ಸರ್ಕಾರಿ ವಿರೋಧಿ ಪ್ರತಿಭಟನೆಗಳನ್ನು ಹತ್ತಿಕ್ಕಲು ಹಿಂಸಾಚಾರ : ತನಿಖೆಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಕರೆ

0
16

ವಿಶ್ವಸಂಸ್ಥೆ:-  ಇರಾಕ್ ನಲ್ಲಿ ನಡೆದ ಸರ್ಕಾರಿ ವಿರೋಧಿ ಶಾಂತಿಯುತ ಪ್ರತಿಭಟನೆಗಳ ವಿರುದ್ಧ ಹಿಂಸಾಚಾರ ಪ್ರಯೋಗ ಘಟನೆ ಸಂಬಂಧ ಇರಾಕ್ ಪ್ರಾಧಿಕಾರ ತನಿಖೆ ನಡೆಸಬೇಕು ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ಹೇಳಿದೆ.
ಇರಾಕ್ ನಲ್ಲಿ ಶಾಂತಿಯುತ ಪ್ರತಿಭಟನೆಗೆ ಹಕ್ಕಿದ್ದು ಹಿಂಸಾಚಾರ ಘಟನೆ ಕುರಿತಂತೆ ಪಾರದರ್ಶಕ ತನಿಖೆಯಾಗಬೇಕಿದೆ ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ತಿಳಿಸಿದೆ.
ಪ್ರತಿಭಟನಾಕಾರರ ಸಾವಿಗೆ ಮತ್ತು ಶಸ್ತ್ರರಹಿತರ ನಿಯಮಬಾಹಿರ ಬಂಧನಕ್ಕೆ ಮಂಡಳಿ ಸದಸ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾಕಾರರ ನ್ಯಾಯಾಂಗದಿಂದ ಹೊರಗಿನ ಸಾವು ಮತ್ತು ಅಪಹರಣ ಪ್ರಕರಣಗಳಿಗೂ ಮಂಡಳಿ ಆತಂಕ ವ್ಯಕ್ತಪಡಿಸಿದ್ದು ಹಿಂಸಾಚಾರ ತಡೆಯುವಂತೆ ಆಗ್ರಹಿಸಿದೆ,
ಸರ್ಕಾರದ ರಾಜೀನಾಮೆಗೆ ಆಗ್ರಹಿಸಿ ಕಳೆದ ಅಕ್ಟೋಬರ್ ನಿಂದ ಇರಾಕ್ ನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆ ವೇಳೆ 400 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು ಸುಮಾರು 15 ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

loading...