ಸಹನೆ, ತಾಳ್ಮೆ ಇದ್ದರೆ ಪ್ರತಿಭೆ ಗುರುತಿಸಲು ಸಾಧ್ಯ: ಶ್ರೀಗಳು

0
10

ಕನ್ನಡಮ್ಮ ಸುದ್ದಿ-ಮುಂಡರಗಿ: ಶಿಕ್ಷಕರಲ್ಲಿ ಮತ್ತು ಪಾಲಕರಲ್ಲಿ ಸಹನೆ, ತಾಳ್ಮೆ ಇದ್ದಾಗ ಮಾತ್ರ ಮಕ್ಕಳಲ್ಲಿನ ಪ್ರತಿಭೆ ಗುರುತಿಸಲು ಸಾಧ್ಯವಾಗುತ್ತದೆ ಎಂದು ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಜರುಗಿದ ಮಾಸಿಕ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಉತ್ತಮ ಸಂಸ್ಕøತಿಯಿಂದ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. 150 ವರ್ಷಗಳ ಹಿಂದೆ ಶೂದ್ರ ಜನಾಂದ ಸಾವಿತ್ರಿ ಬಾಪುಲೆ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದರು. ಮಹಾರಾಷ್ಟ್ರದ ಪುಣಾ ವಿಶ್ವವಿದ್ಯಾಲಯಕ್ಕೆ ಸಾವಿತ್ರಿ ಬಾಪುಲೆ ಅವರ ಹೆಸರನ್ನು ನಾಮಕರಣ ಮಾಡಿದ್ದಾರೆ ಎಂದರು.
ಶಿಕ್ಷಕ ಕಳಕೇಶ ಗೂಡ್ಲಾನೂರ ಮಾತನಾಡಿ, ಜೀವನದಲ್ಲಿ ಸೋಲು-ಗೆಲುವು ಇರೋದು ಸಹಜ. ಸೋತೆನೆಂದು ಕುಗ್ಗದೆ ಆತ್ಮಸ್ಥೈರ್ಯದಿಂದ ಮುನ್ನಡೆಯಬೇಕು ಎಂದರು. ಗ್ರಾ.ಪಂ.ಸದಸ್ಯ ಗೋಣಿಬಸಪ್ಪ ಕೊರ್ಲಹಳ್ಳಿ ಮಾತನಾಡಿದರು. ಶಿವಾನುಭವದ ಭಕ್ತಿಸೇವೆ ವಹಿಸಿಕೊಂಡಿದ್ದ ತಾ.ಪಂ.ಅಧ್ಯಕ್ಷ ರೇಣುಕಾ ಕೊರ್ಲಹಳ್ಳಿ, ಗೋಣಿಬಸಪ್ಪ ಕೊರ್ಲಹಳ್ಳಿ ಅವರನ್ನು ಶ್ರೀಗಳು ಸನ್ಮಾನಿಸಿ ಗೌರವಿಸಿದರು. ಹನುಮೇಶ ಉಪ್ಪಾರ ಧರ್ಮಗ್ರಂಥ ಪಠಿಸಿದರು. ಬೋಗೇಶ ಉಪ್ಪಾರ ವಚನ ಚಿಂತನ ಗೈದರು. ಮುಕ್ತಾಯಕ್ಕ ಬಳಗದವರು ಪ್ರಾರ್ಥಿನಿಸಿದರು. ತೋಂಟದಾರ್ಯ ಸೇವಾ ಸಮಿತಿ ಅಧ್ಯಕ್ಷ ಎಚ್.ವಿರುಪಾಕ್ಷಗೌಡ್ರ, ಈಶಣ್ಣ ಬೆಟಗೇರಿ, ಗಿರೀಶಗೌಡ ಪಾಟೀಲ, ದೇವೇಂದ್ರಪ್ಪ ರಾಮೇನಹಳ್ಳಿ, ನಾಗೇಶ ಹುಬ್ಬಳ್ಳಿ, ಕೊಟ್ರೇಶ ಅಂಗಡಿ, ಧ್ರುವಕುಮಾರ ಹೊಸಮನಿ, ಪಾಲಾಕ್ಷೀ ಗಣದಿನ್ನಿ, ವಿಶ್ವನಾಥ ಉಳ್ಳಾಗಡ್ಡಿ, ಉಮೇಶ ಹಿರೇಮಠ, ಮುತ್ತು ಹಿರೇಮಠ, ಶಿವಕುಮಾರ ಕುಬಸದ ಇದ್ದರು. ಎ.ಕೆ.ಮುಲ್ಲಾನವರ ನಿರೂಪಿಸಿದರು.

loading...