ಸಹಕಾರಿ ಸಕ್ಕರೆ ಕಾರ್ಖಾನೆ ಸಕ್ಕರೆ ವಿತರಣೆ

0
25
ರಾಮದುರ್ಗ: ತಾಲೂಕಿನ ಖಾನಪೇಠದ ಧನಲಕ್ಷಿö್ಮÃ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಶುಕ್ರವಾರ ಸಕ್ಕರೆ ವಿತರಣೆ ಕಾರ್ಯಕ್ಕೆ ತೊರಗಲ್ಲದ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಹಾಗೂ ಕಾರ್ಖಾನೆ ಅಧ್ಯಕ್ಷ, ಶಾಸಕ ಮಹಾದೇವಪ್ಪ ಯಾದವಾಡ ಚಾಲನೆ ನೀಡಿದರು.
ನಂತರ ಅಧ್ಯಕ್ಷ ಮಹಾದೇವಪ್ಪ ಯಾದವಾಡ ಮಾತನಾಡಿ, ಕಾರ್ಖಾನೆಯ ಅಭಿವೃದ್ಧಿಗೆ ಸಹಕಾರ ನೀಡಿದ ಶೇರುದಾರರ ಋಣ ತಿರಿಸಲು ಕಳೆದ ೭ ಪ್ರತಿವರ್ಷಗಳಿಂದ ಶೇರುದಾರರಿಗೆ ಅರ್ಧ ಬೆಲೆಯಲ್ಲಿ ಸಕ್ಕರೆ ವಿತರಿಸಲಾಗುತ್ತಿದೆ. ನಾಗಪಂಚಮಿ ನಿಮಿತ್ಯ ಶೇರುದಾರರ ಕುಟುಂಬಕ್ಕೆ ಸಿಹಿ ನೀಡುವ ಉದ್ದೆÃಶದಿಂದ ಅ ವರ್ಗದ ಶೇರುದಾರರಿಗೆ ೧೦೦ ಕೆ.ಜಿ ಹಾಗೂ ಡ ವರ್ಗದ ಶೇರುದಾರರಿಗೆ ೫೦ ಕೆ.ಜಿ ಪ್ರಥಮ ಗುಣಮಟ್ಟದ ಸಕ್ಕರೆಯನ್ನು ಕೆಜಿಗೆ ೨೦ ರೂ. ರಿಯಾಯತಿ ದರದಲ್ಲಿ ನೀಡಲು ಆಡಳಿತ ಮಂಡಳಿಯಲ್ಲಿ ನಿರ್ಣಯಿಸಿದಂತೆ ಸಕ್ಕರೆ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸಕ್ಕರೆ ಪಡೆದುಕೊಳ್ಳಲು ಬರುವಾಗ ಕಡ್ಡಾಯವಾಗಿ ಷೇರುಪತ್ರದ ಮೂಲ ಪ್ರತಿಯನ್ನು ತರಬೇಕು. ಆ.೨೮ರ ವರೆಗೆ ಸಕ್ಕರೆ ವಿತರಿಸಲಾಗುವುದು. ಕಾರಣ ಕಾರ್ಖಾನೆಯ ಷೇರುದಾರರು ಸಕಾಲಕ್ಕೆ ಆಗಮಿಸಿ ಸಕ್ಕರೆ ಪಡೆದುಕೊಳ್ಳಬೇಕೆಂದು ಹೇಳಿದರು.
ತೊರಗಲ್ಲ ಗಚ್ಚಿನಮಠದ ಚನ್ನಮಲ್ಲ ಶಿವಾಚರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕಾರ್ಖಾನೆಯ ಉಪಾಧ್ಯಕ್ಷ ಜಿ.ಜಿ. ಪಾಟೀಲ, ನಿರ್ದೇಶಕರಾದ ಬಸವರಾಜ ಹಿರೇರಡ್ಡಿ, ಎ.ಸಿ.ಸುರಗ, ಬಿ.ಎಂ.ತುಪ್ಪದ, ಎನ್.ಎಸ್.ಚಾಕಲಬ್ಬಿ, ಗಿರಿಯಪ್ಪ ಹನಸಿ, ಡಿ.ಎನ್.ದೇವರಡ್ಡಿ, ಐ.ಎಸ್. ಹರನಟ್ಟಿ, ಬಿ.ಎಸ್.ಬೆಳವಣಕಿ, ಶಶಿಕಲಾ ಸೋಮಗೊಂಡ, ಟಿ.ಬಿ.ಪಾಟೀಲ, ಯಲ್ಲಪ್ಪ ಮರಬದ, ಗಿರಿಯಪ್ಪ ಹಣಸಿ, ಭೀಮಾಸಾಹೇಬ ಪಾಟೀಲ, ಶ್ರಿÃನಿವಾಸ ಕರದಿನ, ಅಧೀಕ್ಷಕ ಶಿವಾನಂದ ಶೆಟ್ಟರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

loading...