ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಕೇಂದ್ರ ಸ್ಥಾಪನೆ

0
31

ಸವಣೂರು : ತಾಲೂಕಿನಲ್ಲಿ ಮೂತ್ರ ಪಿಂಡ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಇಂದು ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಕೇಂದ್ರವನ್ನು ಸ್ಥಾಪಿಸಲಾಗಿದೆ ಇದರ ಉಪಯೋಗವನ್ನು ಸಾರ್ವಜನಿಕರು ಪಡೆಯುವಂತಾಗಬೇಕು ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ಮೂತ್ರಪಿಂಡ ಡಯಾಲಿಸಿಸ್‌ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು,ಈಗ ಎರಡು ಡಯಾಲಿಸಿಸ್‌ ಯಂತ್ರಗಳಿದ್ದು ಮುಂದಿನ ದಿನಗಳಲ್ಲಿ ಇನ್ನೊಂದು ಯಂತ್ರವನ್ನು ನೀಡಲಾಗುವುದು ಎಂದರು.2009 ರಲ್ಲಿ ಸುಮಾರು ಐದು ಕೋಟಿ ರೂ.ಗಳ ವೆಚ್ಚದಲ್ಲಿ ಆಸ್ಪತ್ರೆಯನ್ನು 100 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿದ್ದರೂ ಕೂಡ ಅಂದು ಆಸ್ಪತ್ರೆಯಲ್ಲಿ ವೈದ್ಯರ ,ಶೂಶ್ರುಕಿಯರ ಕೊರತೆ ಹಾಗೂ ಕೆಲವು ಸಮಸ್ಯೆಗಳಿಂದ ಅದರ ಉಪಯೋಗವಾಗದೇ ಸಾರ್ವಜನಿಕರು ತೊಂದರೆ ಅನುಭವಿಸುವಂತಾಯಿತು. ಆದರೆ ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಯಲ್ಲಿ ಆಡಳಿತ ವೈದ್ಯಾಧಿಕಾರಿ ಹಾಗೂ ಶಸ್ತ್ರ ಚಿಕಿತ್ಸಾ ತಜ್ಞ ಡಾ.ಶಂಕರಗೌಡ ಹಿರೇಗೌಡ್ರ ನೇತೃತ್ವದಲ್ಲಿ ನುರಿತ ವೈದ್ಯರ ತಂಡ ಕಾರ್ಯನಿರ್ವಹಿಸುತ್ತಿರುವುದರಿಂದ ತಾಲೂಕಿನ ಜನತೆಗೆ ಗುಣಮಟ್ಟದ ಆರೋಗ್ಯ ಸಿಗುವಂತಾಗಿದೆ ಎಂದು ಹೇಳಿದರು.
ಆಸ್ಪತ್ರೆಯಲ್ಲಿ ಇನ್ನೂ ವೈದ್ಯರು,ಶೂಶ್ರುಕಿಯರು ಸೇರಿದಂತೆ ಅನೇಕ ಹುದ್ದೆಗಳು ಖಾಲಿ ಇದ್ದು ಮುಂದಿನ ದಿನಗಳಲ್ಲಿ ಆರೋಗ್ಯ ಮಂತ್ರಿಗಳೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರವನ್ನು ಕಂಡು ಕೊಳ್ಳಲು ಪ್ರಯತ್ನಿಸಲಾಗುವುದು.ಆಸ್ಪತ್ರೆ ಕಟ್ಟಡ ಹಾಗೂ ವಸತಿಗೃಹಗಳು ಸೇರಿದಂತೆ ಇನ್ನೂ ಅನೇಕ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವ ಮೂಲಕ ಸಾರ್ವಜನಿಕರ ಆರೋಗ್ಯ ಸುಧಾರಣೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.ಪಟ್ಟಣದಲ್ಲಿ ಅನೇಕ ಕೊಳಚೆ ಪ್ರದೇಶಗಳಿದ್ದು ಅಲ್ಲಿನ ಜನರ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಆಯಾ ಪ್ರದೇಶಗಳಲ್ಲಿ ಕ್ಯಾಂಪ ಮಾಡುವ ಮೂಲಕ ಬಡ ಜನರ ಆರೋಗ್ಯ ಕಾಪಾಡುವಂತೆ ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಖಲಂದರ ಅಕ್ಕೂರ,ಉಪಾಧ್ಯಕ್ಷೆ ರಾಜೇಶ್ವರಿ ಬುಶೇಟ್ಟಿ. ಮುಖಂಡರಾದ ಮೋಹನ ಮೆಣಸಿನಕಾಯಿ, ಎಸ್‌.ಎಮ್‌.ಗಡೆಪ್ಪನವರ,ಜಿಲ್ಲಾ ಆರೋಗ್ಯ ಮತ್ತು ಕುಂಟುಬ ಕಲ್ಯಾಣಾಧಿಕಾರಿ ಪ್ರಭುದೇವ ಬಣಕಾರ, ತಾಲೂಕಾ ಆರೋಗ್ಯಧಾರಿ ಸತೀಶ ಎ ಆರ್‌, ಆಡಳಿತ ವೈದ್ಯಾಧಿಕಾರಿ ಶಂಕ್ರಗೌಡ ಹಿರೇಗೌಡ್ರ, ಪಿ ಎಲ್‌ ಪೂಜಾರ, ರಾಮಕೃಷ್ಣ ಘಾಟಗೆ, ಜಗದೀಶ ಹಾವಣಗಿ, ಪಿ ಆರ್‌ ಜಾಧವ, ರಾಘವೇಂದ್ರ ಚಿಕ್ಕನಕೊಪ್ಪ ಹಾಗೂ ಸಿಬ್ಬಂದಿಗಳು,ಸಾರ್ವಜನಿಕರು ಇದ್ದರು.

loading...