ಸಹೋದರರೊಂದಿಗೆ ಭಿನ್ನಾಭಿಪ್ರಾಯವಿಲ್ಲ: ಸಚಿವ ರಮೇಶ

0
55

ಗೋಕಾಕ: ಸಹೋದರ ಸತೀಶ ಅವರೊಂದಿಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಶೀಘ್ರದಲ್ಲೇ ಸತೀಶ ಅವರನ್ನು ಭೇಟ್ಟಿಯಾಗಿ ಜಿಲ್ಲೆಯಲ್ಲಿ ಸುಮಾರು 12 ರಿಂದ 14 ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಅವರು, ನಗರದ ಸಚಿವರ ಕಾರ್ಯಾಲಯದ ಎದುರು ಜರುಗಿದ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹೋದರ ಶಾಸಕ ಸತೀಶ ಜಾರಕಿಹೊಳಿ ಜೊತೆಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಸಹೋದರರೆಲ್ಲ ಒಟ್ಟಾಗಿ ಮುಂಬರುವ ವಿಧಾನಸಭೆ ಚುನಾವಣೆ ಎದುರಿಸುತ್ತೆವೆ. ಈಗಾಗಲೇ ಸತೀಶ ಜೊತೆಗೆ ವಿಧಾನ ಪರಿಷತ್ ಸದಸ್ಯ ವಿವೇಕರಾವ ಪಾಟೀಲ ಹಾಗೂ ಸಿದ್ಧಲಿಂಗ ದಳವಾಯಿ ಅವರು ಮಾತನಾಡಿದ್ದು ಶೀಘ್ರದಲ್ಲೇ ಸತೀಶರೊಂದಿಗೆ ಚರ್ಚಿಸಿ ಚುನಾವಣೆ ಎದುರಿಸಲು ತಯಾರಿ ಮಾಡಲಾಗುವದು ಎಂದರು.

ಪಕ್ಷದ ಅಧ್ಯಕ್ಷರು ಹೈಕಮಾಂಡ ಯಾರೇ ಅಭ್ಯರ್ಥಿಗಳಿಗೆ ಟಿಕೇಟ್ ನೀಡಿದರು ಅಭ್ಯರ್ಥಿಗಳನ್ನು ಗೆಲ್ಲಿಸುವದೊಂದೆ ನಮ್ಮ ಗುರಿಯಾಗಿದ್ದು ಈ ಬಾರಿ ಸುಮಾರು 12 ರಿಂದ 14 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವದಾಗಿ ಹೇಳಿದರು. ನಮ್ಮ ತಂದೆ ತಾಯಿ ನಿರ್ಮಿಸಿದ ರಾಜ್ಯದಲ್ಲಿ ರಾಜ್ಯಭಾರ ಮಾಡುತ್ತಿದ್ದೆನೆ ಎಂದುರು.
ಲಖನ್ ಜಾರಕಿಹೊಳಿ ಮಾತನಾಡಿ, ಸ್ಥಳೀಯ ವಾರ್ಡಗಳ ಹಾಗೂ ಗೋಕಾಕ ಮತಕ್ಷೇತ್ರದ ಹಳ್ಳಿಗಳ ಪರಿಚಯವಿರದ ಕೇಲವರು ರಾಜಕೀಯ ಮಾಡುತ್ತಿದ್ದಾರೆ. ಅವರ ಬಳಿ ಕೇಲವೇ ಜನರಿದ್ದು ನಗರದ ಬಸವೇಶ್ವರ ವೃತ್ತದಲ್ಲಿ ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತ ತಿರುಗುತ್ತಿದ್ದಾರೆ. ಇಂತವರ ಬಗ್ಗೆ ಕಿವಿಗೊಡದೆ ಸಿದ್ಧರಾಮಯ್ಯ ನೇತ್ರತ್ವದ ಸರ್ಕಾರ ಶಿಕ್ಷಕ, ಅನ್ನಭಾಗ್ಯ, ಕ್ಷೀರ ಭಾಗ್ಯ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

ಕಾಂಗ್ರೆಸ್ ಮುಖಂಡರಾದ ಡಾ.ರಾಜೇಂದ್ರ ಸಣ್ಣಕ್ಕಿ, ಸಿದ್ಧಲಿಂಗ ದಳವಾಯಿ, ಬಸವರಾಜ ಉರುಬಿನಹಟ್ಟಿ, ಪ್ರಕಾಶ ಹುಕ್ಕೇರಿ, ಟಿ.ಆರ್ ಕಾಗಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ನಗರಾಧ್ಯಕ್ಷ ತಳದಪ್ಪ ಅಮ್ಮಣಗಿ, ತಾಪಂ ಉಪಾಧ್ಯಕ್ಷ ಭೀಮಪ್ಪ ನಾಯಕ, ಎಸ್ ಎ ಕೋತವಾಲ, ಅರಭಾಂವಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಭರಮಣ್ಣ ಉಪ್ಪಾರ, ಕೌಜಲಗಿ ಬ್ಲಾಕ್ ಅಧ್ಯಕ್ಷ ಕಲ್ಲಪ್ಪಗೌಡ ಲಕ್ಕಾರ, ಮುಖಂಡರಾದ ಕುಬೇಂದ್ರ ಕಲಾಲ, ನಜೀರ ಶೇಖ, ಮೊಶೀನ ಖೋಜಾ, ರಾಜು ತಳವಾರ, ಶಿವಾನಂದ ಡೋಣಿ ಸೇರಿದಂತೆ, ನಗರಸಭೆ, ಜಿಪಂ, ತಾಪಂ, ಗ್ರಾಪಂ ಸದಸ್ಯರು ಇತರರು ಇದ್ದರು.

loading...