ಸಹಕಾರ ಸಂಘಗಳು ರೈತಸ್ನೇಹಿ: ಪಾಟೀಲ

0
47

ಖಾನಾಪುರ: ಸಹಕಾರಿ ಸಂಘಗಳು ರೈತರಿಗೆ ಸಕಾಲದಲ್ಲಿ ಆರ್ಥಿಕ ಸೌಲಭ್ಯಗಳನ್ನು ಒದಗಿಸುವ ಮೂಲಕ ರೈತಸ್ನೇಹಿಯಾಗಿವೆ ಎಂದು ಶಾಸಕ ಅರವಿಂದ ಪಾಟೀಲ ಅಭಿಪ್ರಾಯ ಪಟ್ಟರು.
ತಾಲೂಕಿನ ಇಟಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾವಯವ ಗೊಬ್ಬರ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಹಕಾರಿ ಸಂಸ್ಥೆಗಳಿಂದ ಸಾಲ ಪಡೆದ ರೈತರು ಸಕಾಲದಲ್ಲಿ ಸಾಲ ಮರು ಪಾವತಿ ಮಾಡುವ ಮೂಲಕ ಸಂಘಗಳಲ್ಲಿಯ ವಿವಿಧ ಯೋಜನೆಗಳ ಲಾಭ ಪಡೆದು ಆರ್ಥಿಕ ಪ್ರಗತಿ ಸಾಧಿಸಲು ಕರೆ ನೀಡಿದರು.
ಎಂ.ಕೆ ಹುಬ್ಬಳ್ಳಿಯ ರಾಣಿ ಶುಗರ್ಸ್‌ ವ್ಯವಸ್ಥಾಪಕ ನಿರ್ದೇಶಕ ಶಿವಾ ಕುಲಕರ್ಣಿ ಮಾತನಾಡಿ, ಕಬ್ಬು ಬೆಳೆಗಾರರು ತಾವು ಬೆಳೆದ ಕಬ್ಬನ್ನು ಸಹಕಾರಿ ತತ್ವದಡಿ ನಡೆಯುತ್ತಿರುವ ಮಲಪ್ರಭಾ ಸಕ್ಕರೆ ಕಾರ್ಖಾನೆಗೆ ಪೂರೈಸಿ ಕಾರ್ಖಾನೆ ಉಳಿವಿಗೆ ಸಹಕರಿಸಿ ಎಂದು ಮನವಿ ಮಾಡಿದರು. ರೈತರು ಸಾವಯವ ಕೃಷಿ ಮಾಡುವ ಮೂಲಕ ಮುಂದಿನ ಪಿಳಿಗೆಗೆ ಭೂಮಿಯ ಫಲವತ್ತತೆಯನ್ನು ಉಳಿಸಲು ಅವರು ಕರೆ ನೀಡಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇಟಗಿ ಹಾಗೂ ಎಫ್‌.ಟಿ.ಓ ಮತ್ತು ಪಿ.ಡಿ.ಆಯ್‌.ಎಲ್‌ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದ ಅಂಗವಾಗಿ ಸಂಘದ ಸದಸ್ಯರಿಗೆ ಸಾವಯವ ಗೊಬ್ಬರದ ಚೀಲಗಳನ್ನು ಮತ್ತು ಬಿ.ಡಿ.ಸಿ.ಸಿ ಬ್ಯಾಂಕ್‌ ವತಿಯಿಂದ ನೀಡಲಾದ ಎ.ಟಿ.ಎಂ ಕಾರ್ಡ್‌ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವಿ.ಜಿ. ಹೊಂಬಳ, ಡಿ.ಎಮ್‌ ಟೊನ್ನಿ, ಬಿ.ಎಮ್‌ ಸಾಣಿಕೊಪ್ಪ, ಅಪ್ಪಣ್ಣ ದೊಡಮನಿ, ವಿ.ಟಿ.ನಾಡಗೌಡ್ರ, ಬಸವರಾಜ ಕುರೇರ, ಸಂಜೀವ ಸೋನಪ್ಪನವರ, ಹನುಮಂತ ಸಿಂಗಾಡಿ, ಅಪ್ಪೋಶಿ ನಾಯ್ಕರ, ಅರ್ಜುನ ತಳವಾರ, ಬಸಮ್ಮ ಬೆಣಚನಮರ್ಡಿ, ಮಲ್ಲಿಕಾರ್ಜುನ ಹುದಲಿ ಹಾಗೂ ಇತರರು ಇದ್ದರು. ರವಿಗೌಡ ಪಾಟೀಲ ಸ್ವಾಗತಿಸಿದರು. ಸಂಜೀವ ಸೋನಪ್ಪನವರ ಸ್ವಾಗತಿಸಿದರು. ಬಸವರಾಜ ಬಡಿಗೇರ ವಂದಿಸಿದರು.

loading...