ಸಾರ್ವಜನಿಕರಿಗೆ ಸಮಸ್ಯೆ ಮಾಡಿದರೆ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಲಾಗುವುದು: ಐಜಿಪಿ ಅಲೋಕ್‌

0
41

ವಿಜಯಪುರ : ತಕ್ಷಣವೇ ಎಲ್ಲ ರೌಡಿಗಳು ನೀಟ್‌ ಆಗಿ ಇರಬೇಕು, ಎಲ್ಲಿ ಬೇಕೆಂದರಂತೆ ಕೂದಲು ಬಿಟ್ಟು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿದರೆ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಬೇಕು ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ಅಲೋಕ್‌ ಕುಮಾರ ಖಡಕ್‌ ವಾರ್ನಿಂಗ್‌ ನೀಡಿದರು.
ವಿಜಯಪುರದ ಪೊಲೀಸ್‌ ಇಲಾಖೆಯ ಚಿಂತನ ಹಾಲ್‌ ಮುಂಭಾಗದಲ್ಲಿ ರೌಡಿಗಳ ಪರೇಡ್‌ ನಡೆಸಿ ರೌಡಿಗಳ ಅಪರಾಧೀಕ ಹಿನ್ನೆಲೆ, ಪ್ರಸ್ತುತ ಅವರ ಚಲನ-ವಲನ ಮೊದಲಾದ ವಿವರಗಳನ್ನು ಪಡೆಯುವ ಮೂಲಕ ಒಬ್ಬೊರರಂತೆ ಎಲ್ಲ ರೌಡಿಗಳಿಗೆ ಖಡಕ್‌ ಆಗಿ ವಾರ್ನ್‌ ಮಾಡಿದರು.
ಏನಪ್ಪಾ ನಿನಗೆ ಕೊಬ್ಬು ಜಾಸ್ತಿಯಾಗಿದೆ, ಸೊಕ್ಕೂ ಸಹ ಅತಿಯಾಗಿದೆ, ಏನು ಓದಿದ್ದೀಯಾ ಎಂದು ರೌಡಿ ಶೀಟರ್‌ಒಬ್ಬನಿಗೆ ಕೇಳಿದರು, ಆಗ ಆತ ಏಳನೇಯ ತರಗತಿ ಎಂದಾಗ, ಹೌದಾ…ಪಿಎಚ್‌ಡಿ ಮಾಡಿದವರ ರೀತಿ ಡ್ರೆಸ್‌ ಮಾಡಿದ್ದೀಯಾ? ಇಷ್ಟೇಕೆ ಕೂದಲು ಬಿಟ್ಟಿದ್ದೀಯಾ ನೀಟ್‌ ಆಗಿ ಇರಲೂ ಆಗಲ್ವಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರ್ಮ್‌ ಆ್ಯಕ್ಟ್‌ನಲ್ಲಿ ಬಂಧಿತನಾಗಿರುವ ರೌಡಿಶೀಟರ್‌ಗೆ ಹಲವಾರು ಪ್ರಶ್ನೆ ಕೇಳಿದರು, ಆತ ಕೂದಲು ಅತಿಯಾಗಿ ಬಿಟ್ಟಿರುವುದನ್ನು ಕಂಡು ಆಕ್ಷೇಪಿಸಿದ ಐಜಿಪಿ, ಏನಾಗಿದೆ ನಿನಗೆ, ನೀಟ್‌ ಆಗಿ ಇರಲು ಆಗುವುದಿಲ್ಲವೇ? ಇಲ್ಲ ಸರ್‌, ನಾನು ನಾನು ಬದಲಾಗಿದ್ದೇನೆ ಎಂದಾಗ ಸ್ಥಳೀಯವಾಗಿದ್ದ ಪೊಲೀಸ ಅಧಿಕಾರಿಗಳು ಈತ ದಿವಂಗತ ಪೊಲೀಸ್‌ ಅಧಿಕಾರಿಯ ಪುತ್ರ ಎಂದಾಗ ಮತ್ತಷ್ಟು ಕೆರಳಿದ ಐಜಿಪಿ, ಹೀಗೆಲ್ಲಾ ಮಾಡಿಯೇ ಇಲಾಖೆಗೆ ಕೆಟ್ಟ ಹೆಸರು ತರುತ್ತೀರಿ, ಪಾಪ ನಿಮ್ಮ ತಂದೆಯವರ ಹೆಸರಿಗೂ ಕಳಂಕ ತರುತ್ತೀರಿ ಎಂದು ಹರಿಹಾಯ್ದರು.
ಶ್ರಾವಣ ಮಾಸವಿದೆ ಅದಕ್ಕೆ ಕೂದಲು, ಗಡ್ಡ ಬಿಟ್ಟಿದ್ದೇನೆ, ಎಂದಾಗ ಹೌದಾ ಹಾಗದರೆ ಆಷಾಢ ಮಾಸದಲ್ಲಿ ಕ್ಲಿಕ್ಕಿಸಿಕೊಂಡಿದ್ದ ಫೋಟೋ ತೋರಿಸು ಎಂದು ಆತನ ಮೊಬೈಲ್‌ನಲ್ಲಿ ಆತನ ಛಾಯಾಚಿತ್ರವನ್ನು ಗಮನಿಸಿದರು.

loading...