ಸಾರಿಗೆ ಸಿಬ್ಬಂದಿಗಳಿಗೆ ಸೆಪ್ಟೆಂಬರ್ ವರೆಗೂ ಸಂಬಳ ಪಾವತಿ

0
169

ಬೆಳಗಾವಿ

ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರಿಗೆ ಸೆಪ್ಟೆಂಬರ್​ವರೆಗೆ ವೇತನ ಪಾವತಿ ಮಾಡಲು ರಾಜ್ಯ ಸರ್ಕಾರ 961 ಕೋಟಿ ರೂ. ಅನುದಾನ ನೀಡುವುದಾಗಿ ಘೋಷಿಸಿದೆ.

ಲಾಕ್​ಡೌನ್, ಕರೊನಾ ಸೋಂಕಿನಿಂದಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಿಗೆ 2 ಸಾವಿರ ಕೋಟಿ ರೂ.ಗಿಂತ ಹೆಚ್ಚಿನ ನಷ್ಟವುಂಟಾಗಿದೆ. ಅದರಿಂದಾಗಿ ನೌಕರರಿಗೆ ವೇತನ ನೀಡಲಾಗದೆ ನಿಗಮಗಳು ಸಂಕಷ್ಟದಲ್ಲಿದ್ದವು. ಹೀಗಾಗಿ ನಿಗಮಗಳು ಜುಲೈ 24 ಬಂದರೂ ಜೂನ್ ತಿಂಗಳ ವೇತನ ಪಾವತಿಸಿರಲಿಲ್ಲ. ಅಲ್ಲದೆ, ವೇತನ ಪಾವತಿಗಾಗಿ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸರ್ಕಾರ ಘೋಷಿಸಿರುವ ಅನುದಾನದಲ್ಲಿ ಜೂನ್ ಮತ್ತು ಜುಲೈ ತಿಂಗಳ ವೇತನ ಪಾವತಿಗಾಗಿ 426 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅದರಂತೆ ನಿಗಮಗಳು ಮೊದಲಿಗೆ ಜೂನ್ ವೇತನ ಪಾವತಿಸಬೇಕೆ ಅಥವಾ ಒಟ್ಟಿಗೆ ನೀಡಬೇಕೆ ಎಂಬ ಬಗ್ಗೆ ನಿರ್ಧರಿಸಲಿವೆ. ಏಕೆಂದರೆ ಜುಲೈ ಮುಗಿಯಲು ಇನ್ನು 6 ದಿನ ಮಾತ್ರ ಬಾಕಿ ಉಳಿದಿದೆ. ಉಳಿದ 535 ಕೋಟಿ ರೂ.ಗಳನ್ನು ಆಯಾ ತಿಂಗಳ ವೇತನ ಪಾವತಿಗೆ ತಕ್ಕಂತೆ ನಿಗಮಗಳಿಗೆ ಸರ್ಕಾರ ಬಿಡುಗಡೆ ಮಾಡಲಿದೆ. ಈ ಹಿಂದೆ ಏಪ್ರಿಲ್ ಮತ್ತು ಮೇ ತಿಂಗಳ ವೇತನ ಪಾವತಿಗಾಗಿ ಸರ್ಕಾರ 325 ಕೋಟಿ ರೂ. ಅನುದಾನ ನೀಡಿತ್ತು. ಇದಕ್ಕೆ ಡಿಸಿಎಂ ಲಕ್ಷ್ಮಣ ಸವದಿ ಸಿಎಂಗೆ ಅಭಿನಂದನೆ ತಿಳಿಸಿದ್ದಾರೆ.

loading...