ಸವಾಯಿ ಗಂಧರ್ವರ ಸ್ಮಾರಕ ಭವನದಲ್ಲಿ ಜಾನಪದ ಕಾರ್ಯಕ್ರಮ

0
23

ಕುಂದಗೋಳ :ಇಂದಿನ ಕಲಿಯುಗದ ಸಿನಿಮಾ, ದುರದರ್ಶನಗಳ ಹಾವಳಿಯಿಂದ ನಶಸಿ ಹೋಗುತ್ತಿರುವ ದೊಡ್ಡಾಟಗಳು ಹಾಗೂ ನಾಟಕಗಳನ್ನು ಉಳಿಸಿಕೊಂಡು ಹೋಗಲು ಇಂದಿನ ಯುವ ಪೀಳಿಗೆ ಪ್ರಯತ್ನಿಸುವದು ಅವಶ್ಯವಾಗಿದೆ ಎಂದು ಶಾಸಕರಾದ ಸಿ.ಎಸ್.ಶಿವಳ್ಳಿ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಅವರು ರವಿವಾರ ಪಟ್ಟಣದ ಸವಾಯಿ ಗಂಧರ್ವ ಸ್ಮಾರಕ ಭವನದಲ್ಲಿ ತಾಲೂಕಾ ಕಲಾವಿದರ ಸಂಘ, ಶರಣ ಸಾಹಿತ್ಯ ಪರಿಷತ್,ಕನ್ನಡ ಸಾಹಿತ್ಯ ಪರಿಷತ್ ,ಕರ್ನಾಟಕ ಜಾನಪದ ಪರಿಷತ್ತುಗಳೊಂದಿಗೆ ಕಾರ್ಯನಿರ ಪತ್ರಕರ್ತರ ಸಂಘದ ಸಹಯೋಗದಲ್ಲಿ ಗ್ರಾಮರಂಗ (ರಿ) ಇಂಗಳಗಿ ಇವರಿಂದ ನವ್ಯ ಮೂಡಲಪಾಯ ದೊಡ್ಡಾಟವಾದ ವೀರರಾಣಿ ಕಿತ್ತೂರು ಚನ್ನಮ್ಮ ಪ್ರದರ್ಶನದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ದೊಡ್ಡಾಟಗಳು ನಮ್ಮ ಐತಿಹಾಸಿಕ ಪರಂಪರೆಗಳನ್ನು ನೆನೆಪಿಸಿಕೊಳ್ಳುವ ಪ್ರಮುಖ ಕಲೆಯಾಗಿದ್ದು, ಇತ್ತೀಚಿನ ದಿನಮಾನಗಳಲ್ಲಿ ದೃಶ್ಯಮಾದ್ಯಕ್ಕೆ ಜನತೆ ಮಾರುಹೋಗುತ್ತಿರುವದು ವಿಪರ್ಯಾಸವಾಗದೆ  ನಮ್ಮ ಹಿಂದಿನ ಪರಂಪರೆ ಸಂಸ್ಕ್ಕತಿಕ ಜಾನಪದಗಳನ್ನೊಳಗೊಂಡ ಮೂಡಲಪಾಯ ದೊಡ್ಡಾಟ ಪ್ರದರ್ಶನವನ್ನು ಇಂಗಳಗಿ ಗ್ರಾಮ ರಂಗದವರು ಈಗಿನ ಯುವ ಪೀಳಿಗೆಗೆ ಪುನ: ನೆನೆಪಿಸಿಕೊಡುತ್ತಿರುವದು ಶ್ಲಾಘನೀಯ ಎಂದರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡ್ರ   ಕುಂದಗೋಳ ತಾಲೂಕು ಕಲೆ-ಸಾಹಿತ್ಯ-ಸಂಗೀತಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದು, ಸವಾಯಿ ಗಂಧರ್ವರ ಸ್ಮಾರಕ ಭವನವನ್ನು ಈಗಾಗಲೇ ನನ್ನ ಅವಧಿಯಲ್ಲಿ 2 ಕೋಟಿ ಹಣದಲ್ಲಿ ಸುಂದರವಾಗಿ ನಿರ್ಮಿಸಿ ಕಲಾರಸಿಕರ ಕನಸನ್ನು ನನಸನ್ನು ಮಾಡಿದ್ದೇನೆ  ಇದರಂತೆ ಹಾಲಿ ಶಾಸಕರಾದ ಶಿವಳ್ಳಿ ಅವರು ಗುಡಗೇರಿಯ ಖ್ಯಾತ ರಂಗ ಕಲಾವಿದ ದಿ:ಎನ್.ಬಸುರಾಜ ಅವರ ಸ್ಮಾರಕ ಭವನವನ್ನು ತಾಲೂಕಿನಲ್ಲಿ ನಿರ್ಮಿಸಿ ರಂಗಕಲೆಗೆ ಅಲ್ಲದೆ ಕ್ರೀಡಾಪಟುಗಳಿಗೆ ಪ್ರೌತ್ಸಾಹಹಿಸಬೇಕೆಂದು ಮನವಿ ಮಾಡಿಕೊಂಡರು.

