ಸಾರ್ವಜನಿಕರು ಮೋದಿ ಪೆಸ್ಟ್ ಕಾರ್ಯಾಗಾರದ ಸದುಪಯೋಗ ಪಡಿಸಿಕೊಳ್ಳಬೇಕು

0
63

ಕಾರ್ಯಗಾರದಲ್ಲಿ ರಾಜ್ಯ ಸಭಾ ಸದಸ್ಯ ಪ್ರಭಾಕರ ಕೋರೆ ಅಭಿಮತ
ಕನ್ನಡಮ್ಮ ಸುದ್ದಿ-ಬೆಳಗಾವಿ: ಜಿಲ್ಲೆಯ ಜನತೆಗೆ ಮೋದಿ ಜಾರಿಗೆ ತಂದ ಕಾರ್ಯಕ್ರಮಗಳು ಪ್ರತಿಯೊಬ್ಬರು ಅರಿತುಕೊಳ್ಳಲಿ ಎಂಬ ಉದ್ದೇಶದಿಂದ ಮೋದಿ ಪೆಸ್ಟ್ ಎಂಬ ವಿನೂತನ ಕಾರ್ಯಾಗಾರ ಹಮ್ಮಿಕೊಂಡಿದ್ದು, ಇದರ ಸದುಪಯೋಗ ಪಡೆದುಕೊಳ್ಳಿ ಎಂದು ರಾಜ್ಯ ಸಭಾ ಸದಸ್ಯ ಪ್ರಭಾಕರ ಕೋರೆ ಹೇಳಿದರು.
ಇಂದು ನಗರದ ಸಂಭಾಜಿ ಉದ್ಯಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮೋದಿ ಪೆಸ್ಟ್ ಕಾರ್ಯಾಗಾರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು. ಪ್ರಧಾನ ಮಂತ್ರಿ 47 ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳು ಈಗಾಗಲೇ ಪತ್ರಿಕೆ ಮಾಧ್ಯಮದ ಮೂಲಕ ಪ್ರಚಾರವಾಗಿದೆ ಆದರೂ. ಕೆಲ ಜನರು ಯೋಜನೆಗಳ ಸಂಪೂರ್ಣ ಮಾಹಿತಿ ದೊರೆಯದೆ ಕೇವಲ ಬೆರಳೆನಿಕೆಯಲ್ಲಿ ಜನರು ಯೋಜನೆಗಳ ಲಾಭ ಪಡಯುತ್ತಿದ್ದಾರೆ. ಹಾಗಾಗಿ ಇಂತಹ ಕಾರ್ಯಾಗಾರ ಮಾಡುವುದರ ಮೂಲಕ ಜನರಿಗೆ ತಿಳಿಸುವ ಉದ್ದೇಶದಿಂದ 3 ದಿನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕೇಂದ್ರ ಸರ್ಕರದ ಯೋಜನೆಗಳು ಕೇವಲ ವ್ಯಕ್ತಿಗತವಾಗಿರದೆ ಎಲ್ಲ ಸಮುದಾಯಗಳಿಗೂ ಅನ್ವಯಿಸುವಂತೆ ಉತ್ತಮ ಯೋಜನೆಗಳನ್ನು ಮೋದಿ ಜಾರಿಗೆ ತಂದಿದ್ದು, ಅವುಗಳಲ್ಲಿ ಮಹಿಳೆಯರಿಗಾಗಿ ಸುಕನ್ಯಾ ಸಮೃದ್ಧಿ ಯೋಜನೆ, ಯುವಕರಿಗಾಗಿ ಉದ್ಯೋಗ ನೀಡಲು ಕೌಶಲ್ಯ ಅಭಿವೃದ್ಧಿ ಯೋಜನೆ, ಯುವ ಜನರನ್ನು ಉದ್ಯಮಶೀಲರನ್ನಾಗಿಸಲು ಮುದ್ರಾ ಯೋಜನೆ, ರೈತರಿಗಾಗಿ ಫಸಲ ಭಿಮಾ, ವಿಮಾ ಯೋಜನೆ, ಆರೋಗ್ಯ ಸಂಬಂಧಿ ಬ್ಯಾಂಕಿನಲ್ಲಿ ಕೇವಲ ತಿಂಗಳಿಗೆ ಒಂದು ರೂ. ನೀಡುವುದರ ಮೂಲಕ ಅಪಘಾತ ಸಂಭವಿಸಿದರೆ 1 ಲಕ್ಷ ವಿಮೆ ನೀಡುವ ಯೋಜನೆ, ಸೇರಿದಂತೆ ವಿವಿಧ ಯೋಜನೆಗಳು ವಿಭಿನ್ನ ರೀತಿಯಲ್ಲಿ ಜಾರಿಗೆ ತಂದಿದ್ದಾರೆ ಎಂದು ಹೇಳಿದರು.
ಮಾಜಿ ಶಾಸಕ ಅಭಯ ಪಾಟೀಲ ಮಾತನಾಡಿ, ಇಂದು ಪ್ರತಿಯೊಬ್ಬರು ಸಾಮಾಜಿಕ ಜಾಲತಾಣಕ್ಕೆ ಮೊರೆ ಹೋಗಿದ್ದಾರೆ. ಇಂತಹ ಉತ್ತಮ ಯೋಜನೆಗಳ ಬಗ್ಗೆ ಅರಿವು ಹೊಂದಲು ಜನರಿಗೆ ಆಗುತ್ತಿಲ್ಲ. ಹಾಗಾಗಿ ಈ ಕಾರ್ಯಾಗಾರದ ಉಪಯೋಗವನ್ನು ತೆಗೆದುಕೊಳ್ಳಬೇಕು ಎಂದರು.
ಮಹಾನಗರ ಅಧ್ಯಕ್ಷ ರಾಜೇಂದ್ರ ಹರಕುಣಿ ಮಾತನಾಡಿ, ಕೇಂದ್ರ ಸರ್ಕಾರ ಮೂರು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಎಲ್ಲ ಯೋಜನೆಗಳು ಎಷ್ಟು ಜನರು ಉಪಯೋಗ ಪಡೆಯುತ್ತಿದ್ದರೆ ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇಂತಹ ಯೋಜನೆಗಳನ್ನು ಮೋಬೈಲ್‍ಗಳ ಮೂಲಕವಾಗಿ ಯಾವ ರೀತಿಯಾಗಿ ಸಹಾಯ ಪಡೆದುಕೊಳ್ಳಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಕಾರ್ಯಾಗಾರದಲ್ಲಿ ನೀಡಲಾಗುತ್ತದೆ.
ಈ ಸಂದರ್ಭದಲ್ಲಿ ಎಸ್‍ಬಿಐನ ವಿಭಾಗೀಯ ವ್ಯವಸ್ಥಾಪಕ ವಿನೋದ ದತ್ತವಾಡಕರ, ರಾಜು ಚಿಕ್ಕನಗೌಡರ, ಮಹಾನಗರ ಪ್ರಧಾನ ಕಾರ್ಯದರ್ಶಿ ರಾಜೀವ್ ಟೋಪಣ್ಣವರ, ಕಿರಣ್ ಜಾದವ, ಮಾಜಿ ಶಾಸಕ ಮನೋಹರ ಕಡೋಲ್ಕರ. ಮಹದೇವ ದಾನಣ್ಣವರ ಸೇರಿದಂತೆ ಇತರರು ಇದ್ದರು.

loading...