ಸಸಿ ನೆಡುವ ಸಪ್ತಾಹ ಕಾರ್ಯಕ್ರಮ

0
32

ಹಾವೇರಿ : 11 ಹಾವೇರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಅರಣ್ಯ ಇಲಾಖೆ ಹಾಗೂ ಕೆ.ಎಲ್.ಇ.ಸಂಸ್ಥೆ ಆಂಗ್ಲ ಮಾಧ್ಯಮ ಶಾಲೆ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಡುವ ಸಪ್ತಾಹ ಕಾರ್ಯಕ್ರಮ ಇಂದು ನಗರದ ಕೆ.ಎಲ್.ಇ.ಸಂಸ್ಥೆ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಜರುಗಿತು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಎಸ್.ಪಾಟೀಲ ಅವರು ಉದ್ಘಾಟನೆ ನೆರವೇರಿಸಿದರು. ಅತಿಥಿಗಳಾಗಿ ಕೆ.ಎಲ್.ಇ.ಸಂಸ್ಥೆ ಆಂಗ್ಲ ಮಾಧ್ಯಮ ಶಾಲೆ ಪ್ರಾಂಶುಪಾಲರಾದ ಶ್ರೀಮತಿ ಸರೋಜ ಶಿಳ್ಳಿನ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಪಿ.ಆರ್.ಮುಂಜೋಜಿ, ಸಹ ಕಾರ್ಯದರ್ಶಿ ಎಂ.ಸಿ.ಭರಮಣ್ಣನವರ ಹಾಗೂ ನ್ಯಾಯವಾದಿ ಜಾವಗಲ ಅವರು ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here