ಈ ಸಮದರ್ಭದಲ್ಲಿ ಜಾನಪದ ಕಲಾವಿದರಾದ ಪರಮೇಶಪ್ಪ ನಾಯ್ಕರ, ಫಕ್ಕೀರಪ್ಪ ಭಜಂತ್ರಿ, ಅಡಿವೆಯ್ಯಸ್ವಾಮಿ ಹಿರೇಮಠ, ದ್ಯಾಮಣ್ಣ ಬಡಿಗೇರ, ಮಾದೇವಪ್ಪ ಮುಳ್ಳುರ, ಸುರೇಶ ಅರ್ಕಸಾಲಿ, ಮಲ್ಲೇಶಪ್ಪ ತಡಸದ ಇವರುಗಳನ್ನು ಶಾಲುಹೊದಿಸಿ ಫಲಪುಷ್ಪನೀಡಿ ಸನ್ಮಾಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ತಾ.ಪಂ.ಅದ್ಯಕ್ಷೆ ಅಂಬಮ್ಮ ಪಾಟೀಲ, ಉಪಾದ್ಯಕ್ಷ ಚಂದ್ರಶೇಖರ ಬಿಸಿರೊಟ್ಟಿ,ಜಿ.ಪಂ.ಸದಸ್ಯ ವೆಂಕನಗೌಡ ಹಿರೇಗೌಡ್ರ,ಅರವಿಂದ ಕಟಗಿ, ರುದ್ರಪ್ಪ ಗಾಣಿಗೇರ, ನಾಗನಗೌಡ .ಪಾಟೀಲ, ಜಿ.ಡಿ.ಘೋರ್ಪಡೆ, ಗುರುಸ್ವಾಮಿ ಬಾಳಿಹಳ್ಳಿಮಠ, ಅಪ್ಪಣ್ಣ ಹಿರೇಗೌಡ್ರ, ಅಜೀಜ ಕ್ಯಾಲ್ಕೊಂಡ, ಬಸುರಾಜ ದೊಡಮನಿ,ಬಸುರಾಜ ಬೆಂಗೇರಿ,  ಚಂದ್ರಶೇಖರ ಪಾಟೀಲ, ಮಲ್ಲಿಕಾರ್ಜುನ ಕುನ್ನೂರ ಹಾಗೂ ಇನ್ನೂ ಅನೇಕ ಗಣ್ಯಮಾನ್ಯರು ಉಪಸ್ಥಿತರಿದ್ದರು.

ಸಾನಿದ್ಯ ವಹಿಸಿದ್ದ ಶಿಗ್ಗಾಂವಿಯ ವಿರಕ್ತಮಠದ ಸಂಗಬಸವ ಸ್ವಾಮೀಜಿ, ಹನಮನಹಳ್ಳಿಯ ಶಿವಾನಂದಮಠದ ಶ್ರೀಶಿವಬಸವಸ್ವಾಮೀಜಿ ಆಶೀರ್ವಚನ ನೀಡಿದರು.

ಪ್ರಾಸ್ತಾವಿಕವಾಗಿ ಎಂ.ಎಚ್.ಮಾಳವಾಡ ಮಾತನಾಡಿದರು, ಎಸ್,ಎಸ್,ಹಿರೇಮಠ ನಿರೂಪಿಸಿದರು, ಈಶ್ವರ ಅರಳಿ ಸ್ವಾಗತಿಸಿದರು, ವೀರೇಶ ಬಡಿಗೇರ ವಂದಿಸಿದರು.

loading...

LEAVE A REPLY

Please enter your comment!
Please enter your name here