ಸಾಲಗಾರರಾದ ರೈತರಿಗೆ ಕಿರುಕುಳ ನೀಡುವವರ ವಿರುದ್ಧ ಕ್ರಮ

0
39

ಬೆಂಗಳೂರು: ಸಾಲಬಾಧೆಯಿಂದ ಬಳಲುತ್ತಿರುವ ರೈತರಿಗೆ, ದುರ್ಬಲ ವರ್ಗಫ಼್ದವರಿಗೆ ಬ್ಯಾಂಕ್ ಗಳು ಮತ್ತು ಲೇವಾದೇವಿದಾರರು ಕಿರುಕುಳ ನೀಡುವಂತಿಲ್ಲ ಎಂದು ಸರ್ಕಾರ ಸುತ್ತೋಲೆ ಹೊರಡಿಸಿ ಆದೇಶಿಸಿದೆ.
ಯಾವುದೇ ಬ್ಯಾಂಕ್ ಹಾಗು ಲೇವಾದೇವಿದಾರರು ಸಾಲಗಾರರಾದ ರೈತರಿಗೆ, ಬಡವರಿಗೆ ಕಿರುಕುಳ ನೀಡದಂತೆ ಕ್ರಮ ಜರುಗಿಸಬೇಕೆಂದು ರಾಜ್ಯ ಸರ್ಕಾರ ಎಲ್ಲಾ ಪ್ರಾದೇಶಿಕ ಆಯುಕ್ತರು, ವಲಯ್ಗಳ ಪೋಲೀಸ್ ಅಧಿಕಾರಿಗಳಿಗೆ ಸೂಚಿಸಿದೆ.
ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೂಚನೆಯಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಈ ಸುತ್ತೋಲೆ ಹೊರಡಿಸಿದ್ದಾರೆ.
ಕರ್ನಾಟಕ ಋಣಭಾರ ಪರಿಹಾರ ಮಸೂದೆ 2018 ಮಂಡನೆಗೆ ಸಿದ್ದವಾಗಿದೆ. ರಾಜ್ಯಫ಼್ದಲ್ಲಿನ ಸಣ್ಣ ರೈತರು, ಭೂರಹಿತ ಬಡ ರೈತ, ಕೃಷಿ ಕಾರ್ಮಿಕರ ಮತ್ತು ದುರ್ಬಲ ವರ್ಗದವರ ಋಣಭಾರ ಸಂಬಂಧಿ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಸರ್ಕಾರ ಈ ಮಸೂದೆ ತರಲು ಉದ್ದೇಶಿಸಿದೆ.
ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಈ ಮಸೂದೆಯ ವಿಚಾರ ಎಲ್ಲಾ ಮಾದ್ಯ್ಮಗಳಲ್ಲಿ ಬಂದಿದ್ದು ಇದೀಗ ಲೇವಾದೇವಿದಾರರು, ಬ್ಯಾಂಕ್ ಗಳು ತಮ್ಮಲ್ಲಿ ಸಾಲ ಪಡೆದ ಸಣ್ಣ ರೈತರು, ಹಿಡುವಳಿದಾರರು, ಕಾರ್ಮಿಒಕರ ಮೇಲೆ ಒತ್ತಡ ಹಾಕುತ್ತಿದೆ. ಇದನ್ನು ಗಮನಿಸಿದ ಸರ್ಕಾರ ಸಾಲಗಾರರ ಮೇಲೆ ಕಾನೂನುಬಾಹಿರ ಒತ್ತಡ ಹಾಕುವಂತಿಲ್ಲ, ದೌರ್ಜನ್ಯ ಎಸಗುವಂತಿಲ್ಲ ಎಂದು ಸೂಚಿಸಿದ್ದಲ್ಲದೆ ಅಂತಹಾ ಒತ್ತಡ, ದೌರ್ಜನ್ಯ ನಡೆಸಿದವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸುತ್ತೋಲೆಯಲ್ಲಿ ಹೇಳಿದೆ.

loading...