉಪ ಮೇಯರ್ ಮೇನಕ ಹುರುಳಿ, ಸದಸ್ಯ ಶಿವಾನಂದ ಮುತ್ತಣ್ಣವರ, ಬಿಜೆಪಿ ಮಹಾನಗರ ಘಟಕದ ಅಧ್ಯಕ್ಷ ನಾಗೇಶ್ ಕಲಬುರ್ಗಿ ಇದ್ದರು.

loading...