ಸಾಲ ಮನ್ನಾ ಮಾಡದಿದ್ದರೆ ಸರ್ಕಾರ ನಡೆಸಲು ಬಿಡುವದಿಲ್ಲ: ಲಮಾಣಿ

0
35

ಶಿರಹಟ್ಟಿ: ರೈತರ ಸಾಲ ಮನ್ನಾ ಮಾಡದಿದ್ದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ನಡೆಸಲು ಬಿಡುವದಿಲ್ಲ ಎಂದು ಬಿಜೆಪಿ ಶಾಸಕ ರಾಮಪ್ಪ ಲಮಾಣಿ ಇಂದಿಲ್ಲಿ ಎಚ್ಚರಿಸಿದರು.

ಕರ್ನಾಟಕ ಬಂದ ಕರೆ ಹಿನ್ನಲೆಯಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಯ್ದು ತಹಶೀಲದಾರ ಕಚೇರಿಯವರೆಗೆ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆ ವೇಳೆ ಪ್ರತಿಭಟನಾಕಾರರನ್ನುದ್ದೇಶಿಸಿ ಮತನಾಡಿದ ಅವರು. ರೈತರ ಸಾಲಮನ್ನಾ ಆಗುವವರೆಗೆ ಬಿಜೆಪಿ ವಿಧಾನಸೌಧದ ಒಳಗೂ ಮತ್ತು ವಿಧಾನಸೌಧದ ಹೊರಗೆ ನಿರಂತರವಾಗಿ ಹೋರಾಟ ನಡೆಸಲಿದೆ ಎಂದರು.
ಅಧಿಕಾರಕ್ಕೆ ಬಂದ 24 ಗಂಟೆಗಳೊಳಗೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವದಾಗಿ ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದ್ದ ಕುಮಾರಸ್ವಾಮಿ ಅವರು ಇಗ ತಮ್ಮ ಪಕ್ಷಕ್ಕೆ ಬಹುಮತ ದೊರೆತಿದ್ದರೆ ರೈತರ ಸಾಲ ಮನ್ನಾ ಮಡುತ್ತಿದೆ ಎಂದು ಹೇಳುವುದರ ಮೂಲಕ ರೈತರ ಸಾಲ ಮನ್ನಾ ಮಾಡಲು ಹಿಂದೆಟು ಹಾಕುತ್ತಿದ್ದಾರೆ ಎಂದರು.

ಹಿಂಭಾಗಲಿನಿಂದ ಅಧಿಕಾರಕ್ಕೆ ಬಂದ ಜೆಡಿಎಸ್ ರೈತ ವಿರೋಧಿ ಸರ್ಕಾರವಾಗಿದೆ ಎಂದು ಅರೋಪಿಸಿದರು. ಶಿರಹಟ್ಟಿ ತಾಲೂಕ ಬಿಜೆಪಿ ಅಧ್ಯಕ್ಷ ವಿರುಪಕ್ಷಪ್ಪ ಅಣ್ಣಿಗೇರಿ ಮಾತನಾಡಿ ಸರ್ಕಾರ ರೈತರ ಸಾಲ ಮನ್ನಾ ಮಾಡದೇ ಹೋದಲ್ಲಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದ್ಯಂತ ಹೊರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಕುಮಾರಸ್ವಾಮಿ ಅವರೇ ಖುರ್ಚಿ ಖಾಲಿ ಮಾಡಿ ಇಲ್ಲವೇ ರೈತರ ಸಾಲ ಮನ್ನಾ ಮಾಡಿ ಘೋಷಣೆಯೊಂದಿಗೆ ಮುಂಬರುವ ದಿನಗಳಲ್ಲಿ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಲಾಗುವುದು ಎಂದರು.
ಜಿಪಂ ಮಾಜಿ ಅಧ್ಯಕ್ಷ ವಿಶ್ವನಥ ಕಪ್ಪತ್ತನವರ, ಪಪಂ ಸದಸ್ಯ ನಗರಾಜ ಲಕ್ಕುಂಡಿ, ಗೂಳಪ್ಪ ಕರಿಗಾರ,ಜಿ ಆರ್ ಕುಲಕರ್ಣಿ. ರಾಮಣ್ಣ ಡಂಬಳ, ಯಲ್ಲಪ್ಪ ಇಂಗಳಗಿ, ಜಾನು ಲಮಾಣಿ, ನಿಂಬಣ್ಣ ಮಡಿವಾಳರ, ತಿಮ್ಮರೆಡ್ಡಿ ಮರಡ್ಡಿ ,ಮೊಹನ ಗುತ್ತೆಮ್ಮನವರ, ಕೊಟ್ರೆಶ ಸಜ್ಜನರ,ಡಿ ವಾಯ್ ಹುನಗುಂದ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

loading...