ಸಹಾಯ ಮಾಡಿದವರನ್ನು ಮರೆಯಬಾರದು: ಡಿಸಿಪಿ ರವಿ ಚನ್ನಣ್ಣನವರ

0
35

ರಾಮದುರ್ಗ: ಜೀವನದಲ್ಲಿ ನಾವು ಎಷ್ಟು ಎತ್ತರಕ್ಕೆ ಬೆಳೆದರೂ ನಾವು ನಮ್ಮ ಬಾಲ್ಯದಲ್ಲಿ ತಿದ್ದಿ ಬಿದ್ದಿ ಹೇಳಿ ಶಿಕ್ಷಣ ಹಾಗೂ ಸಹಾಯ ಮಾಡಿದವರನ್ನು ಎಂದು ಮರೆಯಬಾರದು. ಪ್ರತಿಯೊಬ್ಬರಲ್ಲಿ ಗೆದ್ದೆಗೆಲ್ಲುತ್ತೆÃವೆ ಎಂಭ ಭಾವನೆಗಳನ್ನು ಬೆಳಸಿಕೊಂಡಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ಬೆಂಗಳೂರ ಪಶ್ಚಿಮ ವಲಯ ಡಿ.ಸಿ.ಪಿ ರವಿ ಚನ್ನಣ್ಣನವರ ಹೇಳಿದರು.
ಪಟ್ಟಣದ ಮರಾಠಾ ಕಲ್ಯಾಣ ಮಂಟಪದಲ್ಲಿ ಐ.ಎ.ಎಸ್ ಹುದ್ದೆಗೆ ಪದೋನ್ನತಿ ಹೊಂದಿದ ಪಟ್ಟಣದ ಮಹಾಂತೇಶ ಬೀಳಗಿ ಅವರಿಗೆ ತಾಲೂಕಾ ಅಭಿಮಾನಿ ಬಳಗ ರವಿವಾರ ಹಮ್ಮಿಕೊಂಡ ಸನ್ಮಾನ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಜಗತ್ತಿನಲ್ಲಿ ಹುಟ್ಟಿದ ಎಲ್ಲರು ಚೆನ್ನಾಗಿರಬೇಕು. ನಾನೋಬ್ಬನೆ ಚೆನ್ನಾಗಿರಬೇಕು ಎಂಬುವನು ಸ್ವಾರ್ಥಿ. ನನ್ನವರು, ನನ್ನ ಸುತ್ತಲಿನವರು, ನನ್ನ ಸ್ನೆÃಹಿತರು ಎಲ್ಲರೂ ಚೆನ್ನಾಗಿರಬೇಕು ಎಂಬ ಆಲೋಚನೆಯೊಂದಿಗೆ ಅವರ ಬೆಳವಣೆಗೆಗೆÉ ಬೇಕಾದ ಸಹಕಾರ ನೀಡುವವರೇ ಸಮರ್ಥ ನಾಯಕ ಹಾಗೂ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ ಎಂದು ಹೇಳಿದರು.
ತಮ್ಮ ಏಳಿಗೆಯನ್ನು ತಾವೇ ಕಷ್ಟ ಪಟ್ಟು ಮಾಡಿಕೊಳ್ಳಬೇಕು. ಕಷ್ಟಪಟ್ಟು ಓದಿದರೆ ಯಾವುದೇ ಹಂತದಲ್ಲಿ ಫಲ ದೊರೆಯುತ್ತದೆ ಎಂಬುದನ್ನು ವಿದ್ಯಾರ್ಥಿಗಳು ಅರಿತುಕೊಂಡು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಅಲ್ಲದೇ ತೀರ ಬಡತನದಲ್ಲಿ ಓದಿದ ತಾವು ಯಾರಾದರು ಕಷ್ಟ ಎಂದು ಬಂದರೆ ಅನ್ನ, ವಸತಿ ವ್ಯವಸ್ಥೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಧಾರವಾಡದ ಹಿರಿಯ ಸಾಹಿತಿ ಡಾ| ಬಾಳಣ್ಣ ಶೀಗಿಹಳ್ಳಿ ಮಾತನಾಡಿ, ಇಂದಿನ ಸಮಾಜದಲ್ಲಿ ಸಾಕಷ್ಟು ಪ್ರತಿಭಾನ್ವಿತರಿದ್ದರು ಅವರಿಗೆ ಮುಂದಿನ ಉನ್ನತ ಸ್ಥಾನಕ್ಕೆರಲು ಆರ್ಥಿಕ ಕೊರತೆ ಕಾಡುತ್ತಿರುತ್ತದೆ. ಕಾರಣ ಆರ್ಥಿಕ ತೊಂದರೆಯಲ್ಲಿರುವ ಪ್ರತಿಭಾನ್ವಿತರನ್ನು ಮೇಲೆತ್ತುವ ಮೂಲಕ ನಮ್ಮ ಕೈಲಾದ ಸಹಾಯವನ್ನು ಮಾಡುವಲ್ಲಿ ನಾವೇಲ್ಲಾ ಮುಂದಾದಾಗ ಮಾತ್ರ ಅವರ ಜೀವನ ಬೆಳಗಲು ಸಾಧ್ಯ ಎಂದು ಹೇಳಿದರು.
ಐ.ಎ.ಎಸ್ ಪದೋನ್ನತಿ ಹೊಂದಿದ ಮಹಾಂತೇಶ ಬೀಳಗಿ ಅಭಿಮಾನಿಗಳಿಂದ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಸತ್ಕಾರ ಸ್ವಿಕರಿಸಿ ಮಾತನಾಡಿದರು. ನಿವೃತ್ತ ಪ್ರಾಚಾರ್ಯ ಪಿ.ಎಂ.ಕಣವಿ ಅಧ್ಯಕ್ಷತೆ ವಹಿಸಿದ್ದರು. ಮಹೇಶ ಕಲ್ಯಾಣಿ ಸ್ವಾಗತಿಸಿದರು. ಶಿಕ್ಷಕ ಎಂ.ಎಸ್.ಜಂಗವಾಡ ನಿರೂಪಿಸಿ, ವಂದಿಸಿದರು.

loading...