ಸವದತ್ತಿ: ಗ್ರಾಮೀಣ ಅಂಚೆ ಸೇವಕರಿಂದ ಮುಷ್ಕರ ಆರಂಭ

0
45

ಕನ್ನಡಮ್ಮ ಸುದ್ದಿ-ಸವದತ್ತಿ : ಕೇಂದ್ರ ಸರಕಾರಿ ನೌಕರರಿಗೆ ಏಳನೇಯ ವೇತನ ಆಯೋಗ ಜಾರಿಯಾಗಿ ಬಹುದಿನಗಳು ಕಳೆದವು ಆದರೆ ಕೇಂದ್ರ ಸರಕಾರದ ಅಂಚೆ ಇಲಾಖೆಯಲ್ಲಿ ಗ್ರಾಮೀಣ ಅಂಚೆ ಸೇವಕರಾಗಿ ಸೇವೆ ಸಲ್ಲಿಸುತ್ತಿರುವ ನಮಗೆ ಏಳನೇಯ ವೇತನ ಆಯೋಗ ಇನ್ನು ಮರಿಚಿಕೆಯಾಗಿದೆ. ಇಲಾಖೆಯು ತಾನೆ ನೇಮಿಸಿದ ಕಮಲೇಶಚಂದ್ರ ಕಮೀಟಿಯು ತನ್ನ ವರದಿಯನ್ನು ದಿ:24-11-2016 ರಂದು ಸಲ್ಲಿಸಿದ್ದರು ಆ ವರದಿಯನ್ನು ಅನುಷ್ಟಾನಗೋಳಿಸಲು ಹಿಂದೆ ಮುಂದೆ ನೋಡುತ್ತಿದೆ ಎಂದು ಅಖೀಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದವರು ಗುರುವಾರದಂದು ಅನಿರ್ದಿಷ್ಟ ಮುಷ್ಕರವನ್ನು ಹಮ್ಮಿಕೊಂಡಿದ್ದಾರೆ. ಮುಷ್ಕರದಲ್ಲಿ ಸಂಘಟನೇಯ ಮುಖಂಡರಾದ ಎಸ್.ಎನ್.ಮಹಾರಾಜನವರ ಮಾತನಾಡಿ ಸವದತ್ತಿ ತಾಲೂಕಿನ 30 ಗ್ರಾಮಗಳ ಅಂಚೆ ಸ್ವಯಂ ಸೇವಕರು ಮುಷ್ಕರದಲ್ಲಿ ಪಾಲ್ಗೋಂಡಿದ್ದಾರೆ ಇದರಿಂದ ಗ್ರಾಮೀಣ ಮಟ್ಟದಲ್ಲಿ ಅಂಚೆ ಸೇವೆ ಸಂಪೂರ್ಣವಾಗಿ ಸ್ಥಗೀತ ಗೋಂಡಿದೆ ನಮ್ಮ ಬೇಡಿಕೆಗಳು ಇಡೆರುವವರೆಗು ಹಿಂಪಡೆಯುವುದಿಲ್ಲ ಎಂದು ಹೇಳೀದರು.

ಈ ಸಂದರ್ಭದಲ್ಲಿ ಸದಾಶಿವ ನಿಂಗಪ್ಪ ತಳವಾರ, ಸವಿತಾ ಬಟಕೂರಕಿ, ರೇಣುಕಾ ಎಸ್.ಮಡಿವಾಳರ, ಈರವ್ವ ಮೇನಸಿನಕಾಯಿ, ಎ.ಎಸ್.ಪಾಟೀಲ, ಎಸ್.ಎಸ್.ಹೀರೆಮಠ, ಜುಂಜಾಳಿ ಮುಷ್ಕರದಲ್ಲಿ ಪಾಲ್ಗೋಂಡಿದ್ದರು.

loading...