ಸಹಕಾರ ಚಳುವಳಿಯ ಕೊಡುಗೆ ಅಪಾರ

0
143

ಕನ್ನಡಮ್ಮ ಸುದ್ದಿ-ಕೋಹಳ್ಳಿ: ಸಹಕಾರ ಚಳವಳಿ, ಸಹಕಾರ ರಂಗ, ಆರ್ಥಿಕ ಪ್ರಕ್ರಿಯೆಯಾಗಿದ್ದು, ರಾಷ್ಟ್ರದ ಅರ್ಥ ವ್ಯವಸ್ಥೆಗೆ ಮತ್ತು ರಾಷ್ಟ್ರದ ಅಭಿವೃದ್ದಿ ಬೆಳವಣಿಗೆಗೆ ಸಹಕಾರ ಚಳವಳಿ ಮಹತ್ವದ ಕೊಡುಗೆಯನ್ನು ನೀಡಿದೆ ಎಂದು ಪಿಕೆಪಿಎಸ್‌ ನಿರ್ಧೇಶಕ ತುಕಾರಾಮ ಫಡತಾರೆ ಹೇಳಿದರು.

ಅವರು ಸ್ಥಳೀಯ ಸಂಗಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಂಯುಕ್ತಾಶ್ರಯದಲ್ಲಿ ಜರುಗಿದ ಅಖಿಲ ಭಾರತ 63ನೇ ಸಹಕಾರ ಸಪ್ತಾಹದ ಕಾರ್ಯಕ್ರಮದಲ್ಲಿ ಮಾತನಾಡಿ, ಸಹಕಾರಿ ತತ್ವಗಳು ಯಶಸ್ವಿಯಾಗಬೇಕಾದರೆ ಸಂಘದಲ್ಲಿರುವ ಪ್ರತಿಯೊಬ್ಬರು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು, ಸಹಕಾರದ ಪ್ರತಿಯೊಂದು ಯೋಜನೆಗಳನ್ನು ಸಂಘದ ಸದಸ್ಯರಿಗೆ ಮನವರಿಕೆ ಮಾಡಿಕೊಡುವಲ್ಲಿ ಗಮನ ಹರಿಸಬೇಕು ಎಂದು ಹೇಳಿದರು.

ಸಹಕಾರಿ ಪಿತಾಮಹ ಸಿದ್ದನಗೌಡ ರಾಮನಗೌಡ ಪಾಟೀಲರ ಭಾವ ಚಿತ್ರಕ್ಕೆ ತಾಪಂ ಸದಸ್ಯ ಸದಾಶಿವ ಹರಪಾಳೆ ಹಾಗೂ ಮಾಜಿ ತಾಪಂ ಸದಸ್ಯ ಉಮ್ಮಯ್ಯಾ ಪೂಜಾರಿ ಪೂಜೆ ನೇರವೇರಿಸಿದರು.

ಈ ಸಂದರ್ಭದಲ್ಲಿ ಉಪಾದ್ಯಕ್ಷ ಧರ್ಮಗೌಡ ಬಿರಾದಾರ, ಎಸ್‌ ಎಲ್‌ ಪೂಜಾರಿ, ಮಲ್ಲಪ್ಪ ಉಮರಾಣಿ, ಅಣ್ಣಪ್ಪ ಸೂರ್ಯವಂಶಿ, ತುಕಾರಾಮ ದೇವಖಾತೆ, ನಿಜಲಿಂಗ ಬಡಕೆ, ಸಿದ್ದುಗೌಡ ಝರೆ, ಸೈಬಣ್ಣ ಪೂಜಾರಿ, ಮೈಬೂಬ ಪಡಸಲಗಿ, ಬಸವಂತ ಗುಡ್ಡಾಪೂರ, ವ್ಯವಸ್ಥಾಪಕ ಶಿವಗೌಡ ಮುಧೋಳ ಸೇರಿದಂತೆ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು. ಜಯವಂತ ಅಜಟರಾವ ಸ್ವಾಗತಿಸಿ, ನಿರೂಪಿಸಿದರು, ರಾವಸಾಬ ಮುಧೋಳ ವಂದಿಸಿದರು.

loading...

LEAVE A REPLY

Please enter your comment!
Please enter your name here